ADVERTISEMENT

ದಿನ ಭವಿಷ್ಯ: ಅಕ್ಟೋಬರ್ 20 ಶುಕ್ರವಾರ 2023- ಈ ರಾಶಿಯವರಿಗೆ ನೆಮ್ಮದಿಯ ಸುದ್ದಿ

ದಿನ ಭವಿಷ್ಯ: ಅಕ್ಟೋಬರ್ 20 ಶುಕ್ರವಾರ 2023

ಪ್ರಜಾವಾಣಿ ವಿಶೇಷ
Published 19 ಅಕ್ಟೋಬರ್ 2023, 18:31 IST
Last Updated 19 ಅಕ್ಟೋಬರ್ 2023, 18:31 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭ ಮಾಡಿದಲ್ಲಿ ನಿಧಾನವಾಗಿ ಅಭಿವೃದ್ಧಿಯ ಹಾದಿ ಹಿಡಿಯುವಿರಿ.
  • ವೃಷಭ
  • ಆಪ್ತರು ಎಂದು ನೀವು ತಿಳಿದ ವ್ಯಕ್ತಿಗಳು ನಿಮ್ಮ ಆಪತ್ತಿನ ಕಾಲಕ್ಕೆ ಸಹಾಯವನ್ನು ಮಾಡದೇ ಇರಬಹುದು. ನಿಮ್ಮ ಊರಿನ ಪ್ರಮುಖರಿಂದ ನಿಮ್ಮ ಅಪೇಕ್ಷೆ ಇಲ್ಲದಿದ್ದರೂ ಕೂಡ ನಿಮಗೆ ಬೇಕಾದ ಕೆಲಸಗಳು ನಡೆಯಬಹುದು.
  • ಮಿಥುನ
  • ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿದೆ. ಸಮಸ್ಯೆಗಳನ್ನು ಯಾವುದೇ ಗಲಾಟೆಗಳಿಲ್ಲದೆ ನಾಜೂಕಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ನೆಡೆಸಿ. ಕ್ರೀಡಾ ಚಟುವಟಿಕೆಗಳು ಹೆಚ್ಚುವುದು.
  • ಕರ್ಕಾಟಕ
  • ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ ಕಳೆದುಕೊಳ್ಳಬೇಡಿ, ಸಮಾಧಾನ ಇರಲಿ. ಅನೇಕ ದಿನಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಉಪಶಮನವಾಗಲಿದೆ. ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿ ಕೇಳುವಿರಿ.
  • ಸಿಂಹ
  • ಮಗಳ ಜೀವನದ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಮಗನ ಉದ್ಯೋಗದಲ್ಲಿನ ಪ್ರಗತಿಯಿಂದ ಸಂತೋಷವಾಗುತ್ತದೆ. ಧಾರ್ಮಿಕ ಶ್ರದ್ಧೆ ಬೆಳೆಸಿಕೊಳ್ಳುವ ಪ್ರಯತ್ನ ಮಾಡಿರಿ.
  • ಕನ್ಯಾ
  • ನಿಮ್ಮ ಅಧಿಕ ಶ್ರಮದಿಂದ ನಿಮ್ಮ ಕನಸಿನ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗುವುದು. ಬುದ್ಧಿಕೌಶಲ್ಯದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ. ಬಟ್ಟೆ ಉದ್ಯಮದವರಿಗೆ ಇಂದು ಲಾಭ ಬರುವುದು.
  • ತುಲಾ
  • ನೆರೆಯವರ ಸಹಾಯ ಸಹಕಾರ ಕೇಳುವ ಸಂದರ್ಭ ಬರಲಿದೆ. ಆದರೇ, ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ.
  • ವೃಶ್ಚಿಕ
  • ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ವಿಶೇಷ ಗಮನ ವಹಿಸಿ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
  • ಧನು
  • ನಿಧಾನ ಗತಿಯಲ್ಲಿ ನಡೆಯುತ್ತಿದ್ದ ಕಾರ್ಯಗಳು ಮಹಾಗಣಪತಿಯ ಆಶೀರ್ವಾದದಿಂದ ಶೀಘ್ರಗತಿಯನ್ನು ಹೊಂದಿ ಪ್ರಗತಿಯನ್ನು ಹೊಂದುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
  • ಮಕರ
  • ಕೋರ್ಟು ಕಛೇರಿ ವ್ಯವಹಾರದಲ್ಲಿ ಜಯ ಪಡೆಯುವ ಬಗ್ಗೆ ಅಧಿಕಪ್ರಯತ್ನವಿರಲಿ. ಹಳೆಯ ವಾಹನ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ‌ಗಮನವಿರಲಿ. ಮದುವೆಯ ಸಲುವಾಗಿ ವಸ್ತ್ರಾಭರಣದ ಖರೀದಿಸಬಹುದು.
  • ಕುಂಭ
  • ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಕುಟುಂಬದಲ್ಲಿ ಚರ್ಚೆ ನೆಡೆಯುವುದು ಹಾಗೂ ಅದಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ಉದ್ಯೋಗ ವ್ಯವಹಾರಗಳಲ್ಲಿ ತೊಂದರೆಗಳಿರುವುದಿಲ್ಲ.
  • ಮೀನ
  • ಆಡಳಿತಾರೂಢ ಜನರ ಸಂಪರ್ಕದಿಂದ ಕೆಲಸಗಳನ್ನು ಸಾಧಿಸಿಕೊಳ್ಳಲು ಕಷ್ಟವೆನಿಸುವುದು. ನಿಮ್ಮ ದುಡುಕು ನಿರ್ಧಾರಗಳಿಂದ ಮುಖಭಂಗವಾಗುವ ಲಕ್ಷಣಗಳಿವೆ. ಷೇರು ವ್ಯವಹಾರ, ಸಿನೆಮಾ ತಯಾರಿಕೆಯು ಲಾಭ ತರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.