ADVERTISEMENT

ದಿನ ಭವಿಷ್ಯ: 24 ಆಗಸ್ಟ್ 2025 ಭಾನುವಾರ- ನಿಮ್ಮ ಪ್ರತಿಭೆ ಗುರುತಿಸುವ ಕಾಲ ಇದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಆಗಸ್ಟ್ 2025, 18:35 IST
Last Updated 23 ಆಗಸ್ಟ್ 2025, 18:35 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕ್ರೀಡಾಪಟುಗಳು ಸ್ವಲ್ಪ ಶ್ರಮವಹಿಸಿ ಅಭ್ಯಾಸಿಸಿದರೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಲಭಿಸುವುದು. ಕೆಲವು ದಿನಗಳಿಂದ ಮುಂದೂಡಿದ್ದ ವಿದೇಶ ಪ್ರಯಾಣವನ್ನು ಮತ್ತೆ ಕೈಗೊಳ್ಳುವ ಬಗ್ಗೆ ಯೋಚಿಸಿ. ಶ್ರೀ ನವಗ್ರಹ ಆರಾಧನೆ ಶುಭವನ್ನು ಉಂಟುಮಾಡುತ್ತದೆ.
  • ವೃಷಭ
  • ಸಾಕು ಪ್ರಾಣಿಗಳಿಂದ ತೊಂದರೆಗಳು ಸಂಭವಿಸಬಹುದು. ಪಶು ವೈದ್ಯರು, ಪ್ರಾಣಿ ಸಂಗ್ರಹಾಲಯದವರು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ. ಕೌಟುಂಬಿಕ ಸಮಸ್ಯೆಗಳು ಹೊಸದೊಂದು ಆಯಾಮ ಪಡೆಯಲಿದೆ.
  • ಮಿಥುನ
  • ಉತ್ಸಾಹಭರಿತವಾದ ಕಾರ್ಯಾಸಕ್ತಿಯನ್ನು ಹೊಂದಿರುವ ನಿಮಗೆ ಇಂದು ವಿಘ್ನಗಳು ಎದುರಾದರೂ, ಮುಂದಿನ ದಿನಗಳಲ್ಲಿ ಕಾರ್ಯ ಸಂಪೂರ್ಣವಾಗುವುದು. ಪ್ರವೃತ್ತಿಯಿಂದ ಹಣ ಸಂಪಾದನೆಯಾಗುವುದು ಸಂತೋಷವನ್ನು ಉಂಟುಮಾಡಲಿದೆ.
  • ಕರ್ಕಾಟಕ
  • ರಾಜಕೀಯ ವರ್ಗದವರು ಜನ ಮನ್ನಣೆ ಪಡೆದುಕೊಂಡು ಉತ್ತಮ ಫಲಗಳನ್ನು ಹೊಂದಲಿದ್ದಾರೆ. ಎಲ್ಲರೂ ನನ್ನಂತೆಯೇ ಇರಬೇಕೆಂಬ ನಿಮ್ಮ ಮನೋಭಾವವು, ನಿಮ್ಮ ಮನಸ್ಥಿತಿಯನ್ನು ಹಾಳುಮಾಡಲಿದೆ.
  • ಸಿಂಹ
  • ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು. ಅನಿರೀಕ್ಷಿತವಾಗಿ ಸಂತೋಷದ ಕ್ಷಣಗಳು ಈ ದಿನ ಬರಲಿದೆ.ಯಾವುದೇ ರೀತಿಯ ಕಾಗದ ಪತ್ರಗಳಿಗೆ ಸಹಿಯನ್ನು ಹಾಕದಿರಿ.
  • ಕನ್ಯಾ
  • ಮಕ್ಕಳು ಸಣ್ಣವರಾದಾಗಲೇ ಸರಿ ತಪ್ಪುಗಳ ತಿಳುವಳಿಕೆ ಹೇಳಿಕೊಡುವುದು ಪೋಷಕರ ಕರ್ತವ್ಯ ಆದ್ದರಿಂದ ತಿಳಿಹೇಳುವ ಜವಾಬ್ದಾರಿ ಈ ದಿನ ನಿಮಗೆ ಅನಾವಶ್ಯಕವಾಗಿರುತ್ತದೆ. ನಿಮ್ಮ ವಾಸಸ್ಥಾನ ಬದಲಾಗುವ ಲಕ್ಷಣಗಳಿವೆ.
  • ತುಲಾ
  • ಇನ್ನೊಬ್ಬರ ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಕೆಲಸಗಳು ಎಷ್ಟು ಕಷ್ಟವಾದರೂ ಹಿಂತಿರುಗುವ ಯೋಚನೆಯನ್ನು ಮಾಡಬೇಡಿ. ಇಂಧನ ಮಾರಾಟಗಾರರಿಗೆ ಅನುಕೂಲಕರ ದಿನ.
  • ವೃಶ್ಚಿಕ
  • ಸಿವಿಲ್ ಎಂಜಿನಿಯರ್‌ಗಳಿಗೆ ಬೃಹತ್ ವಾಣಿಜ್ಯ ಮಳಿಗೆಯ ಕಾರ್ಯಭಾರ ಸಿಗಬಹುದು. ಹಣದ ವಿಚಾರದಲ್ಲಿ ಸ್ಥಿರ ವರಮಾನದ ಬಗ್ಗೆ ಯೋಚನೆಯನ್ನು ಮಾಡಿ. ಈ ದಿನ ನಿಮಗೆ ಸುಖ-ದುಃಖದ ಮಿಶ್ರಫಲ ಅನುಭವಕ್ಕೆ ಬರಲಿದೆ.
  • ಧನು
  • ಉನ್ನತ ಪೋಲಿಸ್ ಅಧಿಕಾರಿಗಳು ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗಬೇಕಾಗಲಿದೆ. ಈಶ್ವರನ ಆರಾಧನೆಯು ಕೋರ್ಟ್‌ ವ್ಯವಹಾರಗಳಲ್ಲಿ ನಿಮ್ಮ ವಿಚಾರಕ್ಕೆ ಯಶಸ್ಸನ್ನು ತಂದು ಕೊಡುವುದು. ಮುದ್ರಣ ವೃತ್ತಿಯವರಿಗೆ ಉತ್ತಮ ಲಾಭ.
  • ಮಕರ
  • ರಾಜಕಾರಣಿಗಳು ನಿರ್ಲಿಪ್ತವಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವೈದ್ಯಕೀಯ ವೃತ್ತಿ ನಡೆಸುವವರಿಗೆ ಆಶ್ಚರ್ಯಕರವಾದ ಅನುಭವ ಸಿಗಲಿದೆ. ಹೊಸ ಬಟ್ಟೆ ಖರೀದಿಸುವ ಯೋಗವಿದೆ.
  • ಕುಂಭ
  • ಅಪವಾದದ ಭೀತಿಗೆ ಒಳಗಾಗದಿರಿ. ಮುಖ್ಯವಾಗಿ ನಿಮ್ಮದಲ್ಲದ ವಸ್ತು, ವಿಚಾರಗಳನ್ನು ನೀವು ಅಪೇಕ್ಷಿಸುವುದು ನಿಮ್ಮ ಸಣ್ಣತನವಾಗುವುದು. ಮಗನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಿ. ದಿನ ಕೂಲಿ ನೌಕರರಿಗೆ ಸಂಬಳದಲ್ಲಿ ಹೆಚ್ಚಳ ಕಂಡುಬರಲಿದೆ.
  • ಮೀನ
  • ಇತರರು ನಿಮ್ಮ ಪ್ರತಿಭೆಯನ್ನು ಗುರುತಿಸುವ ಕಾಲ ಹತ್ತಿರವಿದೆ. ಸಾಲಗಳಿಂದ ದೂರವಾಗುವ ವಿಚಾರದ ಬಗ್ಗೆ ಗಮನ ಹರಿಸಿ. ಹೊಸದಾಗಿ ಹಣ ಹೂಡಿಕೆ ಮಾಡುವಾಗ ಪರಿಶೀಲನೆ ಅಗತ್ಯ. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.