ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಮೇ 2024, 22:30 IST
Last Updated 23 ಮೇ 2024, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹೊರಗುತ್ತಿಗೆ ವ್ಯವಹಾರಗಳಲ್ಲಿ ಶ್ರಮ, ಒತ್ತಡ ಹೆಚ್ಚಲಿದೆ ಹಾಗೂ ಅವುಗಳಿಂದ ವರಮಾನ ಹೆಚ್ಚಲಿದೆ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಇಂದು ನಿಮಗೆ ಕಠಿಣ ದಿನವಾಗಿರುತ್ತದೆ.
  • ವೃಷಭ
  • ಯಾರಾದರೂ ಆತ್ಮಹತ್ಯೆಯ ಪ್ರಯತ್ನದಲ್ಲಿದ್ದರೆ  ನಿಮ್ಮಿಂದ ತಡೆಯಲು ಸಾಧ್ಯ. ನಿಮ್ಮ ದೌರ್ಬಲ್ಯವನ್ನು ನೀವಾಗಿಯೇ ಇತರರ ಮುಂದೆ ಪ್ರದರ್ಶಿಸಿಕಷ್ಟಕ್ಕೊಳಗಾಗಬೇಡಿ. ಕೃಷ್ಣನನ್ನು ಸ್ಮರಿಸುವುದರಿಂದ ಸತ್ಫಲ ಸಿಗಲಿದೆ.
  • ಮಿಥುನ
  • ಬರವಣಿಗೆಯಿಂದಾಗಿ ಜೀವನವನ್ನು ನಡೆಸುತ್ತಿರುವವರು ವಿವಾದಾತ್ಮಕ ಬರಹಗಳನ್ನು ಕೈಗೆತ್ತಿಕೊಳ್ಳದಿರಿ. ಇಂಧನ ವ್ಯಾಪಾರಸ್ಥರಿಗೆ ಬಹಳಷ್ಟು ಬೇಡಿಕೆ ಹೆಚ್ಚಲಿದೆ. ಸಂಗಾತಿಯೊಂದಿಗೆ ವಿರುದ್ಧ ಅಭಿಪ್ರಾಯ ಬೇಡ.
  • ಕರ್ಕಾಟಕ
  • ನಿಮ್ಮ ಮುಂದಿನ ಪೀಳಿಗೆಯವರಿಗೆ ನಿಮ್ಮ ಪೀಳಿಗೆಯ ವಿಷಯವನ್ನು ಸರಿಯಾಗಿ ತಿಳಿಸದೆ ಇದ್ದಲ್ಲಿ ಅವರು ಪದ್ಧತಿಗಳನ್ನು ಮುಂದುವರೆಸಲು ಕಷ್ಟಸಾಧ್ಯ ವಾಗುತ್ತದೆ. ರೈತಾಪಿ ವರ್ಗದವರ ಕೆಲಸಗಳು ಸರಾಗವಾಗಿ ನೆರವೇರುವುದು.
  • ಸಿಂಹ
  • ಪುರುಷ ಪ್ರಧಾನ ಕುಟುಂಬದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ನಿಮ್ಮ ಗೌರವವು ತೀರ ಕಡಿಮೆಯಾದಂತೆ ಅನ್ನಿಸಬಹುದು. ಕೃತಕವಾದ ನಗುವಿನ ಮುಖವಾಡವು ಇಂದು ಕಳಚುವ ಸಾಧ್ಯತೆ ಇದೆ.
  • ಕನ್ಯಾ
  • ಉಪಯುಕ್ತ ಮಾಹಿತಿಗಳನ್ನು ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುವುದರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಸಾಮರಸ್ಯದ ಬದುಕನ್ನು ಮಕ್ಕಳಿಗೆ ಮನವರಿಕೆ ಮಾಡದ ಹೊರತು ಕುಟುಂಬದ ಕಲಹಗಳಿಗೆ ಇತ್ಯರ್ಥವಿಲ್ಲ.
  • ತುಲಾ
  • ಕರಗತವಾಗಿರುವ ಕೆಲಸವನ್ನೇ ಇಂದು ನಿಮಗೆ ಮಾಡಲು ಹೇಳಿದಾಗ ಗಡಿಬಿಡಿಯ ಕಾರಣವಾಗಿ ವ್ಯತ್ಯಾಸಗಳಾಗಬಹುದು. ಮನೆ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಹಳೆ ನೆನಪನ್ನು ಮರುಕಳಿಸುವಂತಹ ವಸ್ತುಗಳು ಲಭ್ಯವಾಗುತ್ತವೆ.
  • ವೃಶ್ಚಿಕ
  • ಸುಖಕರವಾದ ಜೀವನವನ್ನು ನಡೆಸುತ್ತಿರುವಾಗ ಸಣ್ಣ ಪುಟ್ಟ ಕಷ್ಟಗಳು ಬಂದದ್ದೇ ಹೆಚ್ಚಾಗಿ ಕಾಣಬಹುದು. ಮನೋನಿಯಂತ್ರಣದಿಂದಾಗಿ ಮನಸ್ಸಿನ ಅಸಮಾಧಾನಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
  • ಧನು
  • ಅಪರಾತ್ರಿಯ ವೇಳೆ ಸಂಚರಿಸುವಾಗ ನಿಶಾಚರಿಗಳಿಂದ ತೊಂದರೆ ಆಗುವ ಸಾಧ್ಯತೆಗಳು ಇವೆ. ನಿಮ್ಮ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳಬೇಡಿ. ದುರುಪಯೋಗಗೊಳ್ಳಬಹುದು.
  • ಮಕರ
  • ಉನ್ನತ ವ್ಯಾಸಂಗದ ವಿಚಾರದಲ್ಲಿ ನಿಮ್ಮ ನಿಲುವನ್ನು ನಿಮ್ಮ ನಿಕಟವರ್ತಿ ಉಪಾಧ್ಯಾಯರಲ್ಲಿ ತಿಳಿಸಿ ಅವರ ಅಭಿಪ್ರಾಯವನ್ನು ಪಡೆದುಕೊಳ್ಳಿ. ಸ್ವತ್ತು ಕೊಳ್ಳುವ ವಿಚಾರದಲ್ಲಿ ಕಾನೂನಿನ ಸಲಹೆ ಅವಶ್ಯವಾಗಿ ಪಡೆಯಿರಿ.
  • ಕುಂಭ
  • ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಬೇರೊಬ್ಬರ ನಿತ್ಯ ಚಟುವಟಿಕೆಗಳು ನಿಮ್ಮ ಕಲ್ಪನೆಯ ವಿರುದ್ಧ ರೀತಿಯಲ್ಲಿರುವುದನ್ನು ಕಂಡು ಆಶ್ಚರ್ಯ ಪಡುವಿರಿ. ಭಗವಂತನ ಕೆಲವು ಮುನ್ಸೂಚನೆಗಳನ್ನು ಪರಾಮರ್ಶಿಸಿ.
  • ಮೀನ
  • ನೀವು ಶಿಕ್ಷಕರಾಗಿದ್ದರೆ ಗಿಳಿ ಪಾಠದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಅನ್ನ ಸಂತರ್ಪಣೆಯನ್ನು ಮಾಡುವುದರಿಂದ ಸಂತೃಪ್ತಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.