ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಪ್ರಯತ್ನಗಳು ಲಾಭ ತಂದುಕೊಡಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
   
ಮೇಷ
  • ಇಂದ್ರಿಯಗಳ ಚಾಂಚಲ್ಯತೆಯು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸುವ ಜೊತೆಗೆ ನಿಮ್ಮ ಹಾದಿಯನ್ನು ತಪ್ಪಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ತಪ್ಪು ನಿರ್ಧಾರ ತೆಗೆದುಕೊಳ್ಳುವಂತಾಗಬಹುದು.
  • ವೃಷಭ
  • ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸಿ ವೃತ್ತಿಪರ ಸಮಾಲೋಚನೆ ನಡೆಸಿ. ಇತರರೊಂದಿಗೆ ಇದ್ದ ವಿವಾದಗಳನ್ನು ರಾಜಿಯೊಂದಿಗೆ ಬಗೆಹರಿಸಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಪ್ರಯತ್ನಗಳು ಲಾಭವನ್ನು ತಂದು ಕೊಡುವವು.
  • ಮಿಥುನ
  • ನಿಮಗೆ ಒಳಿತಾಗುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ರೀತಿಯ ಯೋಚನೆ ಬೇಡ. ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿ. ಮಕ್ಕಳ ಆರೋಗ್ಯ ಉತ್ತಮ ಸ್ಥಿತಿಗೆ ಬರುತ್ತದೆ.
  • ಕರ್ಕಾಟಕ
  • ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಸಮಾಧಾನ ಇರಲಿ. ದುಶ್ಚಟಗಳಿಂದ ಮುಕ್ತರಾಗುವ ಮನಸ್ಸಿನ ಮಾತು ಕೇಳಿ. ಕಾರ್ಮಿಕರ ಬೇಡಿಕೆ ಪೂರೈಸುವ ತೀರ್ಮಾನ ಮಾಡಿರಿ.
  • ಸಿಂಹ
  • ನಿಮ್ಮ ಅಧಿಕ ಶ್ರಮದಿಂದ ನಿಮ್ಮ ಕನಸಿನ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗುವುದು. ಅಧಿಕವಾಗಿದ್ದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
  • ಕನ್ಯಾ
  • ಕೋರ್ಟು, ಕಚೇರಿ ವ್ಯವಹಾರದಲ್ಲಿ ಜಯ ಪಡೆಯುವ ಬಗ್ಗೆ ಅಧಿಕವಾದ ಪ್ರಯತ್ನವಿರಲಿ. ಹಳೆಯ ವಾಹನದ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ಹೆಚ್ಚಿನ ಗಮನವಿರಲಿ. ಬಟ್ಟೆ ಉದ್ಯಮದವರಿಗೆ ಇಂದು ಲಾಭ ಬರುವುದು.
  • ತುಲಾ
  • ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ.
  • ವೃಶ್ಚಿಕ
  • ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ. ಸಿನೆಮಾ ನಟ ನಟಿಯರಿಗೆ ಹೆಚ್ಚಿನ ಅವಕಾಶ ದೊರೆಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಸ್ನೇಹಿತನಿಂದ ಪ್ರಗತಿ ಉಂಟಾಗುವುದು.
  • ಧನು
  • ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ವಿಶೇಷ ಗಮನವಹಿಸಿ. ಲೇವಾದೇವಿ ವ್ಯವಹಾರ ನಡೆಸುವವರು ವ್ಯವಹಾರದಲ್ಲಿ ಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣಲಿದೆ.
  • ಮಕರ
  • ಆಡಳಿತಾರೂಢ ಜನರ ಸಂಪರ್ಕದಿಂದ ಕೆಲಸಗಳನ್ನು ಸಾಧಿಸಿಕೊಳ್ಳಲು ಬಹಳವಾಗಿ ಕಷ್ಟವೆನಿಸುವುದು. ಬಲು ಅಪರೂಪದ ಹಾಗು ನಿಮ್ಮ ಕೈಗತವಾದ ವಿದ್ಯೆಯು ನಿಮಗೆ ಅಧಿಕ ಲಾಭವನ್ನು ತಂದುಕೊಡುವುದು.
  • ಕುಂಭ
  • ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ಧನ್ಯತೆಯ ಮನೋಭಾವ ನಿಮ್ಮದಾಗುವುದು. ಆಪ್ತರು ಎಂದು ನೀವು ತಿಳಿದ ವ್ಯಕ್ತಿಗಳು ನಿಮ್ಮ ಆಪತ್ತಿನ ಕಾಲಕ್ಕೆ ಸಹಾಯವನ್ನು ಮಾಡದೇ ಇರಬಹುದು.
  • ಮೀನ
  • ತಾಂತ್ರಿಕ ವಿದ್ಯೆಯನ್ನು ವ್ಯಾಸಂಗ ಮಾಡುವವರಿಗೆ ಉತ್ತಮ ಫಲಿತಾಂಶ ಲಭಿಸುವುದು. ಮಗನ ಉದ್ಯೋಗದಲ್ಲಿನ ಪ್ರಗತಿಯಿಂದ ಸಂತೋಷವಾಗುತ್ತದೆ. ನಿಮ್ಮ ಸ್ವಂತ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.