ADVERTISEMENT

ದಿನ ಭವಿಷ್ಯ: ಈ ರಾಶಿಯವರು ಬಯಸಿದ್ದನ್ನು ಪಡೆಯುತ್ತೀರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಮೇ 2024, 22:30 IST
Last Updated 19 ಮೇ 2024, 22:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕ್ರೀಡಾಪಟುಗಳು ಛಲ ಬಿಡದೆ ಪರಿಶ್ರಮ ವಹಿಸಿದ್ದಕ್ಕಾಗಿ ಉತ್ತಮ ಅವಕಾಶಗಳೊಂದಿಗೆ ಉತ್ತಮ ಮಾರ್ಗದರ್ಶಕರು ದೊರೆತು ಜಯದ ಪಥದಲ್ಲಿ ನಡೆಯುವಿರಿ. ನ್ಯಾಯಾಲಯದ ವಿಚಾರಣೆಗಳಲ್ಲಿ ಜಯ ನಿಮ್ಮದಾಗಿರುತ್ತದೆ.
  • ವೃಷಭ
  • ಹಗಲು ರಾತ್ರಿ ಎಂದೆನ್ನದೆ  ಪಟ್ಟ ಶ್ರಮವು ಉತ್ತಮ ಫಲವನ್ನು ಶೀಘ್ರ  ನೀಡಲಿದೆ.  ಆಪ್ತರು  ಸಕಾಲಿಕ ನೆರವಿಗಾಗಿ  ಧನ್ಯವಾದ ತಿಳಿಸುವರು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ.
  • ಮಿಥುನ
  • ಹಿರಿಯ ವ್ಯಕ್ತಿಗಳ ಜೊತೆಗಿನ ಮಾತುಕತೆಯಿಂದಾಗಿ ಪಡೆದ ಮಾರ್ಗದರ್ಶನವು ಭೂಗೋಳ ಶಾಸ್ತ್ರಜ್ಞರಿಗೆ ಬಹಳ ಪ್ರಯೋಜನಕ್ಕೆ ಬರಲಿದೆ. ನವ ದಂಪತಿ ಪ್ರಯಾಣ ಮಾಡುವುದಿದ್ದರೆ ಬಹಳ ಮುಂಜಾಗ್ರತೆ ವಹಿಸಬೇಕು.
  • ಕರ್ಕಾಟಕ
  • ಹೂವಿನ ಗಿಡಗಳನ್ನು ಮಾರಾಟ ಮಾಡುವವರಿಗೆ ಹಣ ಸಂಪಾದನೆಯಾಗುತ್ತದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಕೃತಕ ಜಾಹೀರಾತುಗಳಿಗೆ ಮಾರುಹೋಗದಿರಿ.
  • ಸಿಂಹ
  • ಕಾರ್ಯಕ್ಷೇತ್ರದಲ್ಲಿ ಶಕ್ತಿಯುತವಾದ ಅಧಿಕಾರ ಸ್ಥಾಪಿಸಲು ಅನುಕೂಲಕರವಾದ ಸಮಯ ನಿರ್ಮಾಣವಾಗಲಿದೆ. ಕೆಲಸದಲ್ಲಿನ ಅಡೆತಡೆಗಳ ನಿವಾರಣೆಯಾಗಿ ಸಮಯ ಉಳಿತಾಯವಾಗಲಿದೆ.
  • ಕನ್ಯಾ
  • ಮನೆಯಲ್ಲಿ ನಡೆಯುವ ಶುಭಸಮಾರಂಭಕ್ಕೆ ಬಂಧುಗಳ ಸಹಕಾರ ದೊರೆಯಲಿದೆ. ಆಗು-ಹೋಗು ಅರಿತು ವ್ಯವಹಾರ ದಲ್ಲಿ ಮುಂದುವರಿಯಿರಿ. ಅನವಶ್ಯಕ ಖರ್ಚುಗಳು ಸಂಭವಿಸಬಹುದು.
  • ತುಲಾ
  • ಯಾರ ಪರವನ್ನು ವಹಿಸುವುದಿದ್ದರೂ ಸರಿಯಾದ ವಿಚಾರವನ್ನು ತಿಳಿ ಯದೆ ಮುಂದುವರಿಯಬೇಡಿ. ಜನತಾ ನಿರ್ಧಾರವನ್ನು ಅರಿಯದೆ ರಾಜಕೀಯ ನಾಯಕರು ಇಟ್ಟ ತಪ್ಪು ಹೆಜ್ಜೆಯು ನಿಂದನೆಗೊಳಗಾಗುವ ಸಾಧ್ಯತೆಗಳಿವೆ.
  • ವೃಶ್ಚಿಕ
  • ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶಕರ ಸಲಹೆ ಪಡೆದು ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿರಿ. ಶಸ್ತ್ರವೈದ್ಯರಿಗೆ ಸಂಬಂಧಿಸಿದಂತೆ ಸೌಲಭ್ಯಗಳು ಹೆಚ್ಚಲಿವೆ.
  • ಧನು
  • ಪಿತ್ತದೋಷದಿಂದ ನಾನಾರೀತಿಯ ಕಾಯಿಲೆಗೆ ಒಳಗಾದವರು ಆಯು ರ್ವೇದದ ಮೊರೆಹೋಗುವುದು ಸೂಕ್ತಕರ. ರಾಜಕೀಯ ವರ್ಗದವರು ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
  • ಮಕರ
  • ಹಿಂದಿನ ಸೂತ್ರಧಾರನು ನಡೆಸುತ್ತಿರುವ ಕೈವಾಡವು ಕಷ್ಟವಾಗುತ್ತಿದ್ದರೂ ಏನೂ ಮಾಡದ ಪರಿಸ್ಥಿತಿ ಎದುರಾಗುತ್ತದೆ. ಹಿಂದಿನ ಕುಟುಂಬದಲ್ಲಿನ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿದೆ.
  • ಕುಂಭ
  • ಪಿತ್ರಾರ್ಜಿತ ಆಸ್ತಿಗಾಗಿ ನಡೆಯುತ್ತಿದ್ದ ವಾದವಿವಾದಗಳು ಎಲ್ಲರಿಗೂ ಸರಿಯಾಗುವ ರೀತಿಯಲ್ಲಿ ಕೊನೆಗೊಂಡು  ಬಯಸಿದ್ದನ್ನು ಪಡೆಯುತ್ತೀರಿ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ.
  • ಮೀನ
  • ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತವೆನಿಸಲಿದೆ. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.