ADVERTISEMENT

ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024– ಈ ರಾಶಿಯವರ ಹೊಸ ಕಾರ್ಯಕ್ಕೆ ಸಕಾಲ

ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024

ಪ್ರಜಾವಾಣಿ ವಿಶೇಷ
Published 15 ಏಪ್ರಿಲ್ 2024, 18:35 IST
Last Updated 15 ಏಪ್ರಿಲ್ 2024, 18:35 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕೀಲು ನೋವು, ವಾತದಂಥ ಕಾಯಿಲೆಯಿಂದ ಬಳಲುತ್ತಿರುವವರು ಆರೋಗ್ಯದ ಮೇಲೆ ವಿಶೇಷ ಕಾಳಜಿ ಇಡಿ. ಚಿತ್ರಕಲೆಯಲ್ಲಿ ಅಥವಾ ಪಠ್ಯೇತರ ವಿಷಯದಲ್ಲಿ ಮಗ್ನರಾಗುವಂತೆ ಪ್ರೇರೇಪಣೆ ದೊರೆಯಲಿದೆ.
  • ವೃಷಭ
  • ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ವ್ಯಾಪ್ತಿಯನ್ನು ವಿದೇಶಕ್ಕೆ ಪಸರಿಸುವ ಯೋಚನೆ ಮಾಡಬಹುದು. ಹಣ್ಣು , ತರಕಾರಿ ಮಾರಾಟಗಾರರಿಗೆ ಲಾಭ ನಷ್ಟಗಳ ಮಿಶ್ರ ಫಲ ಅನುಭವವಾಗಬಹುದು.
  • ಮಿಥುನ
  • ಹೆಚ್ಚಿನ ಕಡೆ ಜಗಳವನ್ನು ತಣಿಸಲು ಪ್ರಯೋಜನವಾಗುವ ಹಾಸ್ಯ ಪ್ರವೃತ್ತಿಯು ಇಂದು ನಿಮ್ಮ ಕೈ ಬಿಡುವ ಸಾಧ್ಯತೆ ಇದೆ. ಸಹೋದರ ಸಹೋದರಿಯರ ಬೇಜವಾಬ್ದಾರಿಯಿಂದ ಬೇಸರ ಪಟ್ಟುಕೊಳ್ಳುವಿರಿ.
  • ಕರ್ಕಾಟಕ
  • ಸಹೋದ್ಯೋಗಿಗಳೊಂದಿಗೆ ಆತ್ಮೀಯ ನಡೆ ಮತ್ತು ನುಡಿ ಮನಸ್ತಾಪಗಳನ್ನು ದೂರಮಾಡಲಿದೆ. ವಿವಾದಾತ್ಮಕ ವಿಷಯಗಳ ಕುರಿತು ಚರ್ಚಿಸುವುದು ಉಚಿತವಲ್ಲ. ಹೊಸ ಕಾರ್ಯ ಕೈಗೊಳ್ಳಲು ಸಕಾಲ.
  • ಸಿಂಹ
  • ಪರಿಶ್ರಮದ ಜೊತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ. ಪ್ರೇಮವಿವಾಹಕ್ಕಾಗಿ ಕಾಯುತ್ತಿರುವವರು ಸ್ವಲ್ಪ ದಿನ ಕಾಯಬೇಕಾಗಬಹುದು. ಮನೆಯ ಸಮೀಪದ ಶಿವಾಲಯಕ್ಕೆ ಭೇಟಿ ನೀಡಿ.
  • ಕನ್ಯಾ
  • ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣದಂಥ ಕೆಲಸಗಳಿಗೆ ಪೂರಕ ವಾತಾವರಣ ದೊರೆಯಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅತ್ಯಗತ್ಯ. ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿಯಾಗುವುದು.
  • ತುಲಾ
  • ನಿಲುವು ನಿಮಗೆ ಸರಿಯಾಗಿದೆ ಎಂದು ಅನಿಸಿದಲ್ಲಿ ನಿಮ್ಮ ಮೇಲೆ ನಿಮಗೆ ಅಚಲ ನಂಬಿಕೆ ಇರಲಿ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳಾಗುವ ಸಾಧ್ಯತೆ ಇದೆ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ.
  • ವೃಶ್ಚಿಕ
  • ಈ ದಿನ ನಿಮ್ಮ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕಿ ರುವುದರಿಂದ ಮಾರ್ಗ ಮಧ್ಯ ಇರುವ ಅಡೆತಡೆಗಳು ನಿವಾರಣೆಯಾಗಲಿವೆ. ಸಕಾರಾ ತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ.
  • ಧನು
  • ತೀರ್ಥಯಾತ್ರೆಗಳನ್ನು ಮಾಡಬೇಕೆಂದುಕೊಂಡವರು ಆ ಬಗ್ಗೆ ಯೋಚಿಸಲು ಇದು ಪ್ರಶಸ್ತ ಸಮಯ. ಚಿತ್ರಕಾರರು, ಬರಹಗಾರರಂಥ ಕ್ರಿಯಾತ್ಮಕ ಕೆಲಸಗಳಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
  • ಮಕರ
  • ವಿದೇಶಿ ವ್ಯವಹಾರಗಳನ್ನು ಹೊಂದಿರುವಂಥವರು ಲಾಭವನ್ನು ಅಪೇಕ್ಷಿಸಬಹುದು. ದಾಂಪತ್ಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಸರಿಯಾದ ಮಾತುಕತೆಯಿಂದ ದೂರವಾಗಿ ಸಂಬಂಧ ಉತ್ತಮಗೊಳ್ಳಲಿದೆ.
  • ಕುಂಭ
  • ಮಗಳು ಹಾಗು ತತ್ಸಬಂಧಿ ಕುಟುಂಬ ವರ್ಗದವರಿಗೆ ಉತ್ತಮ ಹಾರೈಕೆಗಳ ಅಗತ್ಯವಿರುವುದರಿಂದ ಅದನ್ನು ನಡೆಸಿಕೊಡಿ. ನಿಮ್ಮ ಮೇಲಿದ್ದ ಸಂಶಯದ ಮನೋಭಾವ ನಿವಾರಣೆಯಾಗುವುದು.
  • ಮೀನ
  • ಯಾವ ವಿಷಯದಲ್ಲಿ ಹಿಂದುಳಿದಿರುವಿರಿ ಎಂದು ಕಂಡುಕೊಂಡು ತಜ್ಞರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಅರಿತು ಅವರನ್ನು ಕ್ಷಮಿಸಿ .
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.