ADVERTISEMENT

ದಿನ ಭವಿಷ್ಯ: ಈ ರಾಶಿಯ ನೂತನ ದಂಪತಿಗಳು ಸಂತಾನದ ಶುಭ ಸುದ್ದಿ ಕೇಳುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಷೇರುಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿ ತೋರುವುದಿಲ್ಲ. ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯ. ದಿನದಲ್ಲಿ ಅಧಿಕ ಸಮಯ ಸಂತೋಷವಿರುವುದು.
  • ವೃಷಭ
  • ಸಮಸ್ಯೆಗಳು ಏನೇ ಇದ್ದರೂ ಸಮಾಧಾನವಾಗಿ ನಗು ಮೊಗದಿಂದ ವರ್ತಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಕಣ್ಣು, ಕಿವಿಗೆ ಸಂಬಂಧಿಸಿದಂತೆ ಆನಾರೋಗ್ಯ ಉಂಟಾದಲ್ಲಿ ವೈದ್ಯರನ್ನು ಭೇಟಿ ಮಾಡಿರಿ.
  • ಮಿಥುನ
  • ತವರು ಮನೆಯಲ್ಲಿನ ಜಗಳವು ಗಂಡನ ಮನೆಯಲ್ಲಿರುವ ನಿಮ್ಮ ಮನಶ್ಶಾಂತಿಯನ್ನು ಕೆಡಿಸುತ್ತದೆ. ಜಯದ ಜೊತೆಗೆ ನೆಮ್ಮದಿ ಕೂಡ ನಿಮ್ಮದಾಗುತ್ತದೆ. ಕುಟುಂಬದವರೊಡನೆ ಸಂತೋಷದಿಂದ ಕಾಲ ಕಳೆಯುವಂತಾಗಲಿದೆ.
  • ಕರ್ಕಾಟಕ
  • ಅದ್ಭುತವಾದ ಉಪನಿಷತ್ ವಾಕ್ಯಗಳ ಬಳಕೆಯನ್ನು ಮಾಡಿ ಪತ್ರಿಕೆಗೆ ಬರೆದ ಲೇಖನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವಿರಿ. ಹಣದ ವಿಷಯದಲ್ಲಿ ದಾಕ್ಷಿಣ್ಯದ ಮಾತುಗಳಿಗೆ ಮರುಳಾಗಬೇಡಿ.
  • ಸಿಂಹ
  • ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ ಅಥವಾ ಪರಿಣಿತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ.
  • ಕನ್ಯಾ
  • ಸ್ವಂತ ಊರಿನಲ್ಲಿ ಉತ್ತಮ ಸ್ಥಾನಮಾನದಿಂದಾಗಿ ಹೆಚ್ಚಿನ ಗೌರವ ದೊರೆಯುವುದು. ಎಣ್ಣೆಯಲ್ಲಿ ಕರಿದ ಖಾದ್ಯಗಳ ಸೇವನೆಯಿಂದ ಅನಾರೋಗ್ಯ ಎದುರಾಗಬಹುದು. ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರಲಿದೆ.
  • ತುಲಾ
  • ಆಹಾರದ ವ್ಯತ್ಯಾಸದಿಂದಾಗಿ ಚರ್ಮದಲ್ಲಿ ದಡಾರಗಳು ಅಥವಾ ತುರಿಕೆಯಂಥ ಕಾಯಿಲೆಗಳು ಉಂಟಾಗಬಹುದು. ಅನಿರೀಕ್ಷಿತವಾದರೂ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳು ಕಾಣುತ್ತಿವೆ.
  • ವೃಶ್ಚಿಕ
  • ಹವಾಮಾನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸವನ್ನು ಉಳಿಸಿಕೊಳ್ಳಲು ಸಾಹಸವನ್ನು ಮಾಡಬೇಕಾಗಬಹುದು. ಸಂಗೀತ ಕಚೇರಿ, ನೃತ್ಯಕಾರ್ಯಕ್ರಮ ನೀಡುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ.
  • ಧನು
  • ಬಹಳ ದಿನಗಳಿಂದ ಅಪೇಕ್ಷಿಸಿದ ಯಾತ್ರೆಗೆ ಶುಭ ಮುಹೂರ್ತ ಸಿಗುವುದು. ಮನಸ್ಸಿನಲ್ಲಿ ನೋವಿದ್ದರೂ ಇತರರ ಎದುರು ನಗುಮೊಗದ ಮುಖವಾಡವನ್ನು ಧರಿಸಬೇಕಾಗುವಂತಹ ಪರಿಸ್ಥಿತಿ ನಿಮ್ಮದಾಗಾಗುತ್ತದೆ.
  • ಮಕರ
  • ಸ್ನೇಹಿತರ ಭರವಸೆಯ ಮಾತುಗಳು ಸೋಲುಗಳನ್ನು ಮೆಟ್ಟಿ ಆಶಾ ಭಾವನೆಯನ್ನು ತರುತ್ತದೆ. ಅನುಭವದ ಕೊರತೆಯಿಂದಾಗಿ ಕೆಲಸಗಳಲ್ಲಿ ವಿಳಂಬವಾಗಬಹುದು. ಈಶ್ವರನನ್ನು ಆರಾಧಿಸಿರಿ. ಶುಭವಾಗುತ್ತದೆ.
  • ಕುಂಭ
  • ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ನೂತನ ದಂಪತಿಗಳು ಸಂತಾನದ ಶುಭ ಸುದ್ದಿ ಕೇಳುವಿರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.
  • ಮೀನ
  • ಹತ್ತಿ ಬಟ್ಟೆಯ ತಯಾರಕರಿಗೆ ಹಾಗೂ ವ್ಯಾಪಾರಸ್ಥರಿಗೆ ಗ್ರಾಹಕರು ದೊರಕಲಿದ್ದಾರೆ. ಗುರುಗಳ ಮನಸ್ಸಿಗೆ ನೋವು ಉಂಟುಮಾಡುವಂಥ ಕೆಲಸವನ್ನು ಮಾಡದಿರಿ. ವಕೀಲೀ ವೃತ್ತಿಯವರಿಗೆ ಶುಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.