ADVERTISEMENT

ದಿನ ಭವಿಷ್ಯ:ಈ ರಾಶಿಯವರು ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭ ಪಡೆಯಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
   
ಮೇಷ
  • ಹೊಸ ಮನೆ ಕೊಳ್ಳುವ ಪ್ರಯತ್ನಕ್ಕೆ ಎಲ್ಲಾ ರೀತಿಯಲ್ಲಿಯೂ ಚಾಲನೆ ಸಿಗುವುದು. ಪತ್ನಿಯ ಆರೋಗ್ಯದಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತದೆ. ಆಟಿಕೆ ವ್ಯಾಪಾರದಿಂದ ಅಧಿಕ ಲಾಭವನ್ನು ಪಡೆಯಬಹುದು.
  • ವೃಷಭ
  • ಕೌಟುಂಬಿಕವಾಗಿ ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ಏಕಮುಖ ನಿರ್ಧಾರ ಬೇಡ. ಸಿಹಿತಿಂಡಿ ವ್ಯಾಪಾರಿಗಳಿಗೆ ಲಾಭ–ನಷ್ಟದ ಮಿಶ್ರಫಲ ಅನುಭವಕ್ಕೆ ಬರಲಿದೆ.
  • ಮಿಥುನ
  • ಆಸೆ ಆಕಾಂಕ್ಷೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಂಡಲ್ಲಿ, ಋಣ ಮುಕ್ತರಾಗುವ ಅವಕಾಶ ಒದಗಲಿದೆ. ಹಂತಹಂತವಾಗಿ ಸುಧಾರಿಸಲಿರುವ ಪರಿಸ್ಥಿತಿಯು ಹೆಚ್ಚಿನ ನಿರಾಶೆಯನ್ನು ತರದು.
  • ಕರ್ಕಾಟಕ
  • ಪರಿಶ್ರಮದ ಜತೆ ಬುದ್ಧಿವಂತಿಕೆ, ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ. ಆಲಸ್ಯತನವನ್ನು ದೂರಮಾಡಿ. ವ್ಯಾಪಾರ ವ್ಯವಹಾರ ಬಗೆಗೆ ಮಕ್ಕಳಿಗೆ ತಿಳಿಸಿಕೊಡುವಿರಿ. ದೂರ ಸಂಚಾರದ ಲಕ್ಷಣಗಳಿವೆ.
  • ಸಿಂಹ
  • ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭವನ್ನು ಪಡೆಯುವಿರಿ. ಜನರ ಮೆಚ್ಚುಗೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಸಾಧಿಸುವುದರಿಂದ ಗುರಿಯನ್ನು ತಲುಪಬಹುದು.
  • ಕನ್ಯಾ
  • ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳಿದ್ದು, ನಿವಾರಿಸಿಕೊಳ್ಳಬೇಕಾಗುವುದು. ಉದ್ಯೋಗದಲ್ಲಿ ಸಮಾಧಾನ ಸಿಗದಿದ್ದರೂ ಆರ್ಥಿಕವಾಗಿ ತೊಂದರೆಗಳಾಗುವುದಿಲ್ಲ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ.
  • ತುಲಾ
  • ಎಂಜಿನಿಯರ್‌ ರಂಗದವರ ತ್ವರಿತ ಬೆಳವಣಿಗೆಯಿಂದ ಉನ್ನತ ಅಧಿ ಕಾರಿಗಳ ಪ್ರಶಂಸೆಗೆ ಪಾತ್ರರಾಗುವ ಸಮಯ ಇದಾಗಲಿದೆ. ಆಕಸ್ಮಿಕ ರೀತಿಯಲ್ಲಿ ಉದ್ಯೋಗ ದೊರೆಯಲಿದೆ. ಶ್ರೀರಾಮನನ್ನು ಭಜಿಸಿ, ಶುಭವಾಗುತ್ತದೆ.
  • ವೃಶ್ಚಿಕ
  • ಮಕ್ಕಳ ವ್ಯಾಸಂಗದ ಬಗ್ಗೆ ಸಂಬಂಧಿಕರಲ್ಲಿ ಚರ್ಚೆ ನಡೆಸಿ, ಸಲಹೆ ದೊರಕುವುದು. ಕೃಷಿಗೆ ಸಹಾಯವಾಗುವ ಯಂತ್ರಗಳ ಖರೀದಿಯಿಂದ ಲಾಭ. ಬ್ಯಾಂಕ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ.
  • ಧನು
  • ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ಮಗನಿಗಾಗಿ ಹೊಸ ವ್ಯಾಪಾರ ಮಳಿಗೆ ಆರಂಭಿಸುವುದು ಒಳ್ಳೆಯದು. ತೀರ್ಥಯಾತ್ರೆ ಮತ್ತು ಪುಣ್ಯಕ್ಷೇತ್ರಗಳಿಗೆ ಹೋಗಿಬರುವ ಸಾಧ್ಯತೆಗಳಿವೆ.
  • ಮಕರ
  • ಬಂಧು ಮಿತ್ರರೊಂದಿಗೆ ಸಂತೋಷ ವಿಷಯಗಳನ್ನು ಹಂಚಿ ಕೊಳ್ಳುವುದು ಸರಿಯಲ್ಲ. ದಿನಗೂಲಿ ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಆದಾಯ ಉಂಟಾಗುವುದು. ಸರ್ಕಾರಿ ಕೆಲಸಗಳಲ್ಲಿ ತಡೆ ಎದುರಾಗಬಹುದು.
  • ಕುಂಭ
  • ಅಚ್ಚುಕಟ್ಟಾದ ಕೆಲಸಗಳಿಂದ ನಿಮ್ಮ ಮೇಲಿನ ಅಭಿಪ್ರಾಯಗಳು ಬದಲಾಗುವುದು. ಸೌಂದರ್ಯ ಆಸ್ವಾದಿಸುವ ಆಕಾಂಕ್ಷೆಯು ಪ್ರಬಲವಾಗುವುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.
  • ಮೀನ
  • ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ಜೀವನದ ದಿನಗಳು ನೆಮ್ಮದಿದಾಯಕವಾಗಲಿದೆ. ದೇಹದ ಶ್ರಮಕ್ಕೆ ತಕ್ಕ ಸಂಪಾದನೆ ಇಲ್ಲವಾದರೂ ನೆಮ್ಮದಿ ಇರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.