ADVERTISEMENT

ದಿನ ಭವಿಷ್ಯ: ಈ ರಾಶಿಯವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಂಗೀತ ಕ್ಷೇತ್ರದಲ್ಲಿ ನೀವಂದುಕೊಂಡ ಸಾಧನೆ ಮಾಡಲಾಗದೆ ಮನಸ್ಸಿನಲ್ಲಿ  ದುಃಖವನ್ನು ಅನುಭವಿಸುವಿರಿ. ಉದ್ಯೋಗದಲ್ಲಿ ಸಿಗುವ ವರ್ಗಾವಣೆಯ ಅವಕಾಶಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಳ್ಳಬೇಡಿ.
  • ವೃಷಭ
  • ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆಯು ಉತ್ತಮ ರೀತಿಯಲ್ಲಿ ಸಹಕಾರಿ ಆಗುವುದು. ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ನೆಂಟರಿಷ್ಟರ ಕೊಂಕು ಮಾತುಗಳಿಗೆ ಮುಖ ಬಾಡಬಹುದು.
  • ಮಿಥುನ
  • ಮಕ್ಕಳ ವಿಚಾರದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡದು ಸಣ್ಣದು ಎಂಬ ಭೇದ ಮಾಡದೇ ತಕ್ಷಣ ಕಾರ್ಯೋನ್ಮುಖರಾಗುವುದು ಉತ್ತಮ.  ಉತ್ತಮ ವರ್ತನೆಯಿಂದ ಸಂತಸ ಉಂಟಾಗುವುದು.
  • ಕರ್ಕಾಟಕ
  • ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ವ್ಯಾಪಾರದಲ್ಲಿ  ಮಿಶ್ರಫಲವಿರುವುದು.
  • ಸಿಂಹ
  • ನ್ಯಾಯಾಂಗ ವಿಭಾಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಇಂದಿನಿಂದ ವಿಶೇಷ ಆಸಕ್ತಿ. ಪೂರ್ಣಾಯುವನ್ನು ಅನುಭವಿಸದೆ ಕುಟುಂಬಸ್ಥರು ನಿಧನರಾದದ್ದು ದುಃಖವಾಗುತ್ತದೆ. ಆರ್ಥಿಕ ಸಮಸ್ಯೆ ನಿದ್ದೆ ಕೆಡಿಸಲಿದೆ.
  • ಕನ್ಯಾ
  • ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಡುವವರಿಗೆ ವಿದ್ಯಾರ್ಹತೆಗಿಂತ ಸ್ವ–ಪ್ರತಿಭೆ ಬಹಳ ಮುಖ್ಯ. ಮಕ್ಕಳ ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ. ಮಕ್ಕಳ ಅಗತ್ಯಗಳನ್ನು ಪೂರೈಸಿ.
  • ತುಲಾ
  • ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸುವುದು ಅಗತ್ಯ. ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಸ್ನೇಹಿತರ ಮಧ್ಯಸ್ಥಿಕೆಯಿಂದ ಪರಿಹಾರ .
  • ವೃಶ್ಚಿಕ
  • ಆನುವಂಶಿಕ  ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ನಂಬಿಕೆ ಪ್ರತಿಪಾದಿಸಲು ಅಂಜಬೇಡಿ.
  • ಧನು
  • ಪ್ರಯಾಣದಲ್ಲಿ ವಂಚನೆ, ನಷ್ಟದ ಪ್ರಸಂಗಗಳಿದೆ ಎಚ್ಚರಿಕೆಯಿಂದಿರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ.
  • ಮಕರ
  • ಶ್ರದ್ಧೆ, ತಾಳ್ಮೆಯಿಂದ ಹಾಗೂ ಹಿಂದಿನ ಸೋಲು ಹೇಳಿಕೊಟ್ಟ ಪಾಠವನ್ನು ಪಾಲಿಸಿದರೆ ಕಾರ್ಯ ಸಿದ್ಧಿಯಾಗುವುದು.  ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ಪ್ರಥಮವಾಗಿ ತೆಗೆದುಹಾಕಿ.
  • ಕುಂಭ
  • ಜ್ಞಾನ ಸಂಪಾದನಾ ಮಾರ್ಗದಲ್ಲಿ ಉತ್ತಮ ಗುರುವಿನ ಕೊರತೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ಸಾಮಾಜಿಕ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಆ ಮನೋಭಾವವೇ  ಗೆಲುವಿಗೆ ಕಾರಣ.
  • ಮೀನ
  • ತಿಂಗಳ ಕೊನೆಯಲ್ಲಿ ಅನುಭವಿಸಿದ ಹಣದ ಕಷ್ಟವನ್ನು ಇಂದು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಿರಿ.  ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಅಧಿಕಾರದ ಅನುಭವದಿಂದ  ಆತ್ಮಾಭಿಮಾನ ವೃದ್ಧಿಯಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.