ADVERTISEMENT

ದಿನ ಭವಿಷ್ಯ: ತಪ್ಪುಗಳನ್ನು ಹುಡುಕುವವರ ಜತೆಯಲ್ಲಿಯೇ ಈ ದಿನ ಇರಬೇಕಾಗುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಜೂನ್ 2025, 23:26 IST
Last Updated 12 ಜೂನ್ 2025, 23:26 IST
   
ಮೇಷ
  • ಸದಾಕಾಲ ಪಕ್ಕದಲ್ಲಿಯೇ ಇರುವ ಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ, ಖಂಡಿತವಾಗಿ ಜಯಶಾಲಿಯಾಗುವಿರಿ. ದೈಹಿಕ ಶ್ರಮ ಜಾಸ್ತಿಯಾದರೂ ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
  • ವೃಷಭ
  • ಒಳಾಂಗಣ ವಿನ್ಯಾಸಕಾರರಿಗೆ ಅಧಿಕ ಬೇಡಿಕೆ ಮತ್ತು ವರಮಾನ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು. ಮಹಿಳೆಯರು ಆಭರಣ ಕೊಳ್ಳಲಿದ್ದಾರೆ.
  • ಮಿಥುನ
  • ತಪ್ಪುಗಳನ್ನು ಹುಡುಕುವವರ ಜತೆಯಲ್ಲಿಯೇ ಈ ದಿನ ಇರಬೇಕಾಗುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ಅಥವಾ ಸಂಪರ್ಕ ಮಾಧ್ಯಮದಲ್ಲಿ ಸೇವೆ ಸಲ್ಲಿಸುವವರಿಗೆ ಅಧಿಕ ಒತ್ತಡ.
  • ಕರ್ಕಾಟಕ
  • ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಆರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ಮಿತ್ರರೊಬ್ಬರು ಎಲ್ಲ ರೀತಿಯಲ್ಲಿಯೂ ಸಹಾಯ ಮಾಡಲಿದ್ದಾರೆ.
  • ಸಿಂಹ
  • ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಏರಿಳಿತದ ನಡುವಿನ ಜೀವನ ಹೊಸ ಅನುಭವವನ್ನು ನೀಡುವುದು. ಸಾಮಾಜಿಕವಾಗಿ ಹೆಸರು ಮಾಡುವ ಉದ್ದೇಶದಿಂದ ವಿಭಿನ್ನ ವಿಷಯಗಳಲ್ಲಿ ತೊಡಗಿಸಿಕೊಳ್ಳುವಿರಿ.
  • ಕನ್ಯಾ
  • ವಿಳಂಬವಾಗಿದ್ದ ಕಾರ್ಯಗಳು ಚುರುಕುಗೊಂಡು ಅನುಕೂಲ ಒದಗಿ ಬರಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇಕಾದ ಆರ್ಥಿಕ ವ್ಯವಸ್ಥೆಯು ಸಿಗುವುದು. ಅಧಿಕಾರಿಗಳ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗುವಿರಿ.
  • ತುಲಾ
  • ಸತ್ಕಾರ್ಯಗಳ ನಿರ್ವಹಣೆಗೆ ಸಹಕಾರ ಕೋರಿ ಬರುವವರಿಗೆ ನಿಮ್ಮಿಂದಾಗುವ ಸಹಾಯವನ್ನು ಮಾಡಿ ಪುಣ್ಯ ಸಂಪಾದಿಸುವಿರಿ. ಮಕ್ಕಳ ಓದಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲವು ಎಣಿಕೆಯಂತೆ ನಡೆಯುವುದು.
  • ವೃಶ್ಚಿಕ
  • ಸ್ವಂತ ಕೆಲಸಕ್ಕಾಗಿ ಹೊಸ ಅಧಿಕಾರಿಗಳನ್ನು ಭೇಟಿ ಮಾಡಲು ಇದು ಒಳ್ಳೆಯ ದಿನ. ಪ್ರಾಮಾಣಿಕತೆಯಿಂದ ಮೇಲಧಿಕಾರಿಗಳ ನಂಬಿಕೆ ಪಡೆಯುವಿರಿ. ಭೂತಕಾಲದ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು.
  • ಧನು
  • ಎಲ್ಲಾ ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು. ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗಲಿವೆ. ಮಾನವೀಯತೆ ಮುಖ್ಯ ಧ್ಯೇಯವಾಗಿರಲಿ.
  • ಮಕರ
  • ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿದಲ್ಲಿ ಉತ್ತಮ ಪರಿಹಾರ ದೊರೆಯುವುದು. ಹಿರಿಯರೊಂದಿಗೆ ಯಾತ್ರೆ ಕೈಗೊಳ್ಳುವುದರ ಪುಣ್ಯದಿಂದ ಕಾರ್ಯಾನುಕೂಲವಾಗುವುದು.
  • ಕುಂಭ
  • ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರುವುದು. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
  • ಮೀನ
  • ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಒಂದು ರೀತಿಯ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ನೀರಿನ ಬದಲಾವಣೆಯಿಂದ ಅನಾರೋಗ್ಯ ಎದುರಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.