ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು ಮೂಡಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕುಟುಂಬದ ಬಗ್ಗೆ ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ, ದೇವರ ದರ್ಶನ ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯವಾಗುತ್ತದೆ.
  • ವೃಷಭ
  • ಜನರಿಂದ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮರ ಹತ್ತಿ ಕೆಲಸ ಮಾಡುವವರು, ಎತ್ತರದಲ್ಲಿ ಕೆಲಸ ನಿರ್ವಹಿಸುವವರು ಇಂದು ಹೆಚ್ಚಿನ ಜಾಗ್ರತೆ ವಹಿಸಿ.
  • ಮಿಥುನ
  • ಕೆಲಸಕ್ಕಾಗಿ ಕುಟುಂಬದವರನ್ನು ಬಿಟ್ಟು ವಿದೇಶಕ್ಕೆ ಅಥವಾ ಪರಸ್ಥಳಕ್ಕೆ ಹೋಗುವುದು ಅನಿವಾರ್ಯವಾಗಲಿದೆ. ಆಹಾರ ಪಥ್ಯದ ವಿಚಾರದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕಷ್ಟಕರವೆನಿಸಲಿದೆ.
  • ಕರ್ಕಾಟಕ
  • ನಿಯಮಿತವಾದ ಯೋಗಾಸನ ಹಾಗೂ ಪ್ರಾಣಾಯಾಮದ ಅಭ್ಯಾಸದಿಂದಾಗಿ ಈ ದಿನ ಲವಲವಿಕೆಯಿಂದಿರುವಿರಿ. ನಿರ್ಜಲೀಕರಣದಿಂದ ನಿಮ್ಮ ಚರ್ಮವು ಸುಕ್ಕುಗಟ್ಟಿದಂತಾಗಬಹುದು, ಎಚ್ಚರವಹಿಸಿರಿ.
  • ಸಿಂಹ
  • ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗದಿರುವುದು ನಿಮ್ಮ ಮನಸ್ಸಿಗೆ ನೋವುಂಟುಮಾಡಬಹುದು. ಸುಸ್ಥಿರವಾಗಿರುವ ನಿಮ್ಮ ಆಸ್ತಿಯ ಮೇಲೆ ಇತರರ ಕಣ್ಣು ಬೀಳದಂತೆ ಎಚ್ಚರವಹಿಸುವುದು ಅಗತ್ಯ.
  • ಕನ್ಯಾ
  • ಮಕ್ಕಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯುವುದು. ತಂದೆ-ತಾಯಿಯ ಆತ್ಮೀಯತೆಯ ಕೆಲ ಬುದ್ಧಿ ಮಾತುಗಳನ್ನು ತಪ್ಪಾಗಿಅರ್ಥೈಸಿಕೊಳ್ಳುವುದು ಸರಿಯಲ್ಲ. ಹಿರಿಯರನ್ನು ಗೌರವಿಸಿ.
  • ತುಲಾ
  • ನಿಮ್ಮ ಆದರ್ಶಗಳನ್ನೆ ದರ್ಪಣದಂತೆ ಅನುಸರಿಸುತ್ತಿರುವ ಸಂತತಿಯನ್ನು ಕಂಡು ಹೆಮ್ಮೆ ಎನಿಸುತ್ತದೆ. ಬಟ್ಟೆ ಅಂಗಡಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರಕಿ ಸಂತಸ ಹೊಂದುವಿರಿ.
  • ವೃಶ್ಚಿಕ
  • ಸಂಬಂಧಿಕರ ಅಥವಾ ಅಕ್ಕಪಕ್ಕದವರ ಕೆಲವು ಮಾತುಗಳು ನಿಮ್ಮ ದಾಂಪತ್ಯದಲ್ಲಿ ಬಿರುಕನ್ನು ಮೂಡಿಸಲಿದೆ. ಲೇವಾದೇವಿ ವ್ಯವಹಾರದವರಿಗೆ ಸಾಲ ವಸೂಲಿ ಕಾರ್ಯಕ್ರಮಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತವೆ.
  • ಧನು
  • ವಿದ್ಯಾರ್ಥಿಗಳು ನಿಮ್ಮ ಹಟ ಹಾಗು ಸೋಂಬೇರಿತನವನ್ನು ಬಿಟ್ಟು ಅಧ್ಯಯನವನ್ನು ಮಾಡಿದರೆ ಶ್ರೇಯಸ್ಸು ಸಾಧ್ಯ. ಅಪರಿಚಿತರಿಂದ ಅನಿರೀಕ್ಷಿತ ಉಡುಗೊರೆ ದೊರೆಯುವ ಸಂಭವವಿದೆ.
  • ಮಕರ
  • ನಿಮ್ಮ ಸಂತೋಷವನ್ನು ಹೆಚ್ಚಿಸಲು ನಿಮ್ಮ ಸೋದರ ಸಂಬಂಧಿಗಳು ವಿಶೇಷ ಪ್ರಯತ್ನ ಮಾಡುವರು. ನಿಮಗೆ ಎಷ್ಟೇ ಒತ್ತಡವಿದ್ದರು ಸಹ ಮುಖದಲ್ಲಿನ ನಗುವು ಮಾಸದೇ ಇರಲಿ. ವಿಷ ಅನಿಲದ ಭೀತಿ ಇರಬಹುದು.
  • ಕುಂಭ
  • ಕುಟುಂಬದ ಹಿರಿಯರ ಮುಖದರ್ಶನ ಮತ್ತು ಆಶೀರ್ವಾದದಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ನಿಮ್ಮ ಅತಿಯಾದ ನಿರ್ಲಕ್ಷ್ಯತನದ ಬುದ್ದಿಯು ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
  • ಮೀನ
  • ನಿರಂತರವಾಗಿ ನಿಮ್ಮ ಬದುಕಿನಲ್ಲಿ ಆಗುತ್ತಿರುವ ಎಡವಟ್ಟುಗಳು ಸಂಗಾತಿಯ ಮಾತುಗಳನ್ನು ನೆನಪಿಸುತ್ತದೆ. ಸ್ವತ್ತುಗಳ ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯ ಮಾತಿನಂತೆಯೇ ನಡೆಯಲು ತೀರ್ಮಾನಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.