ದಿನ ಭವಿಷ್ಯ: ಈ ರಾಶಿಯವರಿಗೆ ಕೋರ್ಟ್ ಕಚೇರಿ ಕೆಲಸಗಳಿಗಾಗಿ ಅಲೆದಾಟ ಇರುತ್ತದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಮೇಷ
ಅವಿವಾಹಿತರಿಗೆ ಮಾತೃವರ್ಗದ ಕಡೆಯಿಂದ ಅಪೇಕ್ಷಿಸಿದ ರೀತಿಯಲ್ಲಿಯೇ ಸಂಬಂಧ ಅರಸಿ ಬರುವುದು. ಪರಿಶ್ರಮಕ್ಕೆ ತಕ್ಕ ಫಲವನ್ನು ನಿರೀಕ್ಷಿಸಬಹುದು. ಸಾಧು–ಸಂತರ ದರ್ಶನದಿಂದ ಶುಭವಾಗುವುದು.
ವೃಷಭ
ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆ ಈ ದಿನದಲ್ಲಿ ಸರಿಯಲ್ಲ. ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು. ದಿನದ ಖರ್ಚು–ವೆಚ್ಚಗಳು ಹೆಚ್ಚಿರುವ ಸಂಭವನೀಯತೆ ಇದೆ.
ಮಿಥುನ
ಮನೆಯವರ ಆರೋಗ್ಯದಲ್ಲಿ ಹಂತ ಹಂತದ ಸುಧಾರಣೆ ಕಂಡು ನೆಮ್ಮದಿ ಇರುವುದು. ಮನೆ ಹುಡುಕುವ ಕೆಲಸದಲ್ಲಿ ಸಹೋದ್ಯೋಗಿಯೊಬ್ಬರು ನೆರವಿಗೆ ಬರುವರು. ಕೋರ್ಟ್ ಕಚೇರಿ ಕೆಲಸಗಳಿಗಾಗಿ ಅಲೆದಾಟ ಇರುವುದು.
ಕರ್ಕಾಟಕ
ಬದುಕಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ದುಡಿದು, ಯಶಸ್ಸನ್ನು ಹೊಂದುವಿರಿ. ಜೀವನದ ಮುಂದಿನ ದಿನಗಳಿಗಾಗಿ ದೀರ್ಘಕಾಲೀನ ಯೋಜನೆಗಳನ್ನು ಮಾಡುವಿರಿ. ವಾಹನ ಚಾಲಕರು ಎಚ್ಚರವಿರಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಪರಿಣಿತರಿಂದ ಸುಲಭವಾದ ಉಪಾಯವನ್ನು ಪಡೆದು ಸಂತೋಷವಾಗಲಿದೆ. ಬೇರೆಯವರ ಮನಸ್ಸಿಗೆ ನೋವು ಉಂಟು ಮಾಡುವ ಮಾತುಗಳನ್ನು ಹೇಳಬೇಡಿ.
ಕನ್ಯಾ
ಎಷ್ಟೇ ಪರಿಶ್ರಮವಿದ್ದರೂ, ಅನುಭವವಿದ್ದರೂ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಮೆಚ್ಚುಗೆಯ ಮಾತು ಬರಲಿದೆ. ಆಸ್ತಿಗೆ ಸಂಬಂಧಿಸಿದ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಿ.
ತುಲಾ
ಸರ್ಕಾರಿ ನೌಕರರಿಗೆ ವೈಯಕ್ತಿಕ ವಿಚಾರಕ್ಕೆ ನಾನಾ ರೀತಿಯಲ್ಲಿ ಅಡ್ಡಿ-ಆತಂಕಗಳು ಕಾಡಬಹುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ತರಹದ ಅವಕಾಶಗಳು ಒದಗಿ ಬರುತ್ತದೆ. ಶನೈಶ್ಚರನ ಆರಾಧನೆ ಮಾಡಿ.
ವೃಶ್ಚಿಕ
ಹೆಸರಾಂತ ವ್ಯಕ್ತಿಗಳ ಜತೆ ಭೇಟಿ ಮಾಡುವ ಅವಶ್ಯಕತೆ ಇದ್ದಲ್ಲಿ ಪ್ರಯತ್ನ ಪಟ್ಟರೆ ಈ ದಿನ ಫಲಿಸುವ ಸಾಧ್ಯತೆಗಳಿವೆ. ಚಿನ್ನ ಬೆಳ್ಳಿ ಮಾರಾಟಗಾರರಿಗೆ ಹೆಚ್ಚಿನ ಲಾಭ ಇರುತ್ತದೆ. ಲಲಿತಕಲಾ ಕ್ಷೇತ್ರದಲ್ಲಿರುವವರಿಗೆ ಸಾಧನೆಗೆ ಅವಕಾಶವಿದೆ.
ಧನು
ಅತ್ತೆ-ಸೊಸೆ, ತಾಯಿ-ಮಗಳು ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಮರಸ್ಯದ ಜೀವನ ನಡೆಸುವುದು ಒಳ್ಳೆಯದು. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು , ಲಾಭ ಪಡೆದುಕೊಳ್ಳುವಿರಿ.
ಮಕರ
ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಪೊಲೀಸ್ ಅಧಿಕಾರಿಗಳಿಗೆ ತುರ್ತು ಕೆಲಸ ಒದಗುವ ಸಂದರ್ಭ ಬರುವುದು. ಮಂಗಳ ಕಾರ್ಯದ ಸುದ್ದಿ ಕೇಳುವಿರಿ.
ಕುಂಭ
ಬ್ಯಾಂಕ್ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ನಿಮ್ಮ ಚಾಣಾಕ್ಷತನದಿಂದ ಹೆಗ್ಗಳಿಕೆಗೆ ಪಾತ್ರರಾಗುತ್ತೀರಿ. ಕೆಲಸದ ನಿಮಿತ್ತವಾಗಿ ಅನಿರೀಕ್ಷಿತ ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಮೀನ
ಕೌಟುಂಬಿಕ ಸಮಸ್ಯೆಗೆ ಧಾರ್ಮಿಕವಾಗಿ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಡೆಸಿ. ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ. ಕೆಂಪು ಉಡುಪು ಶುಭದಾಯಕ.