ದಿನ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಉಡುಗೊರೆ ದೊರೆಯಬಹುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ದಿನ ಭವಿಷ್ಯ
ಮೇಷ
ದೇಹದಲ್ಲಿನ ಉಷ್ಣತೆಯನ್ನು ನೀವಾಗಿಯೆ ಆಹಾರದ ಮೂಲಕ ನಿವಾರಿಸಿಕೊಳ್ಳದಿದ್ದರೆ ವೈದ್ಯರ ದರ್ಶನ ಅನಿವಾರ್ಯವಾಗುವುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ದೂರದ ಊರಿಗೆ ಪ್ರಯಾಣ ಬೆಳೆಸುವ ಯೋಗವಿದೆ.
ವೃಷಭ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕುವ ಸುದ್ದಿಯಿಂದ ತುಸು ಸಮಾಧಾನ ಸಿಗುವುದು. ಪಾಲುದಾರಿಕೆಯನ್ನು ಮುಂದುವರೆಸುವ ಯೋಚನೆ ಮಾಡಬಹುದು. ಅದರ ಬಗ್ಗೆ ಋಣಾತ್ಮಕವಾಗಿ ಚಿಂತಿಸದಿರಿ.
ಮಿಥುನ
ವೈದ್ಯರು ಹೊಸ ಖಾಸಗಿ ಕಾರ್ಯಾಲಯವನ್ನು ಮಾಡುವ ಉತ್ತಮವಾದ ಯೋಚನೆ ಮಾಡುವಿರಿ. ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟಗಾರರಿಗೆ ಮತ್ತು ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರುವುದು.
ಕರ್ಕಾಟಕ
ಸರ್ಕಾರಿ ಲೋಕೋಪಯೋಗಿ ಕೆಲಸದ ಗುತ್ತಿಗೆದಾರರು ಕಾಮಗಾರಿಗಳನ್ನು ನಿಮ್ಮೆಡೆಗೆ ಮಾಡಿಕೊಳ್ಳುವ ವಿಚಾರದಲ್ಲಿ ಎಡುವುವಿರಿ. ದಾಯಾದಿಗಳು ನಿಮ್ಮ ಅಭಿವೃದ್ಧಿಗೆ ಅಡ್ಡಗಾಲು ಹಾಕಬಹುದು.
ಸಿಂಹ
ನಿವೇಶನ ಖರೀದಿವ್ಯವಹಾರದಲ್ಲಿ ಮತ್ತೊಮ್ಮೆ ಭೂ ದಾಖಲೆಗಳ ಪರೀಕ್ಷೆ ಅನಿವಾರ್ಯ ಎನಿಸಲಿದೆ. ನೀವು ಇಂದು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮನಸ್ಸಿಗೆ ನೆಮ್ಮದಿ ತರಲಿದೆ.
ಕನ್ಯಾ
ಈ ದಿನ ಬೇರೆಯವರ ಸಹಾಯ ಅಪೇಕ್ಷಿಸದೆ ಕಠಿಣವಾದ ಕಾರ್ಯಗಳನ್ನು ಸಹ ನೀವೆ ಮಾಡಿ. ದೈವಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಲಿದೆ. ಹಣಕಾಸಿನ ವಿವಾದ ಬಗೆಹರಿಸಿಕೊಳ್ಳುವಿರಿ.
ತುಲಾ
ಗುರಿ ಸಾಧಿಸಲು ಅನಿವಾರ್ಯವಿರುವ ಕೆಲವು ಬದಲಾವಣೆ ಮಾಡಿಕೊಳ್ಳಿ. ನಿಮ್ಮಲ್ಲಿದ್ದ ಅಭದ್ರತೆಯ ಭಾವ ಬಿಟ್ಟು ಹೋಗಲಿದೆ. ಸಂಗೀತ ಮತ್ತು ಕಲೆಯಲ್ಲಿ ಅಭಿರುಚಿ ಹೆಚ್ಚಲಿದೆ.
ವೃಶ್ಚಿಕ
ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಮ್ಮ ನಿರ್ಧಾರ ಉತ್ತಮವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ದೇವರ ರಕ್ಷಣೆ ಸಿಗುವುದು. ಸಂಗಾತಿಯಿಂದ ಉಡುಗೊರೆ ದೊರೆಯಬಹುದು.
ಧನು
ಕುಟುಂಬದ ವತಿಯಿಂದ ನಡೆಸಬೇಕಾದ ಸತ್ಕಾರ್ಯಗಳ ಕುರಿತು ಸಮಾಲೋಚಿಸಿ. ಉದಯೋನ್ಮುಖ ಕವಿಗಳಿಗೆ ಛಂದೋಬದ್ಧ ಕೃತಿಗೆ ಹಿರಿಯ ಸಾಹಿತಿಗಳಿಂದ ಉತ್ತಮ ಪ್ರಶಂಸೆ ದೊರೆಯುವುದು.
ಮಕರ
ನೀವು ಇತರರ ಕಷ್ಟಕಾಲದಲ್ಲಿ ಮಾಡಿದ ಉಪಕಾರದ ಫಲಗಳು ಕಷ್ಟಕಾಲದಲ್ಲಿ ನಿಮ್ಮ ಸಹಾಯಕ್ಕೆ ಬರುತ್ತವೆ. ನಿಮ್ಮ ಸರಳತೆಯು ಸಮಾಜದಲ್ಲಿ ನಿಮ್ಮ ಉತ್ತಮ ಗೌರವಕ್ಕೆ ಕಾರಣವಾಗುತ್ತದೆ.
ಕುಂಭ
ಭಾವನೆಯ ಕಲ್ಪನಾ ಲೋಕದ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯ. ಪರಿಚಯವೇ ಇಲ್ಲದ ವ್ಯಕ್ತಿಯು ಕ್ಲಿಪ್ತ ಸಮಯದಲ್ಲಿ ನಿಮಗೆ ಸಹಕಾರವನ್ನು ಮಾಡುವರು.
ಮೀನ
ಸಾಮಾಜಿಕ ಸೇವಾ ಕಾರ್ಯದಲ್ಲಿ ಸಮಯ ವ್ಯರ್ಥವಾಗದಂತೆ ಜಾಗರೂಕತೆ ವಹಿಸಿ. ಸಾಧ್ಯವಾದಷ್ಟೂ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಿ. ಯೋಜನೆಗಳು ವ್ಯವಸ್ಥಿತ ರೂಪದಲ್ಲಿ ಸಾಗಲಿವೆ.