ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉನ್ನತ ಅಧಿಕಾರ ಸಿಗಲಿದೆ

ಮಂಗಳವಾರ – ಸೆಪ್ಟೆಂಬರ್‌ 10, 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಸೆಪ್ಟೆಂಬರ್ 2024, 23:30 IST
Last Updated 9 ಸೆಪ್ಟೆಂಬರ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು ಸರಿ ಮಾಡಲು ಯತ್ನಿಸಿಕೊಳ್ಳುವ ಗುಣ ಇಂದು ಬೇಕಾಗುತ್ತದೆ. ಕೆಲಸಕ್ಕೆ ಸಂಬಂಧಪಟ್ಟಂತೆ ಪ್ರವಾಸ ಮಾಡುವ ಸಾಧ್ಯತೆಗಳಿರಬಹುದು.
  • ವೃಷಭ
  • ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ. ಗಾಯಕರು, ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಹೊಸ ಅವಕಾಶಗಳು ದೊರೆಯಲಿವೆ. ಉನ್ನತ ಅಧಿಕಾರ ಸಿಗಲಿದೆ.
  • ಮಿಥುನ
  • ಸ್ನೇಹಿತರೊಂದಿಗೆ ಪ್ರವಾಸ ಮಾಡಬೇಕೆನಿಸಿದ್ದರೂ ಮುಂದೂಡುವುದು ಉತ್ತಮ. ಸಮರ್ಥಿಸಿಕೊಳ್ಳುವ ಮಾತುಗಳನ್ನು ಆಡುವಾಗ ನುಡಿಯಲ್ಲಿ ದಿಟ್ಟತನವಿರಲಿ. ಷೇರು ವ್ಯವಹಾರ ಲಾಭದಾಯಕ.
  • ಕರ್ಕಾಟಕ
  • ವೃತ್ತಿರಂಗದಲ್ಲಿ ತಿಳಿವಳಿಕೆಯಂತೆ ನಡೆಯಿರಿ, ಅನ್ಯರ ಮಾತಿಗೆ ಕಿವಿಗೊಡಬೇಡಿ. ಹೊಸ ಒಪ್ಪಂದಗಳನ್ನು ಒಪ್ಪಿಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಯೋಚಿಸಿ ಮುಂದುವರಿಯಿರಿ.
  • ಸಿಂಹ
  • ಖರೀದಿಸಿದ ನಿವೇಶನ ಈಗ ಮಾರುವುದಾದರೆ ಉತ್ತಮ ಬೆಲೆಗೆ ಮಾರಾಟ ಆಗುವುದು. ಸಮಯಕ್ಕೆ ಸರಿಯಾಗಿ ವರ್ತಿಸುವಂಥ ಬುದ್ಧಿವಂತಿಕೆ ತೋರುವಿರಿ. ಕಲಾವಿದರಿಗೆ ನೂತನ ಅವಕಾಶಗಳು ಅಧಿಕ ಮಟ್ಟದಲ್ಲಿ ಸಿಗಲಿದೆ.
  • ಕನ್ಯಾ
  • ನಿರ್ಮಲವಾದ ಮನಸ್ಸಿನಿಂದಾಗಿ ಎಷ್ಟೇ ಸಣ್ಣ ತಪ್ಪು ನಿಮ್ಮದಾದರೂ ಪಶ್ಚಾತ್ತಾಪ ಪಡುತ್ತೀರಿ. ಮಾಡುವ ಕೆಲಸಗಳೆಲ್ಲವೂ ನಿಮಗೆ ಸರಿಯಾಗಿಯೇ ಕಂಡರೂ ಅವೆಲ್ಲವೂ ಸರಿಯಾಗಿ ಇರುವುದಿಲ್ಲ.
  • ತುಲಾ
  • ಉತ್ತಮವಾದ ರೀತಿ ನೀತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಶ್ರೇಯ ಸ್ಸನ್ನು ಕಾಣುವಿರಿ. ಕೆಲಸವನ್ನು ಬೇಗ ಮುಗಿಸಬೇಕೆಂಬ ಆತುರವು ಅಚಾತುರ್ಯ ಉಂಟುಮಾಡುವುದು. ಉದ್ಯೋಗದಲ್ಲಿ ಗೆಲುವು ದೊರೆಯಲಿದೆ.
  • ವೃಶ್ಚಿಕ
  • ಅತಿ ಆತ್ಮವಿಶ್ವಾಸದಿಂದಾಗಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವಿರಿ. ಮನೆಯಲ್ಲಿ ಇರುವವರೆಲ್ಲರನ್ನೂ ಕೇಳದೆ ನಿರ್ಧಾರ ತೆಗೆದುಕೊಳ್ಳಬೇಡಿ. ಮಕ್ಕಳ ವಿಷಯವಾಗಿ ಮುಂಗೋಪಿಯಾಗುವಿರಿ.
  • ಧನು
  • ಉದ್ಯೋಗದಲ್ಲಿ ಸೆಣಸಾಡಲು ಬಂದವರ ಜತೆ ಕ್ರೀಡಾ ಸ್ಫೂರ್ತಿಯಂತೆ ಸ್ವೀಕರಿಸಿ ಸೆಣಸಾಡಿ. ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಅಧಿಕ ಶ್ರಮ ಪಡಬೇಕಾಗುವುದು. ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಬಹುದು.
  • ಮಕರ
  • ರೇಷ್ಮೆ ಬೆಳೆಗಾರರಿಗೆ ಈ ಬಾರಿಯ ಬೆಳೆಯಿಂದ ಹೆಚ್ಚಿನ ಸಂತಸ ಮತ್ತು ಆದಾಯವಿರಿವುದು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಕಾರಣದಿಂದ ತೂಕವನ್ನು ಕಡಿಮೆ ಮಾಡುಕೊಳ್ಳುವ ಸಾಹಸಕ್ಕೆ ಕೈಹಾಕುವಿರಿ.
  • ಕುಂಭ
  • ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವಿರಿ. ಸೋದರಿಯ ಕುಟುಂಬದ ವಿವಾದಗಳು ಇತ್ಯರ್ಥಗೊಳ್ಳುವುದು. ಸ್ವಂತ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ.
  • ಮೀನ
  • ತಾರ್ಕಿಕ ಹಾದಿಯಲ್ಲಿ ಬರುವ ಭಾವನಾತ್ಮಕ ಆಲೋಚನೆಗಳನ್ನು ಬದಿಗೆ ಸರಿಸಿ. ದುಡುಕಿನ ಮಾತುಗಳು ಇತರರ ಮನಸ್ಸನ್ನು ನೋಯಿಸದಿರಲಿ. ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.