ADVERTISEMENT

ದಿನ ಭವಿಷ್ಯ: ಫೆಬ್ರುವರಿ 23 ಶುಕ್ರವಾರ 2024– ವಿವಾಹ ಪ್ರಸ್ತಾಪವು ಬಲಗೊಳ್ಳಲಿದೆ

ದಿನ ಭವಿಷ್ಯ: ಫೆಬ್ರುವರಿ 23 ಶುಕ್ರವಾರ 2024

ಪ್ರಜಾವಾಣಿ ವಿಶೇಷ
Published 22 ಫೆಬ್ರುವರಿ 2024, 19:07 IST
Last Updated 22 ಫೆಬ್ರುವರಿ 2024, 19:07 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯಿದ್ದು ಸಂತೋಷದಿಂದಿರುವಿರಿ. ಮಾರಾಟದ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಬಹುದು.
  • ವೃಷಭ
  • ಗೋವಿನ ಸೇವೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ತಾನಾಗಿಯೇ ಗೋಚರಿಸಲಿದೆ. ಉತ್ಸಾಹ ಹೆಚ್ಚಿಸುವ ಪ್ರೋತ್ಸಾಹಕರ ಸುದ್ದಿ ಕೇಳುತ್ತೀರಿ. ಸಾರಿಗೆ ಉದ್ಯೋಗದವರಿಗೆ ಉತ್ತಮ ದಿನ.
  • ಮಿಥುನ
  • ಕುಟುಂಬದಲ್ಲಿ ಆಸ್ತಿಯ ಸಂಬಂಧಿತ ಎದುರಾದ ಸಮಸ್ಯೆಗಳು ನಿರಾತಂಕವಾಗಿ ಮುಗಿಯಲಿದೆ. ಕೆಲಸಗಳನ್ನು ಸಮರ್ಪಕವಾಗಿ ಮಾಡಿದ ತೃಪ್ತಿಕರ ಭಾವ ಉಂಟಾಗಲಿದೆ. ಆಸ್ತಿ ಸಂಬಂಧ ಮಾತುಕತೆ ನಡೆಯುವುದು.
  • ಕರ್ಕಾಟಕ
  • ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ಅನವಶ್ಯಕ ಚಿಂತೆ ಮಾಡುವುದರಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.
  • ಸಿಂಹ
  • ಬೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ನಿಮಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ. ಪಿತ್ತ ಉಷ್ಣ ಪ್ರಕೋಪದಿಂದಾಗಿ ಆರೋಗ್ಯ ಅತ್ಯಂತ ಸೂಕ್ಷ್ಮವಾಗುವುದು. ವಿವಾಹ ಪ್ರಸ್ತಾಪವು ಬಲಗೊಳ್ಳಲಿದೆ.
  • ಕನ್ಯಾ
  • ಬೇರೆಯವರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆ ಗಮನ ಹರಿಸುವುದನ್ನು ಮರೆಯದಿರಿ. ಕಾರ್ಯವನ್ನು ಜಯಿಸುವ ಹಂಬಲದಲ್ಲಿ ಆರೋಗ್ಯ ಕಳೆದುಕೊಳ್ಳಬೇಡಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭವಾಗುವುದು.
  • ತುಲಾ
  • ಬಹಳ ದಿನಗಳ ನಂತರ ಸೋದರನ ಆಗಮನದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮವಿರುವುದು. ಕಠಿಣ ಪರಿಶ್ರಮದಿಂದ ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣುವುದು. ನಿಮ್ಮ ಗೌರವ , ಪ್ರತಿಷ್ಠೆ ಹೆಚ್ಚಲು ಸಮಯ ಬೇಕಿದೆ.
  • ವೃಶ್ಚಿಕ
  • ಇನ್ನೊಬ್ಬರಿಗೆ ಹಣವನ್ನು ಕೊಡುವ ಅಥವಾ ಸ್ವೀಕರಿಸುವ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ದಿಟ್ಟತನ ಸಾಧಿಸಲೇ ಬೇಕೆಂಬ ಛಲದಿಂದಾಗಿ ಕಾರ್ಯ ಕೈಗೂಡುವುದು.
  • ಧನು
  • ನೂತನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿಬ್ಬಂದಿವರ್ಗ ಆನಂದದಿಂದ ಸಹಕರಿಸಲಿದ್ದಾರೆ. ಕೆಲಸ ಕಾರ್ಯಗಳಲ್ಲಿ ಅತಿ ಉತ್ಸಾಹವನ್ನು ಕಾಣುವಿರಿ. ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುವಿರಿ.
  • ಮಕರ
  • ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಹಣ ಸಂಪಾದನೆಗಾಗಿ ಯಾವುದೇ ಅಡ್ಡ ಮಾರ್ಗವನ್ನು ಆರಿಸಿಕೊಳ್ಳುವುದು ಸರಿಯಲ್ಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿರುವುದು.
  • ಕುಂಭ
  • ವೃತ್ತಿ ಪರವಾಗಿ ಸ್ಥಳ ಬದಲಾವಣೆಯಾದರೆ ಕಷ್ಟವಾಗಬಹುದು ಎಂಬ ಶಂಕೆ ಬೇಡ, ಅಲ್ಲಿಯೂ ಬದುಕು ಹಸನಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಗೆ ಬೇಕಾದ ವಾತಾವರಣ ಮತ್ತು ಪ್ರೋತ್ಸಾಹ ಲಭಿಸಲಿದೆ.
  • ಮೀನ
  • ಮಕ್ಕಳಿಗೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸುವಂತೆ ತಿಳಿ ಹೇಳಬೇಕಾದ ಪರಿಸ್ಥಿತಿ ಇರಲಿದೆ. ನಿಮ್ಮೆಲ್ಲಾ ಪ್ರಮುಖ ಗುರಿ ಸಾಧನೆಗಳಿಗೆ ಇಂದಿನಿಂದ ಒಳ್ಳೆಯ ಚಾಲನೆ ಸಿಗುವುದು. ಮನೆಯ ಕೆಲಸಗಳು ಸರಾಗವಾಗಿ ನೆರವೇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.