ADVERTISEMENT

ದಿನ ಭವಿಷ್ಯ: ಜೂನ್ 18 ಬುಧವಾರ 2025– ಈ ದಿನ ಈ ರಾಶಿಯವರಿಗೆ ಉತ್ತಮ ಆದಾಯ ಇರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಜೂನ್ 2025, 18:33 IST
Last Updated 17 ಜೂನ್ 2025, 18:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ವಂತ ಉದ್ಯೋಗಿಗಳಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ಅವಕಾಶಗಳು ದೊರೆಯಲಿವೆ. ದೈಹಿಕ ಶ್ರಮದ ಜೊತೆ ಧಾರ್ಮಿಕ ಕಾರ್ಯಗಳೂ ಸೇರಿದಾಗ ಶುಭಫಲ ಅನುಭವಕ್ಕೆ ಬರುತ್ತದೆ.
  • ವೃಷಭ
  • ಮಾಡಿ ಮುಗಿಸಬೇಕೆಂದು ಆಲೋಚಿಸಿದ್ದ ಕೆಲಸಗಳು ಶುಭಾರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಓದಿನಲ್ಲಿ ಅಪರಿಮಿತ ಆಸಕ್ತಿ ತೋರುವಿರಿ. ಉದರವ್ಯಾಧಿ ಕಾಣಿಸಿಕೊಳ್ಳಬಹುದು.
  • ಮಿಥುನ
  • ವ್ಯವಹಾರವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ.ಕಷ್ಟಪಟ್ಟು ದುಡಿಯುವ ಸ್ವಭಾವದವರು, ವ್ಯವಹಾರದಲ್ಲಿ ಜೀವನಕ್ಕೇನೂ ಕೊರತೆ ಕಾಣುವುದಿಲ್ಲ.
  • ಕರ್ಕಾಟಕ
  • ಜೀವನದಲ್ಲಿ ಅತಿಯಾಗಿ ನಂಬುವ ವ್ಯಕ್ತಿ ಜತೆ ಸಮಯ ಕಳೆಯುವಿರಿ. ಕಲ್ಪನಾಶಕ್ತಿ ಚುರುಕಾಗಿ ಕೆಲಸ ಮಾಡಲಿದೆ. ಕೈಮಗ್ಗದ ವಸ್ತುಗಳ ವ್ಯಾಪಾರಿಗಳಿಗೆ ಪ್ರಾಮುಖ್ಯತೆ ಸಿಗಲಿದೆ. ಉತ್ತಮ ಆದಾಯ ಇರಲಿದೆ.
  • ಸಿಂಹ
  • ಮೇಲಧಿಕಾರಿಗಳಿಂದ ಅವಕಾಶಗಳು ಹಾಗೂ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಸ್ವಾರ್ಥ ಬುದ್ಧಿಯನ್ನು ಬಿಟ್ಟು ಇತರರ ಕುರಿತು ಕಾಳಜಿ ವಹಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
  • ಕನ್ಯಾ
  • ಹುಡುಕಾಟದ ಸತತ ಪ್ರಯತ್ನದಿಂದ ಕಳೆದು ಹೋಗಿದ್ದ ದಾಖಲೆಪತ್ರಗಳು ಸಿಕ್ಕಿ ಮನಸ್ಸಿಗೆ ಸಮಾಧಾನವಾಗುವುದು. ಪತ್ರಿಕಾ ವರದಿಗಾರರಿಗೆ ಈ ದಿನ ಸದಾಕಾಲ ನೆನಪಿನಲ್ಲಿ ಉಳಿಯಲಿದೆ.
  • ತುಲಾ
  • ಮೇಲಧಿಕಾರಿಗಳ ಅಥವಾ ಪರಿಣತರ ಸಲಹೆ, ಸೂಚನೆಗಳೊಂದಿಗೆ ಮುಂದುವರಿದರೆ ಗೊಂದಲದ ಪರಿಸ್ಥಿತಿ ತಿಳಿಯಾಗುತ್ತದೆ. ದೇವಿಯ ಆರಾಧನೆಯಿಂದ ನೆಮ್ಮದಿ ತಂದುಕೊಳ್ಳಬಹುದು. ಧನಲಾಭ ಪ್ರಾಪ್ತಿ.
  • ವೃಶ್ಚಿಕ
  • ಜಮೀನಿನ ಕೆಲಸಗಳು ತೊಂದರೆ ಇಲ್ಲದೆ ನೆರವೇರಲಿವೆ. ಅದೃಷ್ಟದ ಕೊರತೆಯಿಂದ ಅಗತ್ಯಕ್ಕಿಂತ ಹೆಚ್ಚು ಸಂಪಾದನೆ ಆಗುವುದು ಕಷ್ಟವೆನಿಸುವುದು. ಅರಣ್ಯ ಅಧಿಕಾರಿಗಳಿಗೆ ಕೆಲಸ ಎದುರಾಗುತ್ತದೆ.
  • ಧನು
  • ಸರ್ಕಾರಿ ಅಧಿಕಾರಿಗಳಿಗೆ ಶುಭ ದಿನ. ಆಫೀಸಿನ ತುರ್ತು ಕೆಲಸಗಳತ್ತ ಗಮನ ಕೊಡಿ. ಕೆಲಸದಲ್ಲಿ ವಿವೇಚನೆಯ ಕೊರತೆ ಕಂಡುಬರಲಿದೆ. ಗೆಲುವು ಸಾಧಿಸಲು ಹೆಜ್ಜೆಹೆಜ್ಜೆಗೂ ವಿವೇಚನೆ ಅಗತ್ಯ.
  • ಮಕರ
  • ನಿಮ್ಮನ್ನು ರೂಪಿಸಿಕೊಳ್ಳಲು ಶ್ರಮ ಹಾಕಬೇಕೆನ್ನುವ ವಿಚಾರ ಕೋಪ ಹಾಗೂ ಅಸಹನೆಯನ್ನು ಉಂಟುಮಾಡಲಿದೆ. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ಈ ದಿನ ತಿಳಿಯುವುದು.
  • ಕುಂಭ
  • ಬೃಹತ್ ಮೊತ್ತದ ವ್ಯವಹಾರವನ್ನು ಹೊಂದಿರುವವರು ನಿಮ್ಮ ಎದುರಾಳಿಗಳ ಮೇಲಿನ ಗಮನವನ್ನು ಹೆಚ್ಚು ಮಾಡಿಕೊಳ್ಳುವುದು ಒಳ್ಳೆಯದು. ಹಣ ಸಹಾಯ ಮಾಡುತ್ತೇವೆ ಎಂದ ಸ್ನೇಹಿತರು ನೀಡದೆ ಸತಾಯಿಸುವ ಸಾಧ್ಯತೆ.
  • ಮೀನ
  • ಉದ್ಯೋಗಾಪೇಕ್ಷಿಗಳು ಇಷ್ಟ ಕ್ಷೇತ್ರದಲ್ಲಿ ಕೆಲಸ ಹೊಂದುವುದರಿಂದ ಲೀಲಾಜಾಲವಾಗಿ ಉತ್ತಮ ಹೆಸರು ಪಡೆಯುವಿರಿ. ಆರೋಗ್ಯದ ಎರುಪೇರುಗಳಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.