ADVERTISEMENT

ದಿನ ಭವಿಷ್ಯ: ಫೆಬ್ರುವರಿ 25 ಭಾನುವಾರ 2024- ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು

ದಿನ ಭವಿಷ್ಯ: ಫೆಬ್ರುವರಿ 25 ಭಾನುವಾರ 2024

ಪ್ರಜಾವಾಣಿ ವಿಶೇಷ
Published 24 ಫೆಬ್ರುವರಿ 2024, 19:09 IST
Last Updated 24 ಫೆಬ್ರುವರಿ 2024, 19:09 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಹಂತ ಹಂತವಾಗಿ ಅಭಿವೃದ್ಧಿ ತೋರಿಬರುವುದು. ಗಣನೀಯವಾದ ಆದಾಯವಿದ್ದರೂ ಜೊತೆಯಲ್ಲಿಯೇ ಮನರಂಜನ ಬಯಕೆಯಿಂದಾಗಿ ಖರ್ಚುಗಳು ಸಂಭವಿಸಲಿದೆ.
  • ವೃಷಭ
  • ಕುಟುಂಬದ ಸಮಸ್ಯೆ ಬಗ್ಗೆ ಯೋಚಿಸಿ ತೀರ್ಮಾನಿಸುವುದರಿಂದ ಸಂಬಂಧಗಳಿಗೆ ಧಕ್ಕೆ ಉಂಟಾಗುವುದಿಲ್ಲ. ಯಂತ್ರೋಪಕರಣಗಳ ರಾಟದಿಂದ ಹೆಚ್ಚಿನ ಲಾಭ. ಮನೆಯವರ ಆರೋಗ್ಯ ಉತ್ತಮವಾಗಿರುವುದು.
  • ಮಿಥುನ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ಅವಕಾಶಗಳು ದೊರೆಯಲಿದೆ. ಯಂತ್ರೋಪಕರಣಗಳ ವ್ಯಾಪಾರ ಮೂಲಕ ಲಾಭ ಪಡೆಯಬಹುದು. ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಇರುತ್ತದೆ.
  • ಕರ್ಕಾಟಕ
  • ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನಾವಶ್ಯಕವಾದ ಹಾಗೂ ಅತಿಯಾದ ಯೋಚನೆಗಳನ್ನು ಮಾಡಬೇಡಬೇಕಾಗುತ್ತದೆ. ದೂರದ ಊರಿನಲ್ಲಿ ವೃತ್ತಿ ಜೀವನವು ಆರಂಭಗೊಳ್ಳುವುದು.
  • ಸಿಂಹ
  • ನಿಮ್ಮ ಸಲಹೆ ಸೂಚನೆಗಳನ್ನು ಒಪ್ಪುವಂತೆ ವ್ಯಕ್ತಿಯ ಮನಸ್ಸು ಪರಿವರ್ತನೆ ಮಾಡುವಲ್ಲಿ ವಿಫಲರಾಗುವಿರಿ. ಪೆಟ್ರೋಲ್ ವ್ಯಾಪಾರದಲ್ಲಿ ಮಾರಾಟ ಉತ್ತಮವಾಗಿರುವುದು. ಅಲಂಕಾರಿಕ ವಸ್ತುಗಳ ಖರೀದಿ ಆಗಲಿದೆ.
  • ಕನ್ಯಾ
  • ಖಾಸಗಿ ಬದುಕಿನ ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹುರುಪು ಮೂಡಲಿದೆ. ಧರ್ಮಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ಮನೋಭಿಲಾಷೆ ಪೂರೈಕೆಗೆ ವಾಮಮಾರ್ಗ ಸರಿಯಲ್ಲ.
  • ತುಲಾ
  • ಇಂದಿನ ಎಲ್ಲಾ ಸನ್ನಿವೇಶಗಳು ನಿಮಗೆ ವಿರೋಧವಾಗಿರುವುದರಿಂದ ಮನಸ್ಸಿಗೆ ನಕಾರಾತ್ಮಕ ಯೋಚನೆಗಳು ಬರಲಿವೆ. ರಹಸ್ಯ ವ್ಯಕ್ತಿಗಳಿಂದ ಸಿಗುವ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗುವುದು.
  • ವೃಶ್ಚಿಕ
  • ನಿಮಗೆ ಅವಶ್ಯಕತೆ ಇರುವ ನಿಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಈ ದಿನದ ಮೊದಲ ಆದ್ಯತೆ ನಿಮ್ಮ ಕೆಲಸಗಳ ಬಗೆಗೆ ಮಾತ್ರ ಇರಲಿ. ದುಡಿಮೆ ಸಾರ್ಥಕವಾಗುವ ಕೆಲಸವನ್ನು ಮಾಡಿ.
  • ಧನು
  • ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ವ್ಯವಹರಿಸುವುದರಿಂದ ಲಾಭಾಂಶ ವೃದ್ಧಿಯಾಗಲಿದೆ. ನಿಮ್ಮ ಅನಿವಾರ್ಯ ಕಾಲಕ್ಕೆ ಇಷ್ಟ ಮಿತ್ರರಿಂದ ಸಕಾಲದಲ್ಲಿ ಸಹಕಾರವು ಒದಗಿ ಬರಲಿದೆ.
  • ಮಕರ
  • ಕೆಲವು ವಿಷಯಗಳಲ್ಲಿ ಇತರರ ಸಲಹೆ ಪಡೆಯುವುದು ಅಥವಾ ಕೊನೇಪಕ್ಷ ಕಾಲಾವಕಾಶವನ್ನು ತೆಗೆದುಕೊಂಡು ಯೋಚಿಸಿ ಉತ್ತರ ನೀಡುವುದು ಉತ್ತಮ. ಬಿಳಿ ಬಣ್ಣ ಇಂದು ಶುಭಪ್ರದವಾಗಿರುತ್ತದೆ.
  • ಕುಂಭ
  • ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುವ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ. ಮುದ್ರಣ ವೃತ್ತಿಯವರಿಗೆ ಉತ್ತಮ ಬೇಡಿಕೆ ಪ್ರಾಪ್ತಿಯಾಗುವುದು. ಕೆಲಸಗಳೆಲ್ಲವೂ ತನ್ನಷ್ಟಕ್ಕೆ ತಾನೆಗಿಯೇ ಪೂರ್ಣಗೊಳ್ಳುವವು.
  • ಮೀನ
  • ಅನವಶ್ಯಕವಾದ ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ತ್ವರಿತವಾಗಿ ಪೂರ್ತಿ ಮಾಡುವಿರಿ. ನ್ಯಾಯವಾದಿಗಳಿಗೆ ತಮ್ಮ ವೃತ್ತಿಯಿಂದ ಹೆಚ್ಚಿನ ಆದಾಯಗಳಿಕೆ ಆಗಲಿದೆ. ದೃಢ ನಿರ್ಧಾರ ಕೈಗೊಳ್ಳಲು ಹಿಂಜರಿಕೆ ಬೇಡ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.