ADVERTISEMENT

ದಿನ ಭವಿಷ್ಯ: ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಮೇ 2024, 22:30 IST
Last Updated 20 ಮೇ 2024, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಜೀವನದ ಬಗ್ಗೆ ಉತ್ಸಾಹ ತಾಳುವಿರಿ. ಸಂಗೀತಗಾರರಿಗೆ ಹಾಗೂ ನೃತ್ಯ ಕಲೆಗಳಿಗೆ ಪ್ರಾಧಾನ್ಯ ದೊರಕುವುದು. ಸ್ವಸಾಮರ್ಥ್ಯದಿಂದ ಆಗುವ ಕೆಲಸಗಳಿಗೆ ಇತರರ ಸಹಾಯವನ್ನು ಅಪೇಕ್ಷಿಸ ಬೇಡಿ.
  • ವೃಷಭ
  • ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಪರಿಣಾಮ ಬೀರುವ ಸಾಧ್ಯತೆ ಇದೆ. ದಿನಚರಿಯಲ್ಲಿ ಕೋಪ ಹಾಗೂ ಆಕ್ರಮಣಶೀಲತೆ ಗೋಚರವಾಗಬಹುದು.
  • ಮಿಥುನ
  • ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿಗಳನ್ನು ಕಾಣಲು, ಅವರಿಂದ ಸಹಾಯ ಪಡೆಯಲು ದಿನವಿಡೀ ಓಡಾಟ ನಡೆಸುವಿರಿ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಿ. ನೆರೆಯವರ ಸಂಬಂಧಗಳು ಸುಧಾರಿಸುವುದು.
  • ಕರ್ಕಾಟಕ
  • ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು. ಉದ್ಯೋಗದ ಗೌಪ್ಯತೆಯನ್ನು ಬಿಟ್ಟುಕೊಡುವುದು ಸರಿಯಲ್ಲ.
  • ಸಿಂಹ
  • ಕುಟುಂಬದ ವ್ಯಕ್ತಿಗಳ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ತಿಳಿದು ಅದರಂತೆ ಬದುಕುವುದು ಸರ್ವಕ್ಷೇಮ. ಮಾಡುವ ಕೆಲಸದಿಂದಾಗಿ ಗುಂಪಿನಲ್ಲಿ ಗುರುತಿಸುವಂಥ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ.
  • ಕನ್ಯಾ
  • ಹವಾಮಾನದಲ್ಲಿ ಆಗುವ ಬದಲಾವಣೆ ಆರೋಗ್ಯದ ಮೇಲೆ ಸಂಪೂರ್ಣ ಪ್ರಭಾವ ಬೀರಲಿದೆ. ನಿರ್ದಿಷ್ಟ ಕೆಲಸಗಳನ್ನು ನಿರ್ದಿಷ್ಟವಾದ ಸಮಯದಲ್ಲಿ ಮಾಡಿ ಮುಗಿಸಿಕೊಳ್ಳುವಿರಿ. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
  • ತುಲಾ
  • ಎರಡನೇ ದರ್ಜೆಯ ನೌಕರರಿಗೆ ವರ್ಗಾವಣೆಯಿಂದ ಆರ್ಥಿಕವಾಗಿ ಅನುಕೂಲವಾಗುವುದು. ಲಾಭದಾಯಕವೆನಿಸುವ ವ್ಯಕ್ತಿಗಳೊಂದಿಗೆ ಮಾತ್ರ ಮಾತನಾಡುವುದು ಸರಿಯಲ್ಲ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ.
  • ವೃಶ್ಚಿಕ
  • ತತ್ವ ಆದರ್ಶಗಳ ಜತೆಗೆ ಹಿರಿಯರ ಅನುಭವ ಸಲಹೆಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಿರಿ. ಒಡನಾಡಿಗಳ ಪ್ರೀತಿ, ವಿಶ್ವಾಸ, ಸಹಕಾರದಿಂದ ಕಾರ್ಯವನ್ನು ಸುಲಭದಲ್ಲಿ ಸಾಧಿಸುವಿರಿ. ರಾಜಕಾರಣಿಗಳಿಗೆ ಶುಭ ಸುದ್ದಿ.
  • ಧನು
  • ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ.
  • ಮಕರ
  • ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ.
  • ಕುಂಭ
  • :ಆರಂಭಿಸಿದ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ದಿನಾಂತ್ಯದಲ್ಲಿ ಪೂರ್ಣಗೊಳ್ಳಲಿವೆ. ರಾಜಕೀಯ ವ್ಯಕ್ತಿಗಳು ಆತ್ಮವಂಚನೆಯ ಬಗ್ಗೆ ವಿಮರ್ಶಿಸಿಕೊಳ್ಳಿರಿ. ಕೈಗಾರಿಕೆ ನಡೆಸುವವರಿಗೆ ಖರ್ಚು ಸಂಭವಿಸಲಿದೆ.
  • ಮೀನ
  • ಶಿಕ್ಷಕ ವೃತ್ತಿಯನ್ನು ಮಾಡುವವರಿಗೆ ಬೋಧನಾ ಕೆಲಸಕ್ಕಿಂತ ಮುಖ್ಯ ವಾಗಿ ದಾಖಲೆಯ ನಿರ್ವಹಣೆ ತಲೆಬಿಸಿ ಎನಿಸಲಿದೆ. ಮನೆಯ ಆಗು-ಹೋಗುಗಳನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.