ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಹಳದಿ ಬಣ್ಣ ಅಶುಭ ತರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
   
ಮೇಷ
  • ವೃತ್ತಿಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತಾಗಲಿದೆ. ಅದರಿಂದ ಲಾಭ ಪಡೆಯುವಿರಿ. ವಿನಾಯಕನ ದರ್ಶನದಿಂದ ಅನುಕೂಲವಿರುವುದು.
  • ವೃಷಭ
  • ಸ್ನೇಹಿತರ ಹಾಗೂ ಕುಟುಂಬದವರ ಸಲಹೆ ಮೇರೆಗೆ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳುವಿರಿ. ತಂದೆಯ ಆರೋಗ್ಯ ಉತ್ತಮವಾಗಲಿದೆ. ಸಹೋದರನ ವಿದ್ಯಾಭ್ಯಾಸಕ್ಕೆ ನೆರವಾಗುವಿರಿ. ಆದಾಯದಲ್ಲಿ ಕೊರತೆ ಇಲ್ಲ.
  • ಮಿಥುನ
  • ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ಬದಲಾಗಿ ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಂಡಂತೆ ಆಗುವುದು.
  • ಕರ್ಕಾಟಕ
  • ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ಕಾರ್ಯ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಸ್ವಂತವಾಗಿ ವ್ಯವಹಾರ ಮಾಡುವವರು ಪ್ರಗತಿ ಸಾಧಿಸುವರು.
  • ಸಿಂಹ
  • ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮನೆಯವರೊಂದಿಗೆ ಮಾತನಾಡುವಿರಿ. ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯ ಗಳನ್ನು ನಿಶ್ಚಯ ಮಾಡಬಹುದು. ದೇವರ ದರ್ಶನ ಆತ್ಮವಿಶ್ವಾಸ ಹೆಚ್ಚಿಸಲಿದೆ.
  • ಕನ್ಯಾ
  • ಸ್ವಂತ ಉದ್ಯೋಗದವರು ಅಧಿಕ ಬಂಡವಾಳವನ್ನು ಹಾಕುವುದರಿಂದ ಕೈ ಸುಡುವಂತಾಗುವುದು. ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸ ಬೇಕಾಗುವುದು. ಹೊಸ ಗೆಳೆತನ ಬೆಳೆಸಿಕೊಳ್ಳುವಿರಿ.
  • ತುಲಾ
  • ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಹೆಚ್ಚಾದರೂ ಉನ್ನತ ಸ್ಥಾನ ದೊರೆಯಲಿದೆ. ಆರ್ಥಿಕ ಮುನ್ನಡೆ ಸಾಧ್ಯ. ವೈಯಕ್ತಿಕ ಕೆಲಸಗಳಿಗೆ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ.
  • ವೃಶ್ಚಿಕ
  • ನಾಲ್ಕೈದು ದಿನಗಳ ಕಾಲ ಆಹಾರದಲ್ಲಿ ಪಥ್ಯವಿರಲಿ. ಆರೋಗ್ಯ ಸುಧಾರಿಸಲಿದೆ. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆಯು ಸರಿಯಾಗಿರುವುದು. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
  • ಧನು
  • ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಸ್ವಂತವಾಗಿ ಅಭ್ಯಸಿಸಿ. ದೇವಸ್ಥಾನದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ಸಹಾಯ ಅಪೇಕ್ಷಿಸುವವರ ವಿಚಾರದಲ್ಲಿ ಮುಂಜಾಗ್ರತೆ ಇರಲಿ. ಹಳದಿ ಬಣ್ಣ ಅಶುಭ ನೀಡುವುದು.
  • ಮಕರ
  • ಸಾರ್ವಜನಿಕ ಸ್ಥಳಗಳಲ್ಲಿ  ಮನೆಯ ವಿಚಾರಗಳನ್ನು ಚರ್ಚಿಸುವಂಥ ಕೆಲಸ ಮಾಡದಿರಿ. ಆಕಸ್ಮಿಕವಾಗಿ ಹೊಸ ವ್ಯಕ್ತಿಯ ಪರಿಚಯವಾಗಲಿದೆ. ಗಣಕಯಂತ್ರದ ತಯಾರಕರಿಗೆ ಈ ದಿನ ಉತ್ತಮ ದಿನವಾಗಲಿದೆ.
  • ಕುಂಭ
  • ಉಪಯುಕ್ತ ಮಾಹಿತಿಗಳನ್ನು ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುವುದರಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ. ಅಪರಾತ್ರಿಯ ವೇಳೆ ಸಂಚರಿಸುವಾಗ ನಿಶಾಚರಿಗಳಿಂದ ತೊಂದರೆಗೊಳಗಾಗುವ ಸಾಧ್ಯತೆಗಳಿವೆ.
  • ಮೀನ
  • ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಇಂದೊಬ್ಬರ ದಿನದ ಚಟುವಟಿಕೆಗಳನ್ನು ನೋಡಿ ನಿಮ್ಮ ಕಲ್ಪನೆಯ ವಿರುದ್ಧ ರೀತಿಯಲ್ಲಿರುವುದ ಕಂಡು ಆಶ್ಚರ್ಯ ಹೊಂದುವಿರಿ. ಇಂಧನ ವ್ಯಾಪಾರಸ್ಥರಿಗೆ ಬೇಡಿಕೆ ಹೆಚ್ಚಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.