ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಆಧ್ಯಾತ್ಮ ಚಿಂತನೆಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
   
ಮೇಷ
  • ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದರಿಂದ ಕಾರ್ಯದಲ್ಲಿ ಜಯ ದೊರೆಯುವುದು. ಯಾವುದೇ ಕಾರಣಗಳಿಗೂ ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ಸಾಲಬಾಧೆ ಸ್ವಲ್ಪ ಮಟ್ಟಿಗೆ ತೀರಲಿದೆ.
  • ವೃಷಭ
  • ಸಹೋದ್ಯೋಗಿಗಳೊಡನೆ ಅಥವಾ ಆಪ್ತ ಸ್ನೇಹಿತರೊಡನೆ ಹಣಕಾಸಿನ ವ್ಯವಹಾರದಿಂದಾಗಿ ಸಂಬಂಧಕ್ಕೆ ಹುಳಿ ಹಿಂಡಿದಂತಾಗಲಿದೆ. ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
  • ಮಿಥುನ
  • ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟವನ್ನು ಭರಿಸಬೇಕಾದ ಕ್ಲಿಷ್ಟ ಸಂದರ್ಭಗಳು ವ್ಯವಹಾರದಿಂದ ಹಿಂಬರುವ ಯೋಚನೆಗೆ ಮೂಲ ಕಾರಣ ಆಗುವುದು. ಅನಗತ್ಯ ಮಾತನ್ನು ಆಡುವುದರಿಂದ ನೆಮ್ಮದಿಗೆ ಭಂಗವಾಗಲಿದೆ.
  • ಕರ್ಕಾಟಕ
  • ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಲಿದೆ. ಅನಿರೀಕ್ಷಿತವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು. ಮಾಟ-ಮಂತ್ರದ ಭೀತಿ ಎದುರಾಗಲಿದೆ.
  • ಸಿಂಹ
  • ಅಧಿಕಾರದಲ್ಲಿ ಸ್ಥಾನಮಾನ ಪಡೆಯಲು ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ. ಮಕ್ಕಳನ್ನು ದೂರಮಾಡಿಕೊಳ್ಳಬೇಡಿ.
  • ಕನ್ಯಾ
  • ವಾಹನಗಳ ರಿಪೇರಿಯಂತಹ ಅಥವಾ ಯಂತ್ರಗಳ ರಿಪೇರಿಯಂತಹ ಕಾರಣದಿಂದ ಖರ್ಚು ಉದ್ಭವಿಸುವುದು. ಕುಟುಂಬದ ಮಾರ್ಗಸೂಚಕರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಸಹ ಪತ್ತೆಯಾಗುವುವು.
  • ತುಲಾ
  • ವಿವಾಹ ಸಂಬಂಧ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತವಾದ ದಿನ, ಸುಲಭವಾಗಿ ಪ್ರಾಪ್ತಿಯಾಗುವುದು. ಅಜೀರ್ಣದ ಸಮಸ್ಯೆಯಿಂದ ಜೀವನೋತ್ಸಾಹ ಕಳೆದುಕೊಂಡು ಆಲಸ್ಯ ಹೊಂದುವಿರಿ.
  • ವೃಶ್ಚಿಕ
  • ನಿಮ್ಮ ಒತ್ತಡದ ನಡುವೆಯೂ ಇತರರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ಇಂದು ನಿಮ್ಮ ಕೈ ಸೇರಲಿದೆ. ರಾಜಕೀಯದವರಿಗೆ ನಿರೀಕ್ಷಿತ ಕಾರ್ಯ ಸಾಧನೆ ತೃಪ್ತಿ ತರುತ್ತದೆ.
  • ಧನು
  • ಅಣ್ಣ-ತಮ್ಮಂದಿರ ವರ್ಗದವರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಭೂ ಖರೀದಿ, ಗೃಹ ನಿರ್ಮಾಣ ಕೈಗೊಳ್ಳಲು ಉತ್ತಮವಾದ ಸಮಯ. ಯಂತ್ರೋಪಕರಣ ಮಾರಾಟದಿಂದ ಲಾಭ.
  • ಮಕರ
  • ಹಿರಿಯರ ಮಾರ್ಗದರ್ಶನದಂತೆ ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
  • ಕುಂಭ
  • ನಿಮ್ಮ ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಇಂದು ಸೂಕ್ತ ದಿನವಾಗಿದೆ. ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ಈ ದಿನ ನಿಮ್ಮ ಮನೆಯಲ್ಲಿ ನಡೆಯಲಿದೆ.
  • ಮೀನ
  • ನೀವು ಮಾಡಿದ ಪರೋಪಕಾರದ ಫಲ ತಕ್ಷಣದಲ್ಲಿಯೇ ಅನುಭವಕ್ಕೆ ಬರಲಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ. ಅವಶ್ಯಕತೆಗಿಂತ ಹೆಚ್ಚಾಗಿ ಹಣ ಸಂಗ್ರಹವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.