ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರದಲ್ಲಿ ಲಾಭ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಏಪ್ರಿಲ್ 2025, 22:30 IST
Last Updated 23 ಏಪ್ರಿಲ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇವರ ಕೃಪೆಯಿಂದ ಭಾಗ್ಯದ ಬಾಗಿಲು ತೆರೆಯುವುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ನಿಮಗೆ ಹೆಚ್ಚು ಆನಂದ ಸಿಗಬಹುದು. ಪುಸ್ತಕ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಾಗುವ ಸಂಭವವಿದೆ.
  • ವೃಷಭ
  • ಬಂಧುಗಳ ಆಗಮನ ಮನಸ್ಸಿಗೆ ಸಂತೋಷ ಕೊಡಲಿದೆ, ಆದರೆ ಇಂದಿನ ನಿಮ್ಮ ಯೋಜಿತ ಪೂರ್ವತಯಾರಿ ಕೆಲಸಗಳು ವಿಘ್ನಕ್ಕೆ ಬಲಿಯಾಗಬಹುದು. ಬಟ್ಟೆ ಹೊಲಿಯುವವರಿಗೆ ಬೇಡಿಕೆ ಗೆಚ್ಚಾಗುತ್ತದೆ.
  • ಮಿಥುನ
  • ಕುಟುಂಬದಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಲಿದೆ. ಧನಾಗಮನದಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುವುದು. ಖರ್ಚು ವೆಚ್ಚಗಳು ಸಮನಾಗಿರುತ್ತದೆ. ತಾಯಿಯಿಂದ ಉಡುಗೊರೆ ದೊರೆಯವ ಸಾಧ್ಯತೆಗಳಿದೆ.
  • ಕರ್ಕಾಟಕ
  • ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಪ್ರಗತಿಯ ಹಾದಿಯನ್ನು ಸ್ಪರ್ಶಿಸಲಿದ್ದೀರಿ. ನಿಮ್ಮ ಪ್ರತಿಭೆ ಸಾಮರ್ಥ್ಯ ಬೆಳಕಿಗೆ ಬರಲಿದೆ.
  • ಸಿಂಹ
  • ನಿಮ್ಮ ಸಮಯೋಚಿತ ನಡೆಯಿಂದ ಶತ್ರುಗಳು ನಿಮ್ಮನ್ನು ಭಯದಿಂದ ಕಾಣುತ್ತಾರೆ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ ಪ್ರಾಪ್ತಿಯಾಗಿ ಮನಸ್ಸಿಗೆ ಉಲ್ಲಾಸ ದೊರೆಯಲಿದೆ. ವಕೀಲರು ಖ್ಯಾತಿಯನ್ನು ಹೊಂದುವರು.
  • ಕನ್ಯಾ
  • ಗೃಹ ನಿರ್ಮಾಣದಂತಹ ಕಾರ್ಯಗಳು ಪೂರ್ಣವಾಗುತ್ತವೆ. ಕುಟುಂಬ ಸಮೇತ ತೀರ್ಥಯಾತ್ರೆಗೆ ತೆರಳುವ ಅವಕಾಶವಿದೆ. ಆರ್ಥಿಕ ವಿಷಯದ ಬರವಣಿಗೆಯ ವೃತ್ತಿಯವರು ಹೆಚ್ಚಿನ ಗಮನವಹಿಸುವುದು ಅಗತ್ಯ.
  • ತುಲಾ
  • ನಿಮ್ಮ ನಿಸ್ವಾರ್ಥ ಸೇವೆಯಿಂದಾಗಿ ಕಚೇರಿಯಲ್ಲಿ ನಿಮಗೆ ವಿಶೇಷ ಗೌರವ ದೊರೆಯಲಿದೆ. ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ವನಸ್ಪತಿ ಉದ್ಯಮಗಳಿಂದ ಹೆಚ್ಚಿನ ಲಾಭವಿರುವುದು.
  • ವೃಶ್ಚಿಕ
  • ಮನೆಯವರ ಸಹಾಯದಿಂದ ಹಿಂದಿನ ಹಣಕಾಸಿನ ತೊಂದರೆಗಳು ದೂರಾಗಿ ಈ ದಿನ ಹೊಸ ಯೋಜನೆಗೆ ಚಾಲನೆ ದೊರೆಯಲಿದೆ. ಮಗಳ ಮದುವೆಯ ವಿಚಾರದಲ್ಲಿ ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದುದು.
  • ಧನು
  • ಬಹಳ ದಿನಗಳಿಂದ ನೀವು ಅಂದುಕೊಂಡಂತೆ ಕೆಲಸದಲ್ಲಿ ಹೊಸ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ಈಶ್ವರನ ಕೃಪೆಯಿಂದ ಆರ್ಥಿಕ ಸ್ಥಿತಿಗತಿ ಇನ್ನಷ್ಟು ಉತ್ತಮಗೊಳ್ಳಲಿದೆ. ವಾಹನದ ಮೇಲೆ ಆಸೆಯಾಗುವುದು.
  • ಮಕರ
  • ಖಾಸಗಿ ಸಂಸ್ಥೆಗಳಲ್ಲಿ ಅಧಿಕ ಜವಾಬ್ದಾರಿಯು ನಿಮ್ಮ ಹೊಣೆಗಾರಿಕೆ ಯಾದ್ದರಿಂದ ಒತ್ತಡವೂ ಸಹ ಅಧಿಕವಾಗಿರುವುದು. ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿಯಾಗಲಿದೆ.
  • ಕುಂಭ
  • ಮುಂದಾಲೋಚನೆ ಇಲ್ಲದೆ ನಡೆಸಿದ ಕಾರ್ಯಗಳಿಂದ ನಷ್ಟಅನುಭವಿಸುವಂತಾಗಲಿದೆ. ಷೇರು ವ್ಯವಹಾರದಲ್ಲಿ ಲಾಭ ಇರುವುದು. ಈ ದಿನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುವೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರಲಿ.
  • ಮೀನ
  • ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡುಬರುವುದು. ಹೆಚ್ಚಿನ ಅಧ್ಯಯನಕ್ಕೆ ಇದು ಸಕಾಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ಶಾರದೆಯ ಆರಾಧನೆಯಿಂದ ಜ್ಞಾನ ವೃದ್ಧಿಯಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.