ದಿನ ಭವಿಷ್ಯ: ಈ ರಾಶಿಯವರಿಗೆ ವಾಹನ ವ್ಯವಹಾರಗಳಲ್ಲಿ ವಿಶೇಷ ಲಾಭವಾಗಲಿದೆ
ಶನಿವಾರ – ಸೆಪ್ಟೆಂಬರ್ 14, 2024
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಸೆಪ್ಟೆಂಬರ್ 2024, 19:30 IST
Last Updated 13 ಸೆಪ್ಟೆಂಬರ್ 2024, 19:30 IST
ಮೇಷ
ಸಮಾರಂಭದಲ್ಲಿ ನಿಮ್ಮ ಹಾಜರಿಯು ವಿಶೇಷವಾದ ಕಳೆ ತರಲಿದೆ. ನೀವು ಪ್ರಯತ್ನಿಸಿದ ಕಾರ್ಯಗಳು ಗುರು-ಹಿರಿಯರ ಅನುಗ್ರಹದಿಂದ ಕೈಗೂಡಲಿವೆ. ಸ್ನೇಹಿತರಿಂದ ಸಕಾಲಕ್ಕೆ ಸಹಾಯ ಸಿಗಲಿದೆ.
ವೃಷಭ
ಪರೋಪಕಾರದ ಫಲದಿಂದಾಗಿ ದೊಡ್ಡ ಸಮಸ್ಯೆಗಳೂ ಮಂಜಿನಂತೆ ಕರಗಿ ಹೋಗುವವು. ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸಹಕಾರ ಸಿಗಲಿದೆ.
ಮಿಥುನ
ಕಾರ್ಯ ವೈಖರಿಯನ್ನು ಬದಲಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಜಯ ನಿಮ್ಮದಾಗುವುದು. ನಿಮ್ಮ ಸಂಪತ್ತಿನ ಬಗ್ಗೆ ನೆರೆಹೊರೆಯವರಿಗೆ ಅಸೂಯೆ ಉಂಟಾಗುವುದು.
ಕರ್ಕಾಟಕ
ನಿಮ್ಮ ನಿರ್ಧಾರ ಸರಿಯಾದುದೆಂದು ಮನವರಿಕೆಯಾಗಲಿದೆ. ವೃತ್ತಿ ಜೀವನದಲ್ಲಿ ಲೋಪಗಳುಂಟಾಗುವ ಸಂಭವವಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ.
ಸಿಂಹ
ಕಠಿಣ ಶ್ರಮದ ಫಲವಾಗಿ ಗುರಿಗಳು ಈಡೇರಲಿವೆ. ನಿಮ್ಮ ಧ್ಯೇಯಗಳನ್ನು ಎಲ್ಲರಿಗೂ ಪಸರಿಸುವ ಕೆಲಸವನ್ನು ಮಾಡುವಿರಿ. ಅನಿವಾರ್ಯವಾಗಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು.
ಕನ್ಯಾ
ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಳ್ಳಲು ಹೆಚ್ಚು ಶ್ರಮ ವಹಿಸಿದರೆ ಕೈಗೂಡಲಿದೆ. ಬಾಯಿ ಚಪಲಕ್ಕೆ ತಿಂದ ಆಹಾರವು ಅನಾರೋಗ್ಯಕ್ಕೆ ಕಾರಣವಾಗುವುದು. ವಿಶೇಷ ವ್ಯಕ್ತಿಯು ಉಡುಗೊರೆ ನೀಡಬಹುದು.
ತುಲಾ
ಆಲಸ್ಯತನದಿಂದ ಹೊರಬಂದಲ್ಲಿ ಯಾವುದೇ ಸಮಸ್ಯೆಗಳು ಬರಲಾರವು. ಕುಟುಂಬದ ಸದಸ್ಯರೊಂದಿಗೆ ಅನಗತ್ಯವಾಗಿ ವಾದಿಸಬೇಡಿ. ವಾಹನ ವ್ಯವಹಾರಗಳಲ್ಲಿ ವಿಶೇಷ ಲಾಭವಾಗಲಿದೆ.
ವೃಶ್ಚಿಕ
ಮಾತಾ-ಪಿತೃಗಳಿಂದ ಪ್ರೋತ್ಸಾಹ ದೊರೆಯಲಿದೆ. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟಾಗುವುದು. ನೂತನ ಗೃಹ ನಿರ್ಮಾಣದ ಬಗ್ಗೆ ಯೋಚಿಸಬಹುದು.
ಧನು
ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ.
ಮಕರ
ಹಳೆಯ ವಿಷಯಗಳನ್ನು ಆಗಾಗ ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ. ಉದ್ಯೋಗ ತ್ಯಜಿಸಿ ಹುಟ್ಟಿದ ಊರಿನಲ್ಲಿ ಕೃಷಿ ಮಾಡುವ ಯೋಚನೆ ಬರುವುದು. ಧರ್ಮ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳಿ.
ಕುಂಭ
ಸಮಸ್ಯೆ ಮತ್ತು ದುಃಖಗಳೆರಡೂ ಒಟ್ಟಿಗೆ ಬಾಧಿಸಲಿವೆ. ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಿರ್ಧರಿಸಿ. ಒಳ್ಳೆಯ ಕಾರ್ಯಗಳು ತಕ್ಷಣ ಫಲ ಕೊಡುವುದಿಲ್ಲ.
ಮೀನ
ನಿಮ್ಮ ನಿಲುವು ಸಮರ್ಪಕವಾದುದು ಎಂದು ಇತರರಿಗೆ ಮನವರಿಕೆ ಮಾಡಿಕೊಡುವಿರಿ. ಅಪಾಯಕಾರಿ ವಸ್ತುಗಳೊಂದಿಗೆ ಕಾರ್ಯನಿರ್ವಹಿಸುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ.