ADVERTISEMENT

ದಿನ ಭವಿಷ್ಯ: ಸಾಲಗಳನ್ನು ಇತ್ಯರ್ಥ ಮಾಡದ ಹೊರತು ನಿದ್ರಾದೇವಿ ಸಲಹುವುದಿಲ್ಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಜುಲೈ 2025, 22:43 IST
Last Updated 29 ಜುಲೈ 2025, 22:43 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯೋಚನೆಯಂತೆ ಕೆಲಸ ನೆರವೇರಲು ಪೂರ್ವತಯಾರಿಗೆ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿಕೊಳ್ಳುವುದು ಉತ್ತಮ. ಸಭೆಯಲ್ಲಿ ಮಾತನಾಡುವಾಗ ದಾಕ್ಷಿಣ್ಯ ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದ ಮಾತನಾಡಿರಿ.
  • ವೃಷಭ
  • ವೃತ್ತಿಯ ಪರಿಧಿಯೊಳಗಿನ ವ್ಯಕ್ತಿಗಳ ಮೇಲೆ ಎಷ್ಟೇ ಎಚ್ಚರವಹಿಸಿ ನಂಬಿದರೂ ಕಡಿಮೆಯಾಗುತ್ತದೆ. ವೃತ್ತಿ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತನ ಮೊರೆ ಹೋಗಬೇಕಾಗುವುದು.
  • ಮಿಥುನ
  • ಕುಟುಂಬದಲ್ಲಿ ನಡೆಯುವ ಶುಭಕಾರ್ಯಗಳು ಸಂಭ್ರಮವನ್ನು ಉಂಟುಮಾಡುತ್ತವೆ. ಬ್ಯಾಂಕ್ ಸಂಬಂಧಿತ ಕೆಲಸಗಳು ‌ಸಮಯಕ್ಕೆ ಸರಿಯಾಗಿ ಆಗದೆಯೇ ಇರಬಹುದು. ಜಾರಿಕೆಯ ಸಾಧ್ಯತೆಗಳಿವೆ. ಎಚ್ಚರವಿರಲಿ.
  • ಕರ್ಕಾಟಕ
  • ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಂಬಾ ಅಳೆದು ತೂಗಿ ಮಾತನಾಡುವ ಪ್ರವೃತ್ತಿಯು ಎದುರಿನ ವ್ಯಕ್ತಿಗಳಿಗೆ ದೂರವಿಟ್ಟಿದ್ದಾರೆ ಎಂಬ ಭಾವನೆ ತರಬಹುದು. ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳಿ.
  • ಸಿಂಹ
  • ಯಾವುದೋ ಸಂಶೋಧನೆಯಲ್ಲಿ ತೊಡಗಿರುವ ರಾಸಾಯನಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಸುಡುವ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ. ಕೆಲಸಗಳು ಸತತ ಪ್ರಯತ್ನದಿಂದ ಆಗುತ್ತದೆ. ಚರ್ಮವ್ಯಾಧಿ ಕಾಡಬಹುದು.
  • ಕನ್ಯಾ
  • ಮಾಡುವ ಸಹಾಯವು ಮುಂದಿನ  ಜೀವನಕ್ಕೆ ಸಹಕಾರಿಯಾಗಲಿದೆ. ಇಷ್ಟ ಕ್ಷೇತ್ರದಲ್ಲಿ ಹೊಸ ಉದ್ಯೋಗ ಪಡೆಯುವವರಿಗೆ ಕೆಲಸ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಲಿದೆ.
  • ತುಲಾ
  • ಯಾರದೆಂದು ಗೊತ್ತಿರದ ಅಪರಾಧಗಳನ್ನು ಬೆಳಕಿಗೆ ತರಲುಹೋಗಿ ಅಪರಾಧಿ ಎನ್ನುವ ಪದವಿ ತಲೆ ಏರುವ ಸಾಧ್ಯತೆ ಇದೆ. ಸಾಲಗಳನ್ನು ಇತ್ಯರ್ಥ ಮಾಡದ ಹೊರತು ನಿದ್ರಾದೇವಿ ಸಲಹುವುದಿಲ್ಲ.
  • ವೃಶ್ಚಿಕ
  • ಸಣ್ಣ ಕಿಚ್ಚಿನಿಂದ ದೊಡ್ಡ ಬೆಂಕಿ ಹೊತ್ತುವಂತೆ ಸಣ್ಣ ಜಗಳಗಳೇ ಮುಂದೆ ದೊಡ್ಡ ಮನಸ್ತಾಪಗಳಿಗೆ ಕಾರಣವಾಗಬಹುದು. ದಿನಸಿ ಅಂಗಡಿಯ ಮಾಲೀಕರಿಗೆ ಗುಣಮಟ್ಟದ ವಸ್ತು ಪೂರೈಸುವುದೇ ಕಷ್ಟವಾಗುವುದು.
  • ಧನು
  • ಶೂರತ್ವ ಪ್ರದರ್ಶನ ಬರಿಯ ಕನ್ನಡಿಯ ಮುಂದಾಗದೆ ಅಧಿಕಾರಿಗಳ ಮುಂದೆ ತೋರಿಸಿದಲ್ಲಿ ಕೆಲಸಗಳು ಮುಂದುವರಿಯಬಹುದು. ಸ್ವಂತ ತೀರ್ಮಾನದ ಔಷಧಿಯು ಅಡ್ಡಪರಿಣಾಮ ಬೀರಬಹುದು.
  • ಮಕರ
  • ಹಾಸ್ಯ ವ್ಯಕ್ತಿತ್ವವನ್ನು ಅನುಭವಿಸಿ ಸಾಥ್ ಕೊಡುವ ಯೋಗ್ಯ ವ್ಯಕ್ತಿಯೊಂದಿಗೆ ಆನಂದ ದಿನವನ್ನು ಕಳೆಯುವಿರಿ. ನಿರ್ವಾಹಕರಿಗೆ ಅದ್ದೂರಿಯಾದ ಕಾರ್ಯಕ್ರಮ ನಿರ್ವಹಿಸುವ ಜವಾಬ್ದಾರಿ ಸಿಗಬಹುದು.
  • ಕುಂಭ
  • ದೇಹಾಲಸ್ಯವು ವಿಶೇಷವಾಗಿ ವಿದ್ಯಾರ್ಥಿಗಳನ್ನು ಕಾಡಲಿದೆ. ಆಲಸಿಯಾಗದಿರಿ. ಕೆಲವು ಶೋಕಿ ಎನ್ನಿಸುವ ಅಭ್ಯಾಸಗಳು ಇತರಿಗೆ ಅಡ್ಡಿಯಾಗುವಂತಿದ್ದಲ್ಲಿ ಆ ಅಭ್ಯಾಸವನ್ನು ಕೈಬಿಡುವ ಕಾರ್ಯವನ್ನು ಮಾಡಿ.
  • ಮೀನ
  • ಅರ್ಹತೆಗೆ ತಕ್ಕಂತಹ ಕೆಲಸವಿಲ್ಲವೆಂದು ಕೊರಗುತ್ತಿರುವವರು ಬೇಕಾದಂಥ ಉದ್ಯೋಗಾವಕಾಶವನ್ನು ಹುಡುಕುವಿರಿ. ಪ್ರಕೃತಿಯ ವಿಸ್ಮಯ  ರೂಪು–ರೇಷೆಗಳಿಗೆ ಮಾರುಹೋಗುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.