ADVERTISEMENT

ದಿನ ಭವಿಷ್ಯ: ಏಪ್ರಿಲ್ 19 ಶುಕ್ರವಾರ 2024– ಪಾಪದ ಫಲ ಅನುಭವಕ್ಕೆ ಬರಲಿದೆ

ದಿನ ಭವಿಷ್ಯ

ಪ್ರಜಾವಾಣಿ ವಿಶೇಷ
Published 18 ಏಪ್ರಿಲ್ 2024, 19:04 IST
Last Updated 18 ಏಪ್ರಿಲ್ 2024, 19:04 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಬ್ಯಾಂಕ್ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಹೊಸ ಯೋಜನೆ ಕುರಿತು ಗಹನ ಚರ್ಚೆ ನಡೆಯುವ ಸಾಧ್ಯತೆಗಳಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫಲವನ್ನು ಕಾಣುವಿರಿ.
  • ವೃಷಭ
  • ಉಂಟಾದ ಹತಾಶೆಯಿಂದಾಗಿ ಮನಸ್ಸು ಅಧ್ಯಾತ್ಮದ ಕಡೆಗೆ ಎಳೆಯುತ್ತದೆ. ಇಂದಿನ ಖರ್ಚು ವೆಚ್ಚಗಳು ಹೆಚ್ಚಿರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಕೃಷಿಗಾಗಿ ಪರಿಶ್ರಮ ವಹಿಸುವಿರಿ.
  • ಮಿಥುನ
  • ತಂದೆ ತಾಯಿಯ ಜತೆ ಆಸ್ತಿ ಪಾಲುದಾರಿಕೆಯ ವಿಷಯವಾಗಿ ಮಾತನಾಡುವುದಿದ್ದಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಬರಲು ಬಾಕಿ ಇದ್ದಂಥ ಹಳೇ ಸಾಲಗಳು ತೀರಿಸುವ ಬಗ್ಗೆ ಮಾತು ಕೇಳುವಿರಿ.
  • ಕರ್ಕಾಟಕ
  • ಉತ್ತಮ ಪ್ರಯತ್ನದಿಂದಾಗಿ ನೀವು ಬಯಸಿದ ಕಡೆ ಕೆಲಸ ಸಿಗುವ ಸಾಧ್ಯತೆ ಇದೆ. ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವವರಿಗೆ ಹೊಸ ಜೊತೆಗಾರರೊಬ್ಬರು ಸಿಕ್ಕು ಸಮಾಧಾನವಾಗುತ್ತದೆ.
  • ಸಿಂಹ
  • ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಬೃಹತ್ ಮಟ್ಟದ ವಾಹನವನ್ನು ಖರೀದಿಸುವವರಿಗೆ ಇದು ಸೂಕ್ತ ಸಮಯವವಲ್ಲ.
  • ಕನ್ಯಾ
  • ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ನೀಡುವ ಬಗ್ಗೆ ಯೋಚನೆ ನಡೆಸಿ, ಸಮಯ ಎಂದಾಗ ಅವರ ಸಹಾಯವೇ ಮುಖ್ಯ. ಮಂದಗತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಯದ ಕೊರತೆ ಎದುರಾಗಲಿದೆ.
  • ತುಲಾ
  • ಹಲವು ವಿಚಾರಗಳು ಒಂದೇ ಬಾರಿಗೆ ತಲುಪುವುದರಿಂದ ಒಮ್ಮೆ ತಳಮಳವಾಗಬಹುದು. ನಿಮ್ಮ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನವನ್ನು ಕೈಗೊಳ್ಳುವುದು ಉತ್ತಮ. ಬೂದು ಬಣ್ಣ ಶುಭಪ್ರದ.
  • ವೃಶ್ಚಿಕ
  • ಮಕ್ಕಳಲ್ಲಿ ವಿದ್ಯೆಯ ಹೊರತಾಗಿ ಅವರಲ್ಲಿರುವ ಇತರ ಆಸಕ್ತಿಕರ ಕ್ಷೇತ್ರಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಆರೋಗ್ಯದ ಬಗೆಗಿನ ಕಾಳಜಿಯು ಅನಾರೋಗ್ಯದಿಂದ ದೂರವಿರಿಸುತ್ತದೆ. ಪಾರ್ವತಿಯನ್ನು ಭಜಿಸಿ.
  • ಧನು
  • ವ್ಯವಹಾರದಲ್ಲಿ ಇಂದು ಎಲ್ಲವೂ ಸಕಾರಾತ್ಮಕವಾಗಿ ಇರುವುದರಿಂದ ನೆಮ್ಮದಿಯ ದಿನವಾಗಿರುತ್ತದೆ. ಸಾಗರ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ.
  • ಮಕರ
  • ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ವ್ಯಕ್ತಿಯ ಬಗ್ಗೆ ಸ್ನೇಹಿತರಿಂದ ತಿಳಿಯಬಹುದು. ಹೆಚ್ಚಿನ ಕಾರ್ಯಗಳಲ್ಲಿ ಅನುಕೂಲ ಇರುವುದು. ಜ್ಞಾನವನ್ನು ಸಂಪಾದಿಸಿ .
  • ಕುಂಭ
  • ಸಹೋದ್ಯೋಗಿಯೊಬ್ಬರು ವೃತ್ತಿಗೆ ಅನುಕೂಲವಾಗುವಂತಹ ಉತ್ತಮ ಉಪಾಯಗಳನ್ನು ನೀಡಲಿದ್ದು, ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಪರಿಣಿತರಿಗೆ ಶಿಕ್ಷಣ ವೃತ್ತಿ ದೊರೆಯುವ ಸಂಭವವಿದೆ.
  • ಮೀನ
  • ಮನೆಗೆ ಬರುವ ಹೊಸ ವ್ಯಕ್ತಿಯೊಂದಿಗೆ ಉತ್ತಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು. ಮಾಡಿದ ಪಾಪದ ಫಲ ಅನುಭವಕ್ಕೆ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.