ADVERTISEMENT

ದಿನ ಭವಿಷ್ಯ: ಜೂನ್ 29 ಶನಿವಾರ 2024– ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ

ದಿನ ಭವಿಷ್ಯ: ಜೂನ್ 29 ಶನಿವಾರ 2024

ಪ್ರಜಾವಾಣಿ ವಿಶೇಷ
Published 28 ಜೂನ್ 2024, 18:36 IST
Last Updated 28 ಜೂನ್ 2024, 18:36 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಒಂದು ಸುಳ್ಳನ್ನು ಹೇಳಿ ಅದನ್ನು ಸಮರ್ಥಿಸಿಕೊಳ್ಳಲು ಸುಳ್ಳಿನ ಸರಮಾಲೆಗಳನ್ನೆ ಹೇಳಬೇಕಾಗುತ್ತದೆ. ಯಾವುದೇ ಕಾರ್ಯ ಆರಂಭಿಸುವ ಮುನ್ನ ಪರಂಪರೆಯಲ್ಲಿ ನಡೆದು ಬಂದ ವಿಧಿಯನ್ನು ಆಚರಿಸಿ.
  • ವೃಷಭ
  • ವ್ಯಾವಹಾರಿಕ ಪಾಲುದಾರರ ಜತೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಹರಿತವಾದ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ. ನಿವೇಶನ ಕೊಳ್ಳಲು ಸೂಕ್ತಸ್ಥಳದ ಹುಡುಕಾಟ ನಡೆಸುವಿರಿ.
  • ಮಿಥುನ
  • ಹಿಂದಿನ ದಿನದ ನಿದ್ರಾಹೀನತೆಯಿಂದಾಗಿ ಕೆಲಸ ಮಾಡುವಾಗ ತಪ್ಪುಗಳಾಗುವ ಸಾಧ್ಯತೆ ಇದೆ. ಇತರರನ್ನು ಸಂತೋಷ ಪಡಿಸುವ ಭರದಲ್ಲಿ ನಿಮ್ಮ ಜವಾಬ್ದಾರಿ ಮರೆಯದಿರಿ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ.
  • ಕರ್ಕಾಟಕ
  • ವಿದ್ಯಾರ್ಜನೆ ಹೆಸರಿನಲ್ಲಿ ಕುಟುಂಬಕ್ಕೆ ಹೊರೆಯಾಗುವ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕಿಸಿ. ನಿಮ್ಮ ವಿದೇಶ ಪ್ರವಾಸದ ಕನಸಿಗೆ ಶುಭ ಮುಹೂರ್ತ ಕೂಡಿ ಬರುವುದು.
  • ಸಿಂಹ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಹಾಗೂ ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನಿಮ್ಮದಾಗಲಿದೆ.
  • ಕನ್ಯಾ
  • ಬಹುಜನರೊಂದಿಗೆ ವಿಶ್ವಾಸ ಕಳೆದುಕೊಂಡಿರುವ ನೀವು ಪುನಃ ಎಲ್ಲರ ವಿಶ್ವಾಸ ಗಳಿಸಬೇಕಾಗುವುದು. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ.
  • ತುಲಾ
  • ದಿನದ ಉತ್ತರಾರ್ಧದಲ್ಲಿ ಸುಖ ಜೀವನ ನಡೆಸಲು ಪೂರ್ವಾರ್ಧದಲ್ಲಿ ಶ್ರಮಿಸಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದರಿಂದ ಒತ್ತಡ ತರುವಂತಹ ಯಾವುದೇ ಕೆಲಸಗಳಿದ್ದರೂ ನಿರರ್ಗಳವಾಗಿ ಬಗೆಹರಿಯುವುದು.
  • ವೃಶ್ಚಿಕ
  • ಜ್ವರ ಶೀತದಂತಹ ಅನಾರೋಗ್ಯ ನಿಮ್ಮನ್ನು ಕಾಡಲಿದೆ. ಬಹಳ ದಿನಗಳಿಂದ ಬಾಕಿ ಇರುವ ಕಾರ್ಯವನ್ನು ಆರಂಭಿಸುವ ಬಗ್ಗೆ ಯೋಚಿಸಿ. ತಂತಿವಾದಕರ ನೂತನ ಪ್ರಯೋಗವು ಸಂಗೀತ ರಸಿಕರ ಮನಗೆಲ್ಲಲಿದೆ.
  • ಧನು
  • ದೇವತಾರಾಧನೆಯಿಂದ ವ್ಯವಹಾರದಲ್ಲಿನ ಕಠಿಣ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ಹೊಂದುವಿರಿ. ದಕ್ಷಿಣಾಮೂರ್ತಿ ಪೂಜೆಯಿಂದ ವಿದ್ಯಾಭ್ಯಾಸದ ವಿಷಯಗಳಲ್ಲಿ ನೆಮ್ಮದಿ ದೊರೆಯುವುದು.
  • ಮಕರ
  • ವಿದ್ಯಾಭ್ಯಾದಲ್ಲಿ ಉತ್ತಮ ಫಲಿತಾಂಶ ಪಡೆದು ಹೆಚ್ಚಿನ ವ್ಯಾಸಾಂಗಕ್ಕೆ ವಿದೇಶಕ್ಕೆ ತೆರಳುವ ಅವಕಾಶವಿದೆ. ತಾಯಿಯ ಆರೋಗ್ಯದಲ್ಲಿ ಏರಿಳಿತಗಳಾಗಲಿವೆ. ವೈದ್ಯರನ್ನು ಭೇಟಿ ಮಾಡುವ ಸನ್ನಿವೇಶ ಎದುರಾಗುವುದು.
  • ಕುಂಭ
  • ಸಹೋದರರಿಂದ ಹಿತವಚನ ಕೇಳಬೇಕಾದೀತು. ಭಿನ್ನಾಭಿಪ್ರಾಯ ಮೂಡಿದಲ್ಲಿ ಶಾಂತ ಸ್ವಭಾವದಿಂದ ವರ್ತಿಸುವುದು ಉತ್ತಮ. ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.
  • ಮೀನ
  • ಭೂ ಖರೀದಿ ಅಥವಾ ಗೃಹ ನಿರ್ಮಾಣದಂತಹ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಹಿತಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ ಅನುಭವಕ್ಕೆ ಬರುವುದಿಲ್ಲ. ದೈವಬಲದಿಂದ ಒಳಿತಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.