ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಮೇ 2024, 23:30 IST
Last Updated 22 ಮೇ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪರ ಊರಿಗೆ ಕಳುಹಿಸುವ ವಿಚಾರವೇ ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ. ಕೆಲಸಗಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಅನಿವಾರ್ಯ. ಮಾನಸಿಕ ನೆಮ್ಮದಿ ಇರುವುದು.
  • ವೃಷಭ
  • ಆರ್ಥಿಕ ಸಮಸ್ಯೆ ಎದುರಾಗಿ ಸಹೋದರರ ಅಥವಾ ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯ. ಸೋದರ ಮಾವನ ಮಾತನ್ನು ಕೇಳಿ. ದೇಹದಲ್ಲಿನ ಅಧಿಕ ಉಷ್ಣಾಂಶದಿಂದ ದಂತವ್ಯಾಧಿ ಸಂಭವಿಸಬಹುದು.
  • ಮಿಥುನ
  • ಪ್ರಯಾಣದ ಪರಿಣಾಮ ದೇಹಾಯಾಸ ಹಾಗೂ ನೋವನ್ನು ಅನುಭವಿಸುವಿರಿ. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಬಂಗಾರದ ಮೇಲಿನ ಧನ ಹೂಡಿಕೆಯಲ್ಲಿ ಲಾಭ ಆಗುವುದು.
  • ಕರ್ಕಾಟಕ
  • ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ನೆರವಿಗೆ ನಿಲ್ಲುವರು. ದ್ವಿಚಕ್ರ ವಾಹನಗಳ ಮಾರಾಟಗಾರರು ಜೋರಿನ ವಹಿವಾಟು ನಡೆಸುವರು. ನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.
  • ಸಿಂಹ
  • ಐಹಿಕ ಸುಖಗಳನ್ನು ಆದಷ್ಟು ಬಿಟ್ಟುಬಿಡುವ ಮನಸ್ಥಿತಿ ಹಿರಿಯ ನಾಗರಿಕರಲ್ಲಿ ಉಂಟಾಗುತ್ತದೆ. ಸಂಧಾನ ಅಥವಾ ಮಧ್ಯಸ್ಥಿಕೆ ವಹಿಸುವಂತಹ ಕೆಲಸಗಳನ್ನು ಮಾಡುವಿರಿ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ.
  • ಕನ್ಯಾ
  • ಉತ್ತಮ ಕೆಲಸ ನಿರ್ವಹಣೆಯಿಂದ ಬಡ್ತಿಯ ವಿಚಾರ ಸುಳಿದಾಡಿ  ಸಹೋದ್ಯೋಗಿಗಳ ಈರ್ಷ್ಯೆಗೆ ಕಾರಣವಾಗುತ್ತದೆ. ಬಾಲ ಕಲಾವಿದರಪ್ರದರ್ಶನಗಳು ಉತ್ತಮ ಹೆಸರನ್ನು ಗಳಿಸಿಕೊಡುವುದು.
  • ತುಲಾ
  • ಜೀವನದಲ್ಲಿ ಹೊಸ ರೀತಿಯ ಚಲನೆ ಇಲ್ಲದೆ ಬಂದ ಬೇಸರವು ದಿನಚರಿಯ ಬದಲಾವಣೆಯಿಂದ ನಿವಾರಣೆಯಾಗಬಹುದು. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಿರಿ.
  • ವೃಶ್ಚಿಕ
  • ವಾಸಸ್ಥಾನದ ಬದಲಾವಣೆಯನ್ನು ಬಯಸಿದ ನಿಮಗೆ ಇಂದು ಹರ್ಷದ ಸಮಯ. ಬುದ್ಧಿವಂತಿಕೆಯನ್ನು ಉಪಯೋಗಿಸಿ  ಗ್ರಾಹಕರಲ್ಲಿ ವ್ಯವಹರಿಸಿದರೆ ಲಾಭದ ದಿನವಾಗುತ್ತದೆ.
  • ಧನು
  • ಪಾರಮಾರ್ಥಿಕವಾಗಿ ಸಾಧನೆಗಳೆಷ್ಟೇ ಇದ್ದರೂ ಸಮಾಜದಲ್ಲಿ ಬದುಕುವಾಗ ಲೌಕಿಕ ಜ್ಞಾನದ ಅಗತ್ಯ ಇದ್ದೇ ಇರಬೇಕೆಂಬುವುದನ್ನು ಸ್ಮರಿಸಿ. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು.
  • ಮಕರ
  • ಸ್ನೇಹಿತನ ಕೆಲವು ಅನಿರೀಕ್ಷಿತ ನಡೆಗಳನ್ನು ಗುರುತಿಸಿ ಆತನ ಮಾನಸಿಕ ಖಿನ್ನತೆಯನ್ನು ಬೆಳಕಿಗೆ ತರುವಂಥ ಕೆಲಸ ಮಾಡುವ ಸಾಧ್ಯತೆ ಇದೆ. ಮನಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಉತ್ತಮ.
  • ಕುಂಭ
  • ಚಾರಣಿಗರಿಗೆ ಬಯಸಿದ ಸ್ಥಾನಕ್ಕೆ ತೆರಳುವ ಅವಕಾಶ ಸಿಗದೆ ಬಹಳ ಬೇಸರವಾಗುತ್ತದೆ. ವದಂತಿಗಳಿಗೆ ಕಿವಿಗೊಡದೆ  ಕೆಲಸವನ್ನು ನೀವು ಮುಂದುವರಿಸಿಕೊಂಡು ಹೋಗಿ. 
  • ಮೀನ
  • ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಹೋಗಿ ಅದರಿಂದ ಅಪಮಾನಕ್ಕೊಳಗಾಗುವ ಸಾಧ್ಯತೆ ಇದೆ. ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ  ರಕ್ಷಿಸಲಿದೆ. ವಿವಾಹದಂತಹ ಶುಭಕಾರ್ಯಗಳ ನಿರೀಕ್ಷೆ ಮಾಡಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.