ADVERTISEMENT

ದಿನ ಭವಿಷ್ಯ: ಜೂನ್ 26 ಬುಧವಾರ 2024– ಮಕ್ಕಳ ಅಭಿವೃದ್ಧಿ ಕಂಡು ಪುಳಕಿತಗೊಳ್ಳುವಿರಿ

ದಿನ ಭವಿಷ್ಯ: ಜೂನ್ 26 ಬುಧವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜೂನ್ 2024, 18:42 IST
Last Updated 25 ಜೂನ್ 2024, 18:42 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಇತರರ ಎದುರು ತಲೆ ತಗ್ಗಿಸ ಬೇಕಾದ ಪರಿಸ್ಥಿತಿ ಬರುವುದು. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಈ ದಿನ ಉತ್ತಮ ಅವಕಾಶಗಳು ಸಿಗುವುದು. ಕ್ರೀಡಾ ಚಟುವಟಿಕೆಗಳು ಹೆಚ್ಚಲಿದೆ.
  • ವೃಷಭ
  • ಕೆಲಸ ಕಾರ್ಯಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗುವ ಮುನ್ಸೂಚನೆ ಸಿಗುವುದು. ಮಗುವಿನ ಮೊದಲ ಮಾತು ಅಥವಾ ಮಕ್ಕಳ ಅಭಿವೃದ್ಧಿ ಕಂಡು ಪುಳಕಿತಗೊಳ್ಳುವಿರಿ.
  • ಮಿಥುನ
  • ಎಲ್ಲರಿಗಿಂತ ಕಡಿಮೆ ಪರಿಶ್ರಮದಲ್ಲಿ ಇತರರಿಗಿಂತ ಒಳ್ಳೆಯ ಫಲಿತಾಂಶ ಬರುವುದು. ಉಳಿದವರಿಗೆ ಆಶ್ಚರ್ಯ ಚಕಿತ ವಿಷಯವಾಗಿ ತೋರುವುದು. ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ ಕೇಳ ಬೇಕಾಗುವುದು.
  • ಕರ್ಕಾಟಕ
  • ಸ್ವಚ್ಛಂದವಾಗಿ ಯೌವನವನ್ನು ಅನುಭವಿಸುತ್ತಿರುವವರಿಗೆ ಮದುವೆ ಎನ್ನುವ ಹೆಚ್ಚುವರಿ ಜವಾಬ್ದಾರಿಯನ್ನು ಹೊರೆಸಲು ಪರಿವಾರದವರೆಲ್ಲರೂ ಕಾತುರರಾಗುವರು. ದಿನಾಂತ್ಯದಲ್ಲಿ ಅಲ್ಪ ನೆಮ್ಮದಿ ಪ್ರಾಪ್ತಿಯಾಗಲಿದೆ.
  • ಸಿಂಹ
  • ಹೆಂಡತಿಯನ್ನು ಉದ್ದೇಶಿಸಿ ಇತರರು ಹೇಳುವ ದೂರಿನ ಮಾತುಗಳನ್ನು ಕೇಳುವುದು ನಿಮಗೆ ಸಹಿಸಲಾರದ ವಿಷಯವಾಗುತ್ತದೆ. ಶುಭ ಸಮಾಚಾರಗಳನ್ನು ಕೇಳುವಷ್ಟು ವ್ಯವಧಾನ ಇಲ್ಲದಂತೆ ಆಗುತ್ತದೆ.
  • ಕನ್ಯಾ
  • ಭಾವನೆಗಳಿಗೆ ಕುಟುಂಬದವರು ಬೆಲೆ ಕೊಡದಿರುವುದು ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾಡುತ್ತದೆ. ಅದರಿಂದಾಗಿ ನಷ್ಟಗಳು ಸಂಭವಿಸಬಹುದು. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ.
  • ತುಲಾ
  • ಯೋಗಾಭ್ಯಾಸದಿಂದ ಏಕಾಗ್ರತೆ ಹಾಗೂ ಚಿತ್ತ ಶುದ್ಧಿ ಮಾಡಿಕೊಳ್ಳು ವುದು ಉತ್ತಮ. ಬರಬೇಕಾದ ಹಣವೆಲ್ಲವೂ ನಿಮ್ಮ ಕೈ ಸೇರಿದರೂ ಈಗಿನ ನಿಮ್ಮ ಪರಿಸ್ಥಿತಿಗೆ ಇನ್ನೂ ಹೆಚ್ಚಿನ ಧನಸಂಪತ್ತು ಬೇಕಾಗುವುದು.
  • ವೃಶ್ಚಿಕ
  • ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಿಮಗೆ ಅಹಿತಕರ ಘಟನೆ ಮರೆಯಲು ಹೆಚ್ಚಿನ ಸಮಯ ಬೇಕಾಗುವುದು. ಪ್ರಾಣಾಯಾಮ ಧ್ಯಾನವನ್ನು ನಿರಂತರವಾಗಿ ಮಾಡಿ.
  • ಧನು
  • ಮನಸ್ಸಿನಲ್ಲಿರುವ ದುಗುಡಗಳನ್ನು ಹೇಳಿಕೊಳ್ಳಲು ಸರಿಯಾದ ವ್ಯಕ್ತಿಯ ಕೊರತೆ ಉಂಟಾಗುವುದು. ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಲಭಿಸುವುದು.
  • ಮಕರ
  • ಮದುವೆಯ ವಿಚಾರದಲ್ಲಿ ಪದೇ ಪದೇ ಬರುತ್ತಿದ್ದ ವಿಘ್ನಗಳು ಸ್ನೇಹಿತನ ಸಹಾಯದಿಂದ ನಿವಾರಣೆಯಾಗುವುದು. ಕೂದಲೆಳೆಯಷ್ಟು ತಪ್ಪು ಮಾಡಿದ್ದಕ್ಕೂ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು.
  • ಕುಂಭ
  • ಯಾವುದೋ ಒಂದು ನಂಬಿಕೆಯ ಮೇಲೆ ಸಾಗುತ್ತಿದ್ದ ನಿಮ್ಮ ಜೀವನದಲ್ಲಿ ಇತರರ ಮಾತುಗಳು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಜನಗಳ ದೃಷ್ಟಿ ದೋಷಕ್ಕೆ ಒಳಗಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿ.
  • ಮೀನ
  • ಸಹಾಯ ಗುಣ ಹೊಂದಿರುವ ಕಾರಣದಿಂದ ಸಹಪಾಠಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳುವುದು. ತಂತ್ರಜ್ಞಾನದಲ್ಲಿ ಇರುವ ಅನುಭವವು ಹೊಸ ಕಾರ್ಯಕ್ಷೇತ್ರದಲ್ಲಿ ಕಡಿಮೆ ಎಂದು ಅನ್ನಿಸುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.