ADVERTISEMENT

ದಿನ ಭವಿಷ್ಯ: ಡಿಸೆಂಬರ್ 13 ಬುಧವಾರ 2023- ಅನಿರೀಕ್ಷಿತ ಪ್ರಯಾಣದ ಸಂಭವ

ದಿನ ಭವಿಷ್ಯ: ಡಿಸೆಂಬರ್ 13 ಬುಧವಾರ 2023

ಪ್ರಜಾವಾಣಿ ವಿಶೇಷ
Published 12 ಡಿಸೆಂಬರ್ 2023, 18:31 IST
Last Updated 12 ಡಿಸೆಂಬರ್ 2023, 18:31 IST
<div class="paragraphs"><p>ದಿನ ಭವಿಷ್ಯ: ಡಿಸೆಂಬರ್ 13 ಬುಧವಾರ 2023- ಅನಿರೀಕ್ಷಿತ ಪ್ರಯಾಣದ ಸಂಭವ</p></div>

ದಿನ ಭವಿಷ್ಯ: ಡಿಸೆಂಬರ್ 13 ಬುಧವಾರ 2023- ಅನಿರೀಕ್ಷಿತ ಪ್ರಯಾಣದ ಸಂಭವ

   
ಮೇಷ
  • ರಕ್ತದೊತ್ತಡ ಇರುವವರು ಆಹಾರ ಪದ್ಧತಿಯಿಂದಲೇ ಅದನ್ನು ನಿಯಂತ್ರಿಸಿಕೊಳ್ಳಲು ಯತ್ನಿಸಿ. ಇತರರು ಅವಿರೋಧ ಆಯ್ಕೆಗೆ ಒಲವು ತೋರುವುದರಿಂದ ನೀವು ಸುಲಭವಾಗಿ ಸ್ಥಾನಗಳಿಸುವಲ್ಲಿ ಯಶಸ್ವಿಯಾಗುವಿರಿ
  • ವೃಷಭ
  • ಮಗಳ ಮದುವೆ ವಿಚಾರದಲ್ಲಿ ಇಂದು ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದದ್ದು. ಸಾಂಸಾರಿಕವಾಗಿ ನಿಮ್ಮ ನಿರ್ಣಯಗಳನ್ನು ಎಲ್ಲರೂ ಬೆಂಬಲಿಸಲಿದ್ದಾರೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
  • ಮಿಥುನ
  • ಪಾಲುದಾರಿಕೆಯಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಲಿದೆ. ಆದರೆ, ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸದಲ್ಲಿ ವಿಘ್ನಗಳು ಎದುರಾಗಲಿದೆ. ಧಾರ್ಮಿಕತೆ ಅನುಸರಿಸುವುದರಿಂದ ಶುಭವಾಗಲಿದೆ.
  • ಕರ್ಕಾಟಕ
  • ವ್ಯವಹಾರದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳುವಿರಿ. ಮಗಳ ವಿದೇಶ ಪ್ರಯಾಣದ ತಯಾರಿಯಲ್ಲಿ ನೀವು ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅನಿವಾರ್ಯವಾಗಲಿದೆ.
  • ಸಿಂಹ
  • ಆಹಾರದ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತರಾಗಿ ಸಿಕ್ಕಿಕೊಳ್ಳಬೇಡಿ. ಗುತ್ತಿಗೆ ವೃತ್ತಿಯವರಿಗೆ ತಮ್ಮ ಮನೋಬಯಕೆ ಈಡೇರಲಿದೆ. ಅನಾರೋಗ್ಯದಿಂದ ಇರುವ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
  • ಕನ್ಯಾ
  • ನಿಮ್ಮ ದೊಡ್ಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲು ಈ ದಿನ ಸೂಕ್ತ. ತಂದೆ-ತಾಯಿಯ ಆರೈಕೆಯಿಂದ ಪುಣ್ಯ ಸಂಪಾದನೆಯಾಗಲಿದೆ. ಹಳದಿ ವಸ್ತ್ರವು ಇಂದು ಶುಭ ತರಲಿದೆ.
  • ತುಲಾ
  • ವೈವಾಹಿಕ ವಿಚಾರದಲ್ಲಿ ನಿಮ್ಮ ಮನದ ಅಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಹೈನುಗಾರಿಕೆಯಲ್ಲಿ ಆದಾಯ ವೃದ್ಧಿಯಾಗಲಿದೆ. ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು.
  • ವೃಶ್ಚಿಕ
  • ನಿಮ್ಮ ಅನ್ವೇಷಣೆಯ ಸ್ವಭಾವವು ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ತಿರುವು ತರಲಿದೆ. ಮಕ್ಕಳಿಗೆ ವ್ಯವಹಾರ ಒಪ್ಪಿಸಿ ನೆಮ್ಮದಿಯಿಂದ ವಿಶ್ರಾಂತಿ ಜೀವನದಲ್ಲಿ ಇರಲು ಇಚ್ಛಿಸುವಿರಿ. ಶೀತ ಬಾಧೆಯ ಸಾಧ್ಯತೆ ಇದೆ.
  • ಧನು
  • ಹಿಂದೆ ನಡೆದ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ. ಈ ದಿನವನ್ನು ಪರೋಪಕಾರಕ್ಕಾಗಿ ಮೀಸಲಿಡಬೇಕಾಗಲಿದೆ. ವೃತ್ತಿಯ ಪರವಾಗಿ ಶತ್ರುಗಳ ವಿರುದ್ಧ ಹೋರಾಟ ನಡೆಸಬೇಕಾಗಲಿದೆ.
  • ಮಕರ
  • ನಿಮ್ಮ ಭಾವನೆಗಳ ಜೊತೆಗೆ ನಿಮ್ಮ ಅಭಿಪ್ರಾಯವು ಬದಲಾಗುವ ಕಾಲವಿದು. ಹಾಗಾಗಿ ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಜನರೊಂದಿಗೆ ಬೆರೆತು ಬಾಳುವ ಅಭ್ಯಾಸ ಮಾಡಿಕೊಳ್ಳಿರಿ.
  • ಕುಂಭ
  • ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವ ಮನಸ್ಸಾಗಲಿದೆ. ಇದರಿಂದ ಲಾಭವೇ ಆಗಲಿದೆ. ವೈವಾಹಿಕ ಮಾತುಕತೆಗಳು ಪ್ರಗತಿ ಪಥದತ್ತ ಸಾಗುವುದಕ್ಕೆ ರಾಮನನ್ನು ಪ್ರಾರ್ಥಿಸಿ.
  • ಮೀನ
  • ತಂದೆ ತಾಯಿಯ ಆರೋಗ್ಯವು ಉತ್ತಮವಾಗಿ ಸುಧಾರಿಸುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸುದಿನ. ಅನಿರೀಕ್ಷಿತ ಪ್ರಯಾಣದ ಸಂಭವವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.