ADVERTISEMENT

ದಿನ ಭವಿಷ್ಯ: ಜೂನ್ 24 ಸೋಮವಾರ 2024- ಇಂದು ಮಿತ್ರರಿಂದ ಸಹಾಯ ಸಿಗುವುದು

ದಿನ ಭವಿಷ್ಯ: ಜೂನ್ 24 ಸೋಮವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜೂನ್ 2024, 18:31 IST
Last Updated 23 ಜೂನ್ 2024, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಂಗಾತಿಯ ಅಗಲುವಿಕೆಯು ತಾತ್ಕಾಲಿಕವಾದುದು ಎಂಬುದು ಅರಿವಾಗುವುದು. ನಿಮ್ಮ ಒಳ್ಳೆಯ ಕನಸುಗಳಿಗೆ ಜೀವ ಬಂದಂತೆ ಭಾಸವಾಗುತ್ತದೆ. ಸ್ವಗೃಹ ನಿರ್ಮಾಣಕ್ಕೆ ಮಿತ್ರರಿಂದ ಸಹಾಯ ಸಿಗುವುದು.
  • ವೃಷಭ
  • ವೃತ್ತಿ ಜೀವನದಲ್ಲಿ ದೊರೆಯಬೇಕಿದ್ದ ಬಡ್ತಿ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿಕೆಯಾಗುವುದು. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
  • ಮಿಥುನ
  • ಹೂಡಿಕೆಯಿಂದ ಲಾಭ ಬಂದಿರುವ ಸುದ್ದಿ ತಿಳಿದು ಸಂತೋಷವಾಗುವುದು. ರಾಸಾಯನಿಕ ಔಷಧಿಗಿಂತ ತೈಲ ಲೇಪನದಂತಹ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಕಾಲು ನೋವು ನಿವಾರಣೆಯಾಗುವುದು.
  • ಕರ್ಕಾಟಕ
  • ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ತಾಳ್ಮೆಯಿಂದ ವರ್ತಿಸಿದರೆ ಉತ್ತಮ ಫಲಿತಾಂಶ ಸಿಗಲಿದೆ. ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಿರಿ.
  • ಸಿಂಹ
  • ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲದೆ ಸೊರಗಿರುವ ನಿಮಗೆ ಅಪರಿಚಿತ ವ್ಯಕ್ತಿಯಿಂದ ಮಾರ್ಗದರ್ಶನ ಸಿಗಲಿದೆ. ಲೇವಾದೇವಿ ವ್ಯವಹಾರ ನಡೆಸುವವರು ಈ ದಿನ ವಿಶ್ರಾಂತಿ ಪಡೆಯುವುದು ಉತ್ತಮ.
  • ಕನ್ಯಾ
  • ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದರೆ ಎಲ್ಲವೂ ಸರಾಗವಾಗಿ ಪರಿಹಾರವಾಗುವುದು. ಸಂಪರ್ಕ ಸಂಬಂಧಿಸುವ ಸಾಧನಗಳ ನಿರ್ವಹಣೆಯ ಕೊರತೆಯಿಂದಾಗಿ ಅವುಗಳು ಕೈಕೊಡುವ ಸಾಧ್ಯತೆ ಇದೆ.
  • ತುಲಾ
  • ಶುದ್ಧ ಮನಸ್ಸಿನಿಂದ ಮಾಡಿದ ಧರ್ಮ ಕಾರ್ಯದಿಂದ ಶ್ರೇಯೋಭಿವೃದ್ಧಿಯಾಗುವುದು. ತಂದೆಯ ನಿರ್ಧಾರಗಳನ್ನು ಗೌರವಿಸಿ. ವೈವಾಹಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
  • ವೃಶ್ಚಿಕ
  • ಜೀವನ ಶೈಲಿಯಲ್ಲಿ ಬದಲಾವಣೆ ಬೇಡವೆಂದು ನಿರ್ಧರಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸಲಿವೆ. ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸುವಿರಿ.
  • ಧನು
  • ಆರ್ಥಿಕ ಪರಿಸ್ಥಿತಿಯು ನಿಮ್ಮ ಆಲೋಚನೆಯನ್ನೂ ಮೀರಿ ನಿಯಂತ್ರಣ ತಪ್ಪುವುದು. ಮಾತೃ ವರ್ಗದವರ ಸಹಾಯದಿಂದ ಹಣಕಾಸಿನ ಭಯ ನಿವಾರಣೆ ಆಗಲಿದೆ. ಬೆಂಕಿಯಿಂದ ಅಪಾಯ ಉಂಟಾಗಬಹುದು.
  • ಮಕರ
  • ಮನೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಚಾರಗಳು ಚರ್ಚೆಗೆ ಬರಲಿವೆ. ಹೂಡಿಕೆ ವಿಚಾರವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರು ಸಲಹೆ ನೀಡುವರು. ಮಕ್ಕಳ ಆರೋಗ್ಯದ ಮೇಲೆ ಗಮನವಿಡಿ.
  • ಕುಂಭ
  • ಪ್ರಯತ್ನದ ಜೊತೆಗೆ ದೇವರ ಕೃಪೆಗೆ ಪಾತ್ರರಾದರೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಮದುವೆಯ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗದೆ ಗೊಂದಲಕ್ಕೆ ಒಳಗಾಗುವಿರಿ.
  • ಮೀನ
  • ಪ್ರಾಣಿ ದಯಾ ಸಂಘದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೃದಯ ವಿದ್ರಾವಕ ಘಟನೆಯು ಕಣ್ಣೀರು ತರಿಸಲಿದೆ. ಮಕ್ಕಳ ಆರೋಗ್ಯದ ವಿಚಾರವಾಗಿ ಖರ್ಚು–ವೆಚ್ಚ ಹೆಚ್ಚಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.