ADVERTISEMENT

ದಿನ ಭವಿಷ್ಯ | ಈ ರಾಶಿಯ ಮಹಿಳೆಯರಿಗೆ ಆಡಳಿತ ಅಧಿಕಾರಗಳು ಲಭ್ಯವಾಗಲಿದೆ

ಶನಿವಾರ: ನವೆಂಬರ್ 4, 2023

ಪ್ರಜಾವಾಣಿ ವಿಶೇಷ
Published 3 ನವೆಂಬರ್ 2023, 20:23 IST
Last Updated 3 ನವೆಂಬರ್ 2023, 20:23 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನಗಳು. ಆರ್ಥಿಕ ತಾಪತ್ರಯಗಳು ಯಾರಲ್ಲಿಯೂ ಹೇಳಿಕೊಳ್ಳಲಾಗದಂತಾಗಲಿದೆ. ಸಂಜೆಯ ಸಮಯದಲ್ಲಿ ತಲೆ ನೋವಿನಂಥ ಸಮಸ್ಯೆ ಎದುರಾಗಬಹುದು.
  • ವೃಷಭ
  • ಹಾಸ್ಯ ಪ್ರಜ್ಞೆ ಹೆಚ್ಚುವುದು. ಆದರೆ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು. ಧರ್ಮಕಾರ್ಯಗಳಿಗೆ ಧನ ವ್ಯಯವಾಗಲಿದೆ.
  • ಮಿಥುನ
  • ಉದ್ಯೋಗದ ಹುಡುಕಾಟ ನಡೆಸುವವರಿಗೆ ಅಪರಿಚಿತ ವ್ಯಕ್ತಿಯಿಂದ ಸಹಾಯ ಆಗುವುದು. ಹೂಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವಿದೆ. ಮಹಿಳೆಯರಿಗೆ ಆಡಳಿತ ಅಧಿಕಾರಗಳು ಲಭ್ಯವಾಗಲಿದೆ.
  • ಕರ್ಕಾಟಕ
  • ಹೊಸ ಮನೆಯ ಅಥವಾ ನಿವೇಶನದ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ಕಂದಾಯ ಅಧಿಕಾರಿಗಳಿಗೆ ಕೆಲಸದ ಹೊಣೆ ಹೆಚ್ಚುವುದು. ವ್ಯಾಪಾರಗಳು ಸರಾಗವಾಗಿ ನಡೆಯಲಿವೆ.
  • ಸಿಂಹ
  • ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ನಿಮಗೆ ಮಸಿ ಬಳಿಯುವ ಪ್ರಯತ್ನ ನಡೆಯುವುದು. ಕಬ್ಬಿಣ ಮುಂತಾದ ಕಟ್ಟಡ ನಿರ್ಮಾಣದ ಸಾಮಗ್ರಿಗಳಿಂದ ಲಾಭವಿದೆ. ಕಾರ್ಖಾನೆ ಕೆಲಸಗಾರರಿಗೆ ಕೆಲಸ ಇರುವುದು.
  • ಕನ್ಯಾ
  • ತಾಯಿಯ ಅಥವಾ ಸೋದರ ಮಾವನ ಆರೋಗ್ಯದ ವ್ಯತ್ಯಾಸದಿಂದ ದಿನಚರಿಯಲ್ಲಿ ಬದಲಾವಣೆ ಉಂಟಾಗುತ್ತದೆ. ರಾಜಕೀಯ ವಿಷಯಗಳಲ್ಲಿ ಮೌನ ವಹಿಸುವುದು ಲೇಸು. ಕೋರ್ಟಿನ ವ್ಯವಹಾರಗಳಲ್ಲಿ ಜಯ.
  • ತುಲಾ
  • ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಏಕಾಗ್ರತೆಯನ್ನು ಕಾಯ್ದುಕೊಳ್ಳಿ. ಇಂದಿನ ಎಲ್ಲಾ ಬೆಳವಣಿಗೆಗಳಿಗೂ ನಾಯಕತ್ವವನ್ನು ವಹಿಸಲಿದ್ದೀರಿ. ಪ್ರೀತಿ-ಪ್ರೇಮದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ.
  • ವೃಶ್ಚಿಕ
  • ಉನ್ನತ ಶಿಕ್ಷಣಕ್ಕಾಗಿ ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಅಧ್ಯಯನ ನಡೆಸುವವರು ವಿದೇಶ ಪ್ರಯಾಣ ಆಲೋಚನೆ ಮಾಡಬಹುದು. ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗುವುದು.
  • ಧನು
  • ಉದ್ಯಮಿಗಳು ಕೆಲಸಗಾರರಲ್ಲಿ ಯಾವುದೇ ಮನಸ್ತಾಪಗಳನ್ನು ಮಾಡಿಕೊಳ್ಳಬೇಡಿ. ಇದು ಸಾಧನೆಯಲ್ಲಿ ಮೇಲಕ್ಕೆ ಸಾಗಲು ಸಹಕಾರಿಯಾಗಲಿದೆ. ವ್ಯವಹಾರದಲ್ಲಿ ಸಣ್ಣ ಪುಟ್ಟ ನಷ್ಟ ಸಂಭವಿಸುತ್ತದೆ.
  • ಮಕರ
  • ವ್ಯವಹಾರ ಸಂಬಂಧಿ ಮಾತುಕತೆಗಳು ಇಂದು ಫಲ ನೀಡಲಿವೆ. ಕೃಷಿ ಕೈಗಾರಿಕೆ ವ್ಯವಹಾರಗಳು ಸಮಾಧಾನಕರ ಆದಾಯ ತರಲಿವೆ. ಕಾನೂನಿಗೆ ವಿರುದ್ಧ ಕೆಲಸವನ್ನು ಮಾಡಬೇಡಿ. ಸಾಲಬಾಧೆ ಕಾಡಲಿದೆ.
  • ಕುಂಭ
  • ಔಷಧ ಮಾರಾಟಗಾರರಿಗೆ ಲಾಭವಾಗುತ್ತದೆ. ಇದುವರೆಗೆ ಗುಪ್ತವಾಗಿದ್ದ ಕೌಟುಂಬಿಕ ವಿಷಯಗಳು ತೆರೆಯ ಮೇಲೆ ಬರಲಿವೆ. ಶತ್ರುಗಳ ವಿರುದ್ಧ ಧೈರ್ಯವಾಗಿ ಹೋರಾಡುವ ಪ್ರಯತ್ನವಿರಲಿ.
  • ಮೀನ
  • ಮಿತ್ರ ವೃಂದದಲ್ಲಿ ಕಂಡು ಬರುವ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಡುವುದರಲ್ಲಿ ಯಶಸ್ವಿಯಾಗುವಿರಿ. ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.