ADVERTISEMENT

ದಿನ ಭವಿಷ್ಯ: ಜೂನ್ 30 ಭಾನುವಾರ 2024- ವ್ಯವಹಾರಗಳಿಂದ ಹೆಚ್ಚಿನ ಲಾಭ

ದಿನ ಭವಿಷ್ಯ: ಜೂನ್ 30 ಭಾನುವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಜೂನ್ 2024, 18:34 IST
Last Updated 29 ಜೂನ್ 2024, 18:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನು ಬಳಸುವ ಯೋಚನೆ ಮಾಡುವಿರಿ. ಹೋಟೆಲ್‌ ವ್ಯಾಪಾರ ಮಾಡುವವರಿಗೆ ನಷ್ಟ ಸಂಭವಿಸಬಹುದು. ನಿಮ್ಮ ಸ್ವಕಾರ್ಯ ಹಾಗೂ ಸ್ವಪ್ರತಿಭೆಯಿಂದಲೆ ಪ್ರಭಾವಿತರಾಗುವಂತಾಗಲಿದೆ.
  • ವೃಷಭ
  • ಹಿರಿಯರ ಆಸ್ಪತ್ರೆ, ಔಷಧಿಗಳಿಗಾಗಿ ಖರ್ಚು ಮಾಡಬೇಕಾದರೂ ಆದಾಯಕ್ಕೇನೂ ಕೊರತೆ ಇರದು. ಖಿನ್ನತೆ ಹಾಗು ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕಾಡಲಿದೆ. ದೇವರ ಧ್ಯಾನದಿಂದ ಅದನ್ನು ಹೋಗಲಾಡಿಸಿಕೊಳ್ಳಿ.
  • ಮಿಥುನ
  • ಪರೋಪಕಾರ ಸ್ವಭಾವದಿಂದಾಗಿ ಸ್ಥಾನ-ಮಾನಗಳು ಲಭಿಸುವುವು. ಸಾರ್ವಜನಿಕರ ಸೇವೆ ಮಾಡುವವರಿಗೆ ಕೆಲವು ಅನುಯಾಯಿಗಳಿಂದ ಸಹಕಾರ, ಮತ್ತೆ ಕೆಲವರಿಂದ ಅಸಹಕಾರ ಎದುರಾಗಲಿದೆ.
  • ಕರ್ಕಾಟಕ
  • ವಿಚಾರಗಳನ್ನು ವಾಸ್ತವಿಕವಾಗಿ ಸ್ವೀಕರಿಸುವಂತಹ ಮನೋಭಾವನೆ ಬೆಳೆಸಿಕೊಳ್ಳಿ. ಹಪ್ಪಳ, ಸಂಡಿಗೆಯಂತಹ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಗ್ರಾಹಕರ ಸಂಪಾದನೆ ಆಗುತ್ತದೆ.
  • ಸಿಂಹ
  • ಧಾರ್ಮಿಕ ಕಾರ್ಯಗಳನ್ನು ಮಾಡಿದ ಫಲವಾಗಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ಹಲ್ಲುನೋವು ಬಾಧಿಸಲಿದೆ.
  • ಕನ್ಯಾ
  • ಸ್ವಯಂಕೃತ ಅಪರಾಧದ ಬಗ್ಗೆ ಎಚ್ಚರವಿರಲಿ. ಸರಿ ತಪ್ಪುಗಳನ್ನು ನಿರ್ಧರಿಸುವುದು ಕಷ್ಟಕರ ಎನಿಸುವುದು. ಮಧ್ಯಸ್ಥಿಕೆಯ ಕೆಲಸವನ್ನು ಮಾಡಲು ಹೋಗಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಮೇಲೆ ನಿಗಾ ಇರಲಿ.
  • ತುಲಾ
  • ಮುಕ್ತವಾಗಿ ಮಾತನಾಡದ ನಿಮ್ಮ ಸ್ವಭಾವವು, ಸಭೆಯಲ್ಲಿ ನಿಮ್ಮನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಂದರ್ಭ ತರಲಿದೆ. ಹೊಸ ಕೆಲಸ ಶುರುಮಾಡುವಾಗ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯೋಚಿಸಿ.
  • ವೃಶ್ಚಿಕ
  • ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಕಣ್ತಪ್ಪಿನಿಂದ ದ್ರವ್ಯ ನಷ್ಟವಾಗುವ ಸಂಭವವಿದೆ. ಕಛೇರಿಗೆ ರಜೆ ಇರುವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು ತುಂಬಾ ಕಾಡ‌ಲಿದೆ.
  • ಧನು
  • ಮಳಿಗೆಯನ್ನು ಖರೀದಿಸುವಾಗ ವ್ಯಾವಹಾರಿಕವಾಗಿ ಜಾಗ ಎಷ್ಟು ಸೂಕ್ತ ಎನ್ನುವುದರ ಮೇಲೆ ಗಮನವಿಡಿ. ಭೂ ಸಂಬಂಧಿ ವ್ಯವಹಾರಗಳಿಂದ ಹೆಚ್ಚಿನ ಲಾಭ. ಆದರೆ ದಾಖಲೆಗಳಲ್ಲಿ ಮೋಸ ಹೋಗದಿರಿ.
  • ಮಕರ
  • ನಿಮ್ಮ ಸಿಟ್ಟು ಅಥವಾ ಆತುರದ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗುವುದು. ಪರರ ವಿಚಾರಗಳನ್ನು ಮಾತನಾಡಿ ವೈರತ್ವ ತಂದುಕೊಳ್ಳಬೇಡಿ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು.
  • ಕುಂಭ
  • ಸಹೋದರರಲ್ಲಿ ಸಂಬಂಧಗಳು ಗಟ್ಟಿಯಾಗುವುದು. ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
  • ಮೀನ
  • ಇಷ್ಟವಸ್ತುವಿನ ಪ್ರಾಪ್ತಿಗಾಗಿ ಅವಿರತವಾಗಿ ಪ್ರಯತ್ನಿಸುವಿರಿ. ಸಂಜೆ ಆರಾಮವಾಗಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವಿರಿ. ಸಣ್ಣ ಮಕ್ಕಳೊಂದಿಗಿನ ಒಡನಾಟ ಮನಸ್ಸನ್ನು ಮುದಗೊಳಿಸುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.