ಮಾಸ ಭವಿಷ್ಯ ಡಿಸೆಂಬರ್ 2025: ಸ್ನೇಹಿತರಿಗೆ ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟ
ಅರುಣ ಪಿ.ಭಟ್ಟ
Published 1 ಡಿಸೆಂಬರ್ 2025, 9:02 IST
Last Updated 1 ಡಿಸೆಂಬರ್ 2025, 9:02 IST
ಮಾಸ ಭವಿಷ್ಯ
ಮೇಷ
ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಂತೋಷಪಡುತ್ತಾರೆ. ತಿಂಗಳ ಆರಂಭದಲ್ಲಿ ನೀವು ಸ್ವಲ್ಪ ಸಮಸ್ಯೆಯನ್ನು ಅನುಭವಿಸುತ್ತೀರಿ. ಚಿಕ್ಕ ಆರೋಪವನ್ನು ಎದುರಿಸಬೇಕಾಗುವುದು. ಇದರಿಂದ ನಿಮ್ಮ ಮನಸ್ಸಿಗೆ ಹಾನಿಯಾಗುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ವ್ಯಾಪಾರದಲ್ಲಿ ಹಾನಿಯನ್ನು ಎದುರಿಸಬೇಕಾಗುತ್ತದೆ. ಚಿಕ್ಕ ಪ್ರವಾಸ ಕೈಗೊಳ್ಳುವಿರಿ ಅದರಿಂದ ಮನಸಿಗೆ ಸಂತಸ ಸಿಗುವುದು. ಭೂ ವ್ಯವಹಾರಕ್ಕೆ ಉತ್ತಮ ಸಮಯವಿದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಶುಭ. 14,18,21, ಅಶುಭ.16,19,22
ವೃಷಭ
ಬಹು ದಿನಗಳ ಗೃಹ ಕಲಹಕ್ಕೆ ಮುಕ್ತಿ ದೊರೆಯುವುದು. ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಉತ್ತಮ ಯಶ. ಸರಕಾರಿ ನೌಕರದಾರರಿಗೆ ಪದೋನ್ನತಿ ಯಶ, ಇಚ್ಚಿತ ಸ್ಥಳಕ್ಕೆ ಬದಲಾವಣೆ. ತಿಂಗಳಾಂತ್ಯದಲ್ಲಿ ಆಪ್ತರಿಂದ ಸನ್ಮಾನ. ಕಾಗದ ಪತ್ರಗಳ ಕೆಲಸ ಸರಾಗ. ಹಳೆಯ ಸ್ನೇಹಿತರು ಸಾಲ ಕೇಳಿದರು ಎಂದು ತಕ್ಷಣ ನೀಡಿದರೆ ವಾಪಸ್ ಬರುವುದು ಕಷ್ಟ. ಕಾನೂನು ವಿಚಾರಗಳು ನಿಮ್ಮ ವಿರುದ್ಧ ಸಾಗುತ್ತವೆ. ಬೇರೊಬ್ಬರು ನೀಡಿದ ವಸ್ತು, ಹಣ, ಕಾಗದ ದಾಖಲೆ ಪತ್ರಗಳನ್ನು ನೀವು ಕಳೆದುಕೊಳ್ಳುವ ಅವಕಾಶ ಇದ್ದು, ಒಂದೋ ಅಂಥ ಜವಾಬ್ದಾರಿ ವಹಿಸಿಕೊಳ್ಳಬೇಡಿ ಅನಿವಾರ್ಯವಾಗಿ ಜವಾಬ್ದಾರಿ ಬಂದರೆ ಎಚ್ಚರಿಕೆಯಿಂದ ನಿರ್ವಹಿಸಿ. ಶುಭ. 14,19,24, ಅಶುಭ. 13,22,26
ಮಿಥುನ
ಈ ತಿಂಗಳ ಮೊದಲಾರ್ಧದಲ್ಲಿ ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಮನೆಗೆ ಅಗತ್ಯ ಇರುವ, ದುಬಾರಿ ವಸ್ತುಗಳನ್ನು ಖರೀದಿಸುವ ಯೋಗ ಇದೆ. ಪ್ರೀತಿಪಾತ್ರರು ಅಥವಾ ವಿವಾಹಿತರಿಗೆ ಸಂಗಾತಿಯೊಂದಿಗೆ ಬಾಂಧವ್ಯ ಗಟ್ಟಿಯಾಗಲಿದೆ. ವೃತ್ತಿಪರರಿಗೆ ಕೆಲಸ ಕಾರ್ಯಗಳಲ್ಲಿ ಒತ್ತಡ ಇರಲಿದೆ. ಅನಗತ್ಯ ವಿವಾದಗಳಲ್ಲಿ ನಿಮ್ಮನ್ನು ವಿರೋಧಿಗಳು ಎಳೆಯುವ ಸಾಧ್ಯತೆ ಇದೆ. ಆದರೆ ನಿಮ್ಮ ಜಾಗ್ರತೆ ಹಾಗೂ ಸಕಾರಾತ್ಮಕ ಆಲೋಚನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಕೌಟುಂಬಿಕವಾಗಿ ಬಹಳ ನೆಮ್ಮದಿಯಾಗಿ ಇರುತ್ತೀರಿ. ಶುಭ. 18,21,25, ಅಶುಭ. 16,22,24
ಕರ್ಕಾಟಕ
ಸ್ಥಿರಾಸ್ತಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಗತಿ ಇದೆ. ಪೋಷಕರ ಜತೆಗೆ ಈ ಹಿಂದೆ ಮನಸ್ತಾಪಗಳು ಆಗಿದ್ದಲ್ಲಿ ಅವುಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದೀರಿ. ಕುಟುಂಬದಲ್ಲಿನ ಒಗ್ಗಟ್ಟು ಎಷ್ಟು ಮುಖ್ಯ ಎಂಬ ವಿಚಾರ ನಿಮಗೆ ಮನದಟ್ಟಾಗುತ್ತದೆ. ಅದನ್ನು ಸಾಧಿಸಲು ನಾನಾ ದಾರಿಯನ್ನು ಕಂಡುಕೊಳ್ಳುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಒಳ್ಳೆ ಲಾಭ ಮಾಡುವ ಅವಕಾಶ ದೊರೆಯಲಿದೆ. ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಲು ಕೆಲವು ಯೋಜನೆಗಳನ್ನು ರೂಪಿಸಲಿದ್ದೀರಿ. ನಿಮ್ಮ ಬುದ್ಧಿವಂತಿಕೆ, ಸಾಮರ್ಥ್ಯದ ಬಗ್ಗೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಲಿದ್ದಾರೆ. ಮನೆಯಲ್ಲಿ ಸಂತೋಷ ಇರಲಿದೆ. ಶುಭ. 16,18,23, ಅಶುಭ. 15,22,27
ಸಿಂಹ
ನಿಮ್ಮ ವರ್ಚಸ್ಸು ಹಾಳು ಮಾಡಲು ವಿರೋಧಿ ಪಾಳಯದವರು ಬಹಳ ಪ್ರಯತ್ನ ಪಡುತ್ತಾರೆ. ನೀವು ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲ ಇದೆ. ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿಕಾರ್ಯಗಳನ್ನು ಹಾಗೂ ಘನತೆ ಹೆಚ್ಚಳ ಆಗಲಿದೆ.ವಿದೇಶಗಳಲ್ಲಿ ಕಾರ್ಯ ನಿರ್ವಹಿಸಲು ಬಯಸಿದವರಿಗೆ ಶುಭ ವಾರ್ತೆಗಳು ಬರಲು ಆರಂಭವಾಗುತ್ತವೆ. ಆರ್ಥಿಕ ಹೂಡಿಕೆಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ನೀವು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಸಾಕು, ಉತ್ತಮ ಫಲಿತಾಂಶ ದೊರೆಯುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಕೈ ಮೇಲಾಗಲಿದೆ. ಆದರೆ ಆರೋಗ್ಯ ಮತ್ತು ಪ್ರೀತಿ ಪ್ರೇಮದ ವಿಚಾರದಲ್ಲಿ ಏರಿಳಿತಗಳನ್ನು ಕಾಣಲಿದ್ದೀರಿ. ಶುಭ.14.22.29. ಅಶುಭ. 16.19.27
ಕನ್ಯಾ
ದಾನ ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಅದಕ್ಕೆ ನಿಮ್ಮ ಕುಟುಂಬದ ಬೆಂಬಲವೂ ದೊರೆಯುತ್ತದೆ. ಆದಾಯ ಮೂಲಗಳಿಂದ ಉತ್ತಮ ವರಮಾನ ಇರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಸಂತೋಷ ಕೂಡ ಉಂಟಾಗುತ್ತದೆ. ನಿಮ್ಮ ಜೀವನಶೈಲಿ ಮತ್ತಷ್ಟು ಉತ್ತಮಗೊಳ್ಳುತ್ತದೆ. ಬಹಳ ಕಾಲದಿಂದ ನೀವು ಖರೀದಿ ಮಾಡಬೇಕು ಎಂದಿದ್ದ ವಸ್ತುವೊಂದರ ಖರೀದಿ ಮಾಡುತ್ತೀರಿ. ಶುಭ. 11,16,28, ಅಶುಭ. 15,19,26
ತುಲಾ
ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ತಿಂಗಳ ಆರಂಭದಲ್ಲಿ ಅದ್ಭುತವಾದ ಯಶಸ್ಸು ದೊರೆಯುವ ಅವಕಾಶಗಳಿವೆ. ಕ್ರೀಡೆ, ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವಯುತವಾದ ಸ್ಥಾನಮಾನ ದೊರೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಾಣಿಸುತ್ತದೆ. ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಮಕ್ಕಳ ಪ್ರಗತಿ ನಿಧಾನ ಆಗುವುದರಿಂದ ಚಿಂತೆಗೆ ಕಾರಣವಾಗುತ್ತದೆ. ತಂತ್ರಜ್ಞಾನ ಹಾಗೂ ಮ್ಯಾನೇಜ್ ಮೆಂಟ್ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉತ್ತಮವಾದ ಪ್ರಗತಿ ಕಾಣಲಿದೆ. ಕೆಲ ನಿರ್ದಿಷ್ಟ ಕೆಲಸಗಳನ್ನು ಪೂರೈಸಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಶುಭ. 10,16,26, ಅಶುಭ. 12,18,28
ವೃಶ್ಚಿಕ
ಉದ್ಯೋಗದ ಕಡೆಗೆ ನಿಮ್ಮ ಗಮನ ಹೆಚ್ಚಾಗುತ್ತದೆ ತಿಂಗಳ ಮೊದಲ ಭಾಗದಲ್ಲಿ ನಿಮ್ಮ ಪಾಲಿಗೆ ಅದೃಷ್ಟ ಇರಲಿದೆ. ದೊಡ್ಡ ಮಟ್ಟದ ಪ್ರಶಸ್ತಿಗೆ ಪಾತ್ರರಾಗಲಿದ್ದೀರಿ. ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ತಿಂಗಳ ದ್ವಿತೀಯಾರ್ಧದಲ್ಲಿ ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಇಂಟರ್ ವ್ಯೂಗಳಲ್ಲಿ ಯಶಸ್ಸು ಸಿಗಲಿದೆ. ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ನಿಮ್ಮ ಮಕ್ಕಳ ಉದ್ಯೋಗ ವಿಚಾರದಲ್ಲಿ ಸಹಾಯ ಮಾಡಲಿದ್ದೀರಿ. ಶುಭ.14,16,22, ಅಶುಭ. 07,11,26
ಧನು
ವೃತ್ತಿಪರ ಜೀವನದಲ್ಲಿ ಸ್ವಚ್ಛ ವ್ಯಕ್ತಿತ್ವ ಎಂಬ ಹೆಸರು ಪಡೆಯಲಿದ್ದೀರಿ. ನಿಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಪಡೆಯಲು ಹಲವು ಅವಕಾಶಗಳು ದೊರೆಯಲಿವೆ. ಸ್ಥಿರತೆ ಹಾಗೂ ದೃಢತೆ ಕಾಪಾಡಿಕೊಂಡು ಪ್ರಗತಿಯತ್ತ ಹೆಜ್ಜೆಗಳನ್ನು ಇಡುತ್ತೀರಿ. ತಂದೆ ಜತೆಗೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಮನೆಯಲ್ಲಿ ಸಂತೋಷವಾದ ವಾತಾವರಣ ಇರುತ್ತದೆ. ಈ ಅವಧಿಯಲ್ಲಿ ಉದ್ಯೋಗಸ್ಥರು ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳ. ಸಂಭವನೀಯ ಅಪಾಯಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಪಾಲಿಗೆ ದೈವ ಬಲವಿದೆ. ಸಾಮಾಜಿಕ ಜೀವನದಲ್ಲೂ ಉತ್ತಮ ಸ್ಥಾನ ಮಾನ ಪಡೆಯಲಿದ್ದೀರಿ. ವೈಯಕ್ತಿಕ ಸಂಬಂಧದಲ್ಲಿ ಬಹಳ ಒಳ್ಳೆ ಬಾಂಧವ್ಯ ಏರ್ಪಡುತ್ತದೆ. ಶುಭ. 09,14,26, ಅಶುಭ. 17,23,28
ಮಕರ
ಬಹಳ ಸಂತೋಷವಾಗಿ ಇರುತ್ತೀರಿ. ಆದಾಯಕ್ಕೆ ಸಂಬಂಧಿಸಿದ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶ ಇದೆ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಪಡೆಯುವ ಅವಕಾಶಗಳು ದೊರೆಯಲಿವೆ. ನಿಮ್ಮ ಮಗ ಅಥವಾ ಮಗಳ ಮದುವೆಯ ವಿಚಾರವನ್ನು ಅಂತಿಮಗೊಳಿಸುವ ಅವಕಾಶ ಇದೆ. ಸ್ಪರ್ಧೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇರುವವರು ಅತ್ಯುತ್ತಮ ಸಾಧನೆ ಮಾಡಲು ಅವಕಾಶ ದೊರೆಯಲಿದೆ. ಕಾಲು ನೋವಿನ ಸಮಸ್ಯೆ ಕಾಡಬಹುದು. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯ ಸುಧಾರಿಸುತ್ತದೆ. ಶುಭ. 11,14,25, ಅಶುಭ. 15,26,29
ಕುಂಭ
ತಿಂಗಳ ಶುರುವಿನಿಂದಲೇ ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಸಾಮಾಜಿಕವಾಗಿ ಗೌರವ- ಮನ್ನಣೆಗಳನ್ನು ಪಡೆಯಲಿದ್ದೀರಿ. ಮಕ್ಕಳ ಪ್ರಗತಿಯಿಂದ ಸಮಾಧಾನ ದೊರೆಯಲಿದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನಿರೀಕ್ಷಿತವಾದ ಯಶಸ್ಸು ದೊರೆಯಲಿದೆ. ವೈಯಕ್ತಿಕ ಸಂಬಂಧದಲ್ಲಿ ಮಧುರವಾದ ಕ್ಷಣಗಳನ್ನು ಅನುಭವಿಸಲಿದ್ದೀರಿ. ಜತೆಯಲ್ಲಿ ಇರುವವರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಇದರಿಂದ ನಿಮಗೆ ಸಂತೋಷವಾಗುತ್ತದೆ. ಶುಭ. 08,16,22, ಅಶುಭ. 12,24,29
ಮೀನ
ಮಾಸದ ಶುರುವಿನಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಅದರಲ್ಲೂ ವೈಜ್ಞಾನಿಕ ರಂಗದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಬೌದ್ಧಿಕ ಸಾಮರ್ಥ್ಯ ವೃದ್ಧಿ ಆಗಲಿದೆ. ಹೆಚ್ಚುವರಿ ಆದಾಯ ಮೂಲದಿಂದ ಅತ್ಯುತ್ತಮ ಪ್ರಮಾಣದ ಲಾಭವನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಜೀವನಮಟ್ಟ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತೀರಿ. ತಿಂಗಳ ದ್ವಿತೀಯಾರ್ಧದಲ್ಲಿ ದೊಡ್ಡ ಮಟ್ಟದ ಯಶಸ್ಸು ನಿಮ್ಮ ಪಾಲಿಗೆ ದೊರೆಯಲಿದೆ. ದೂರದ ಅಥವಾ ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ನೇಹಿತರಿಂದ ಶುಭ ವಾರ್ತೆ ಕೇಳಲಿದ್ದೀರಿ. ನಿಮ್ಮ ಆರೋಗ್ಯ ಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ತಿಂಗಳಾಂತ್ಯದಲ್ಲಿ ಸಕಾರಾತ್ಮಕ ಫಲಿತಾಂಶ ನಿರೀಕ್ಷೆ ಮಾಡಬಹುದು. ಆರೋಗ್ಯವು ಸ್ಥಿರವಾಗಿರುತ್ತದೆ. ಚೈತನ್ಯ ಕೂಡ ಇರುತ್ತದೆ. ಶುಭ, 09,17,25, ಅಶುಭ, 10,18,29