ADVERTISEMENT

ದಿನ ಭವಿಷ್ಯ: ಈ ರಾಶಿಯವರ ಮನಸ್ಥಿತಿಯ ಮೇಲೆ ಕೆಟ್ಟ ಆಲೋಚನೆಗಳು ಪರಿಣಾಮ ಬೀರಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಮೇ 2024, 22:30 IST
Last Updated 24 ಮೇ 2024, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೃಪಣತೆಯನ್ನು ಹೆಚ್ಚು ಪ್ರದರ್ಶಿಸಿ ಮನೆಯ ಸಾಮಗ್ರಿಗಳನ್ನು ತಂದು ಹಾಕುವಲ್ಲಿ ಕಡಿಮೆ ಮಾಡಿ ಅಸಮಾಧಾನಕ್ಕೆ ಕಾರಣವಾಗಬೇಡಿ. ಬಾಲ್ಯದ ಕೆಲವು ಅಪಘಾತಗಳ ನೋವು ಮರುಕಳಿಸುವ ಸಾಧ್ಯತೆ ಇದೆ.
  • ವೃಷಭ
  • ಶೀಘ್ರ  ಕಲಿಕಾ ಸಾಮರ್ಥ್ಯವು ಇತರರ ಹುಬ್ಬನ್ನು ಮೇಲೆ ಮಾಡುವಂತೆ ಮಾಡುತ್ತದೆ. ಬೇಳೆ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದರ ಮೂಲಕ  ಉಂಟಾಗಿರುವ ನಿಶ್ಶಕ್ತಿಯನ್ನು ನಿವಾರಿಸಿಕೊಳ್ಳಬಹುದು.
  • ಮಿಥುನ
  • ಉಳಿತಾಯದ ಹೆಸರಿನಲ್ಲಿ ದೊಡ್ಡ ದೊಡ್ಡ ಮೇಳಗಳಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ. ಸರಿ ತಪ್ಪು ಹೇಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ತೈಲ ವ್ಯಾಪಾರಗಳಿಂದ ಲಾಭ.
  • ಕರ್ಕಾಟಕ
  • ಕಂಕಣ ಭಾಗ್ಯ ನಿಮ್ಮನ್ನರಸಿ ಬಂದಾಗ ನಿರಾಕರಿಸುವಂಥ ಮೂರ್ಖತನದ ಕೆಲಸಗಳನ್ನು ಮಾಡಬೇಡಿ. ಪರಿಶುದ್ಧತೆ ಅರಸಿ ಮಾಡಿದ ಸಂಶೋಧನೆ ಪ್ರಸಿದ್ಧಿ ಪಡೆಯುತ್ತದೆ. 
  • ಸಿಂಹ
  • ಭವಿಷ್ಯವನ್ನು ಗ್ರಹಿಸುವ ವಿಶೇಷ ಗುಣವನ್ನು ಮಿತ್ರರೆದುರು ಪ್ರದರ್ಶಿಸಿದಾಗ ಅವರು ಅವಕ್ಕಾಗುವ ಸಂಭವವಿದೆ. ಸಹೋದರನ ಕೆಲವು ಅಹಿತಕರ ನಡವಳಿಕೆಗಳು ಅಪಮಾನ ಆದಂತೆ ಆಗಬಹುದು.
  • ಕನ್ಯಾ
  • ಪ್ರಾಚೀನ ಕಾಲದಿಂದ  ಪೂರ್ವಿಕರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಕೈಬಿಡುವ ಯೋಚನೆ ಮಾಡಬೇಡಿ. ಸಂಗೀತ ಹಾಗೂ ಭರತನಾಟ್ಯದಲ್ಲಿ ಆಸಕ್ತಿ ಹೆಚ್ಚಾಗಬಹುದು.
  • ತುಲಾ
  • ಸ್ಟಾರ್ಟ್‌ ಅಪ್‌ಗಳನ್ನು ಪ್ರಾರಂಭ ಮಾಡಬೇಕು ಎಂದು ಯೋಜನೆ ಹೊಂದಿರುವವರು ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ. ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿ ಚಾಣಾಕ್ಷತೆ  ಮೆರೆಯುವಿರಿ.
  • ವೃಶ್ಚಿಕ
  • ಹಠಮಾರಿತನದಿಂದ ಮಕ್ಕಳ ಪ್ರತಿ ಹೆಜ್ಜೆಗೂ ವಿವಿಧ ಕಾರಣಗಳನ್ನು ನೀಡಿ ಅವರನ್ನು ಅಸಮಧಾನಪಡಿಸಲು ಹೋಗಬೇಡಿ. ನಿಮ್ಮ ಇಷ್ಟದ ದೇವಾಲಯ ಅಥವಾ ಮನೆದೇವರ ಸ್ಥಾನಗಳಿಗೆ ಭೇಟಿ ಕೊಡುವ ಯೋಗವಿದೆ.
  • ಧನು
  • ಕಾರ್ಯವನ್ನು ಶುರು ಮಾಡಿದ ನಂತರ ಪದೇ ಪದೇ ನಿಲ್ಲಿಸುವಂತಹ ಸನ್ನಿವೇಶಗಳು ಎದುರಾಗುತ್ತವೆ. ಉಪನ್ಯಾಸಕಲೆಯನ್ನು ಹೊಂದಿದವರಿಗೆ ಉತ್ತಮ ವೇದಿಕೆ ಪ್ರಾಪ್ತಿಯಾಗುವುದು.
  • ಮಕರ
  • ವೈವಾಹಿಕ ಜೀವನದ ಆರಂಭದಲ್ಲಿರುವವರು ಧೈರ್ಯದಿಂದ ಎಲ್ಲವನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.  ನಿಲುವಿನಲ್ಲಿ ಆದಷ್ಟು ಸ್ಥಿರವಾಗಿರುವಂಥ ಯೋಚನೆ  ಮಾಡಿ. ಶುಭ ಸುದ್ದಿ ಕೇಳುವಿರಿ.
  • ಕುಂಭ
  • ಬಂಗಾರದ ಬೆಲೆಯ ಹಾವು –ಏಣಿ ಆಟವು  ಒಂದು ರೀತಿಯ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಮನಸ್ಸು ಕೆಟ್ಟ ಆಲೋಚನೆ ಹಾಗೂ ವಂಚನೆ ಮಾಡದಂತೆ ತಡೆಯೊಡ್ಡಿ.
  • ಮೀನ
  • ಸಂಗಾತಿಯೊಂದಿಗಿನ ಮುನಿಸು ತಾಳ್ಮೆಯಿಂದ ಕಾದರೆ ಸರಿಹೋಗುತ್ತದೆ. ಉತ್ತಮ ಮಾತಿನ ಕಲೆಯು ನಿಮ್ಮ ಬೆಂಬಲಕ್ಕೆ ಸದಾ ಇದ್ದೇ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.