ADVERTISEMENT

ದಿನ ಭವಿಷ್ಯ: ಈ ರಾಶಿಯವರು ಖರ್ಚಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
   
ಮೇಷ
  • ಸ್ನೇಹಿತರೊಂದಿಗಿನ ಕಳೆದುಕೊಂಡ ವಿಶ್ವಾಸವನ್ನು ಪುನಃ ಪಡೆದುಕೊಳ್ಳುವ ಅವಕಾಶವಿರಲಿದೆ. ಹಿರಿಯ ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ. ಅಧ್ಯಯನಕ್ಕಾಗಿ ವಿದೇಶ ಪ್ರಯಾಣದ ಯೋಗವಿದೆ.
  • ವೃಷಭ
  • ಅತಿಯಾದ ಆಲಸ್ಯವು ನಿಮ್ಮ ಕೆಲಸಕ್ಕೆ ಅಡ್ಡಿಯನ್ನು ಮಾಡಲಿದೆ ಹಾಗೂ ಅದರ ಪರಿಣಾಮವಾಗಿ ಜನರ ಅಪಹಾಸ್ಯಕ್ಕೆ ಕಾರಣರಾಗುವಿರಿ. ಕ್ಯಾಟರಿಂಗ್ ನಡೆಸುವವರಿಗೆ ಬಿಡುವಿಲ್ಲದ ವಾತಾವರಣ ಎದುರಾಗುವುದು.
  • ಮಿಥುನ
  • ಸೋದರರು ನಿಮ್ಮ ಕೆಲಸದಲ್ಲಿ ದೈಹಿಕ ಹಾಗೂ ಆರ್ಥಿಕವಾಗಿ ಹೆಚ್ಚಿನ ನೆರವಿಗೆ ಬರಲಿದ್ದಾರೆ. ಸಾಹಸ ಕೃತ್ಯಗಳನ್ನು ಕೈಗೊಳ್ಳುವ ನಿಮ್ಮ ಮನೋಭಿಲಾಷೆ ಇಂದು ನಿಮ್ಮನ್ನು ಕಾಡಲಿದ್ದು ಅದಕ್ಕೆ ಪ್ರಯತ್ನಿಸುವಿರಿ.
  • ಕರ್ಕಾಟಕ
  • ವಿವಾದಾಸ್ಪದ ವಿಷಯಗಳ ಕಡೆ ಗಮನ ಕೊಡದೆ ನಿಮ್ಮ ಕೆಲಸಗಳನ್ನು ಮಾಡಿಕೊಂಡಲ್ಲಿ ಲಾಭ ದೊರಕುವುದು. ಮನೆಯ ನವೀಕರಣಗೊಳಿಸಲು ಮುಂದಾದ ವ್ಯಕ್ತಿಗಳು ವಾಸ್ತುಶಾಸ್ತ್ರದ ಬಗ್ಗೆ ಗಮನಹರಿಸಿ.
  • ಸಿಂಹ
  • ಕೆಲವೊಂದು ವಿಷಯಗಳನ್ನು ಹಾಗೂ ಅದರಿಂದಾಗುವ ಲಾಭ ನಷ್ಟಗಳ ಬಗ್ಗೆ ಪುನರವಲೋಕನವನ್ನು ಮಾಡುವುದು ಉತ್ತಮ. ತುರ್ತು ಕೆಲಸವಾದರೂ ಅವಸರವನ್ನು ಮಾಡಿಕೊಳ್ಳದೇ ಆಲೋಚಿಸಿ ಕೆಲಸವನ್ನು ನಿರ್ವಹಿಸಿ.
  • ಕನ್ಯಾ
  • ವಸ್ತ್ರಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ ಮಾರಾಟಗಳಿಂದ ಹೆಚ್ಚಿನ ಲಾಭ ಪಡೆಯುವಿರಿ. ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ನಿಮ್ಮ ಮನದ ಇಚ್ಚೆ ಈಡೇರಲು ಲಕ್ಷ್ಮೀರಮಣನನ್ನು ಆರಾಧಿಸಿ.
  • ತುಲಾ
  • ನಿಮ್ಮ ಮಾತುಗಳಿಗೆ ವಿರುದ್ಧವಾದ ಮಾತನ್ನು ನಿಮ್ಮ ಮಕ್ಕಳಿಂದ ಕೇಳಬಹುದು. ನ್ಯಾಯಾಲಯದ ಕೆಲಸಗಳಲ್ಲಿ ಮುನ್ನಡೆಗಾಗಿ ಓಡಾಟ ನೆಡೆಸಬೇಕಾಗುತ್ತದೆ. ಖರ್ಚಿನ ವಿಚಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
  • ವೃಶ್ಚಿಕ
  • ಜಮೀನಿನ ತಕರಾರು ವಿಷಯಗಳು ಇತ್ಯರ್ಥ ಗೊಳ್ಳುವುದು. ಕೆಲಸವು ಮೊದಲ ಪ್ರಯತ್ನದಲ್ಲೇ ಸಫಲವಾಗಿದ್ದರಿಂದ ಉತ್ಸಾಹ ಗರಿಗೆದರಲಿದೆ. ನಾಯಕತ್ವ ಹೊಂದಿರುವ ನಿಮಗೆ ಜನಬಲ ಕಡಿಮೆಯಾಗಲಿದೆ.
  • ಧನು
  • ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಂಡು ಬದುಕಿನಲ್ಲಿ ನಿಮ್ಮ ಮುಂದಿನ ಹೆಜ್ಜೆ ಇಡುವುದು ಉತ್ತಮ. ನಿಮ್ಮ ಮಕ್ಕಳ ನಡವಳಿಕೆಯಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು.
  • ಮಕರ
  • ಉದಾಸೀನತೆಯನ್ನು ದೂರ ಮಾಡುವುದರಿಂದ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ಅನಾರೋಗ್ಯದ ಪರಿಸ್ಥಿತಿಯಲ್ಲಿ ಸ್ವಂತ ನಿರ್ಧಾರದಿಂದ ಔಷಧಿಯನ್ನು ತೆಗೆದುಕೊಳ್ಳಬೇಡಿ. ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದೆ.
  • ಕುಂಭ
  • ಮನೆಯವರ ವಿಚಾರದಲ್ಲಿ ದೃಢ ನಿಲುವು ತಾಳಬೇಕಾಗುವುದು. ಅರ್ಥಪೂರ್ಣ ಮಾತುಕತೆಗಳಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಪಡೆಯುವಿರಿ. ಹಣದ ವಿಚಾರದಲ್ಲಿ ಮಿತವ್ಯಯಿಗಳಾಗಿರಿ.
  • ಮೀನ
  • ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ ಎಂಬುದು ತಿಳಿಯಲಿದೆ. ಯುವ ಕಲಾವಿದರಿಗೆ ಪ್ರೋತ್ಸಾಹ ಅವಕಾಶಗಳು ಲಭಿಸುವುದು. ಗೋ ಸೇವೆಯಿಂದ ನೆಮ್ಮದಿ ಸಂಪಾದಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.