ADVERTISEMENT

ದಿನ ಭವಿಷ್ಯ: ಈ ರಾಶಿಯವರು ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಆಗಸ್ಟ್ 2025, 21:18 IST
Last Updated 9 ಆಗಸ್ಟ್ 2025, 21:18 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇಷ್ಟವಿಲ್ಲದ ಕೆಲಸವನ್ನು ಅನಿವಾರ್ಯಕ್ಕಾದರೂ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಬೇರೇ ಉದ್ಯಮಕ್ಕೆ ಕೈ ಸೇರಿಸುವಂತೆ ಸ್ನೇಹಿತನಿಂದ ಒತ್ತಡ ಬರಬಹುದು. ಆರ್ಥಿಕ ವಿಷಯ ಸರಿಯಾಗಿ ವಿಮರ್ಶಿಸಿ ಉತ್ತರಿಸಿ.
  • ವೃಷಭ
  • ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪತ್ನಿಯ ಸಲಹೆ ಸ್ವೀಕರಿಸುವುದು ಮತ್ತು ತಂದೆಯ ಸಹಾಯವನ್ನು ಕೋರುವುದು ಅಸಹಜವಲ್ಲ. ದೇವರ ಕೃಪೆಯಿಂದ ಜಯ ಸಾಧಿಸುವಿರಿ.
  • ಮಿಥುನ
  • ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ, ಕೆಡಕು ಬಯಸಿದವರು ನಮಗೆ ಸಹಾಯ ಮಾಡಿದಂತೆಯೇ ಕಾಣುವುದು. ಅದರಿಂದಾಗಿ ಮನಸ್ಸಿನ ನೆಮ್ಮದಿ ಇರುತ್ತದೆ. ಶಾಂತಿಯಿಂದ ಕೆಲಸ ಸಾಧಿಸಿ.
  • ಕರ್ಕಾಟಕ
  • ಹಿಂದಿನ ನಿಮ್ಮ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸ ಅವಕಾಶಗಳು ನಿಮ್ಮನ್ನು ಆರಿಸಿ ಬರಲಿದೆ. ಮಹಾಗಣಪತಿಯ ಪ್ರಾರ್ಥನೆ, ಕೆಲಸದಲ್ಲಿ ನೂತನ ಪದ್ಧತಿ ಅಳವಡಿಸಿಕೊಂಡರೆ ಜಯ ಕಾಣುವಿರಿ.
  • ಸಿಂಹ
  • ನಿಮ್ಮ ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ. ಬದಲಾವಣೆಯ ಅಥವಾ ಮೇಲ್ದರ್ಜಿಯ ಹೆಸರಿನಲ್ಲಿ ನಿಮ್ಮತನವನ್ನು ಬಿಡುವುದು ಸರಿಯಲ್ಲ.
  • ಕನ್ಯಾ
  • ಆಪ್ತರೊಬ್ಬರ ನೆರವು ದೊರೆತು ಮಗನ ವಿದ್ಯಾಭ್ಯಾಕ್ಕೆ ಸಹಾಯ ವಾಗಲಿದೆ. ಕುಟುಂಬದವರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಸಹ ಪತ್ತೆಯಾಗುವುವು, ಸಂತೋಷ ವೃದ್ಧಿಯಾಗಲಿದೆ.
  • ತುಲಾ
  • ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ, ಶೀಘ್ರದಲ್ಲಿ ಪೂರ್ತಿಗೊಳಿಸಿಕೊಳ್ಳಲು ನಿರ್ಧಾರ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ತೋರಿ. ಉದ್ವೇಗದ ವಾತಾವರಣ ಎದುರಾಗಬಹುದು.
  • ವೃಶ್ಚಿಕ
  • ಸಂತೋಷದ ನಡುವೆಯೂ ಒತ್ತಡದಿಂದಿರುವುದು ನಿಮ್ಮ ಜಾಯಮಾನ. ಸಕ್ರಿಯ ಹಾಗೂ ಕಾರ್ಯ ಮಗ್ನತೆಯ ದಿನವು ಇದಾಗಿದೆ. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಅತ್ಯಧಿಕವಾಗಿರಲಿದೆ
  • ಧನು
  • ಖರ್ಚು-ವೆಚ್ಚಗಳಲ್ಲಿ ಹಿಡಿತವಿರಲಿ. ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗರೂಕತೆ ವಹಿಸಬೇಕಾಗುವುದು. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ ಸತ್ಫಲ ಉಂಟಾಗುವುದು.
  • ಮಕರ
  • ಬೆಲೆ ಬಾಳುವ ವಸ್ತುಗಳ ಖರೀದಿಯನ್ನು ಮಾಡುವಿರಿ. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಬರುವುವು. ಖಾಸಗೀ ಸಂಸ್ಥೆಯಿಂದ ಹಣ ಪಡೆದು ಸ್ವಂತ ಉದ್ಯಮ ಆರಂಭಿಸುವ ಸಂಭವವಿದೆ.
  • ಕುಂಭ
  • ಮನೆಯಲ್ಲಿ ಸಂತಸದ ವಾತಾವರಣದಿಂದ ಹಿರಿಯರಿಗೆ ನೆಮ್ಮದಿ.ಹೊಸ ಸ್ಥಳದ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ. ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕ ಗೌರವ ಸಿಗಲಿದೆ.
  • ಮೀನ
  • ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆಕಾಣುವ ಸಾಧ್ಯತೆ ಇದೆ. ಅಕ್ಕ ಪಕ್ಕದವರಿಗೆ ಸಹಾಯ ನೀಡಬೇಕಾಗುವುದು. ಶ್ರೀ ಆಂಜನೇಯನ ದರ್ಶನದಿಂದ ಎಲ್ಲಾ ಕಾರ್ಯಗಳು ನೆರವೇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.