ದಿನ ಭವಿಷ್ಯ: ಜೂನ್ 16 ಸೋಮವಾರ 2025– ಸಂಜೆಯೊಳಗೆ ಅಚ್ಚರಿಯ ಸುದ್ದಿ ಕೇಳುವಿರಿ
ದಿನ ಭವಿಷ್ಯ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜೂನ್ 2025, 18:42 IST
Last Updated 15 ಜೂನ್ 2025, 18:42 IST
ಮೇಷ
ಜೀವನದಲ್ಲಿ ಸುಖ-ದುಃಖವನ್ನು ಅನುಭವಿಸಿ ಈಗ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಸಂಜೆಯೊಳಗೆ ಅಚ್ಚರಿಯ ಸುದ್ದಿ ಕೇಳಲಿರುವಿರಿ.
ವೃಷಭ
ಕೈಗೆತ್ತಿಕೊಂಡಿರುವ ಕೆಲಸಗಳು ಖರ್ಚಿಗೆ ಕಾರಣವಾದರೂ ಪ್ರಯೋಜನಕಾರಿ . ಭವಿಷ್ಯದ ದಿನಗಳು ನಿಮ್ಮದಾಗಲಿವೆ. ಪಾಲುದಾರರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.
ಮಿಥುನ
ವೃತ್ತಿಯಲ್ಲಿ ಸಿಬ್ಬಂದಿ ವರ್ಗದವರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬೇಡಿ. ಕೋರ್ಟ್ ಕಚೇರಿಗಳ ಸಮಸ್ಯೆ ಇದ್ದಲ್ಲಿ ಬಗೆಹರಿಸಿಕೊಳ್ಳಲು ಸೂಕ್ತ ಸಮಯ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುವಿರಿ.
ಕರ್ಕಾಟಕ
ಬದಲಾವಣೆ ಬಯಸಿದಲ್ಲಿ ಕಾಯುವುದು ಅವಶ್ಯ. ಉದ್ಯೋಗದಲ್ಲಿನ ಪ್ರಯತ್ನಗಳು ವ್ಯಕ್ತಿಯೊಬ್ಬರ ಬೆಂಬಲದಿಂದ ನೆರವೇರುವುದು. ವೃತ್ತಿಪರವಾಗಿ ವಿದೇಶಕ್ಕೆ ತೆರಳುವ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ತಿಳಿಯಪಡಿಸಿ.
ಸಿಂಹ
ಯಾವುದೇ ಕೆಲಸವನ್ನು ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು. ಹೊಸ ಜವಾಬ್ದಾರಿ ನಿಭಾಯಿಸಬೇಕಾಗುವುದು. ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿ ರಾಹುಕಾಲದ ನಂತರ ಪ್ರಯಾಣ ಬೆಳೆಸಿ.
ಕನ್ಯಾ
ಸಂಸಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಋಣ ಪರಿಹಾರವಾಗಿ ಕುಟುಂಬದಲ್ಲಿ ಸಂತೋಷ ಮೂಡುವುದು, ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಿರಿ. ಅತಿಯಾಗಿ ಬೀಗದಿರುವುದು ಲೇಸು.
ತುಲಾ
ಸಮಸ್ಯೆಗಳ ಪರಿಹಾರಕ್ಕಾಗಿ ಹಿತಚಿಂತಕರೊಡನೆ ಮಾತುಕತೆ ನಡೆಸುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟ ಪ್ರಾಪ್ತಿಯಾಗಲಿದೆ. ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಂಡು ಯಶಸನ್ನು ಸಾಧಿಸಿ.
ವೃಶ್ಚಿಕ
ಮುಂದಾಲೋಚನೆಯಿಲ್ಲದೆ ಮುಂದುವರಿಯುವುದರ ಬದಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ. ಇತರರಿಗೆ ಮಾದರಿಯಾಗುವಂತೆ ಜೀವನ ನಡೆಸಬೇಕೆಂಬ ಆಸೆಗೆ ಪುಷ್ಟಿಕೊಡುವ ವಾತಾವರಣ ಸಿಗಲಿದೆ.