ADVERTISEMENT

ದಿನ ಭವಿಷ್ಯ: ಏಪ್ರಿಲ್ 15 ಸೋಮವಾರ 2024– ಈ ರಾಶಿಯವರು ವಾಹನ ಚಾಲನೆ ಜಾಗರೂಕತೆ

ದಿನ ಭವಿಷ್ಯ: ಏಪ್ರಿಲ್ 15 ಸೋಮವಾರ 2024

ಪ್ರಜಾವಾಣಿ ವಿಶೇಷ
Published 14 ಏಪ್ರಿಲ್ 2024, 18:34 IST
Last Updated 14 ಏಪ್ರಿಲ್ 2024, 18:34 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಟೆಕ್ಸ್ಟ್‌ ಟೈಲ್‌ ಉದ್ಯಮದವರು ರಫ್ತು ವ್ಯಾಪಾರಗಳಿಂದ ಲಾಭವನ್ನು ಹೊಂದುವರು. ಗುರಿ ಸಾಧಿಸಲು ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ. ತಂದೆಯಾಗುವ ಸುದ್ದಿ ಕೇಳಿ ಸಂತೋಷವಾಗುವುದು.
  • ವೃಷಭ
  • ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ. ಮಕ್ಕಳ ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
  • ಮಿಥುನ
  • ವ್ಯವಹಾರದಲ್ಲಿ ಕೆಲವೊಂದು ಸನ್ನಿವೇಶಗಳು ಪರವಾಗಿ ಇರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರಿಯಿರಿ. ಸಂಜೆಯ ಸಮಯದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ಮಾಡಿ.
  • ಕರ್ಕಾಟಕ
  • ಬೆಳವಣಿಗೆಯ ಹಾದಿಯಲ್ಲಿ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಸ್ವಲ್ಪ ಕಷ್ಟವಾದೀತು. ದುರ್ಜನರಿಂದ ದೂರವಿದ್ದು ,ಸಜ್ಜನರಲ್ಲಿ ಸ್ನೇಹ ಮತ್ತು ವ್ಯವಹಾರ ಮಾಡುವುದು ಉತ್ತಮ.
  • ಸಿಂಹ
  • ಉನ್ನತ ಅಧಿಕಾರಿಗಳ ಜತೆಗಿನ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ಲಾಭವಾಗುತ್ತದೆ. ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ.
  • ಕನ್ಯಾ
  • ಬುದ್ಧಿವಂತಿಕೆಯ ತೀರ್ಮಾನಗಳು ನಿಮ್ಮವರಲ್ಲಿ ನಿಮ್ಮನ್ನು ತೂಕದ ವ್ಯಕ್ತಿಯನ್ನಾಗಿ ಮಾಡುತ್ತದೆ. ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಲು ಈ ದಿನ ಸೂಕ್ತ. ಸಂಗಾತಿಯ ಮಾತಿಗೆ ಬೆಲೆ ಕೊಡಿ.
  • ತುಲಾ
  • ಬಹುಕಾಲಗಳಿಂದ ಸಾಲ ತೀರಿಸುವಿಕೆಯಂಥ ಯೋಜನೆ ಇದ್ದರೆ ಈಡೇರಲಿದೆ. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡುವವರಿಗೆ ಕನಸುಗಳು ನನಸಾಗಲಿದೆ. ಏಳಿಗೆಗೆ ನೆರವಾಗುವವರ ಸಹಾಯ ಸಿಗುವುದು.
  • ವೃಶ್ಚಿಕ
  • ವಿದ್ಯುತ್ ಸಂಬಂಧಿ ವಸ್ತುಗಳ ಬಳಕೆಯನ್ನು ಮಾಡುವಾಗ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ. ಗೃಹಿಣಿಯರು ಉತ್ತಮವಾದ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
  • ಧನು
  • ಹೆಚ್ಚಿನ ಆತ್ಮಸ್ಥೈರ್ಯದಿಂದ ಯೋಜಿಸಿದ ಎಲ್ಲಾ ಕೆಲಸದಲ್ಲಿಯೂ ಜಯ ಕಾಣುವಿರಿ. ವಾಯುಸಂಬಂಧವಾಗಿ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಷೇರು ಮಾರಾಟಗಳಿಂದ ಲಾಭ ಹೊಂದುವಿರಿ.
  • ಮಕರ
  • ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ವ್ಯಕ್ತಿಗಳಿಂದ ಹೆಚ್ಚಿನ ಲಾಭ ಉಂಟಾಗುವುದು. ನಿಯಮಿತ ಆಹಾರದಿಂದ ದೇಹದಲ್ಲಿ ವಾತದ ಬಾಧೆಯು ಕಡಿಮೆಯಾಗಲಿದೆ. ಸಕ್ರಿಯವಾಗಿ ಭಾಗವಹಿಸಿ.
  • ಕುಂಭ
  • ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೌಶಲ ವೃದ್ಧಿಸಿಕೊಳ್ಳಲು ಹೊಸ ಅವಕಾಶಗಳು ದೊರೆಯಲಿವೆ. ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ. ವೈದ್ಯರು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು.
  • ಮೀನ
  • ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಸತತ ಪ್ರಯತ್ನದಿಂದ ಸದ್ಯದಲ್ಲೇ ಕೆಲಸ ಕಾರ್ಯವನ್ನು ಆರಂಭಿಸುವಿರಿ. ಹಣದ ಹರಿವು ಅನುಭವಕ್ಕೆ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.