ADVERTISEMENT

ದಿನ ಭವಿಷ್ಯ: ಜೂನ್‌ 22 ಭಾನುವಾರ 2025– ಇವರಿಗೆ ಬಂಗಾರ ಖರೀದಿಸುವ ಮನಸ್ಸಾಗುವುದು

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜೂನ್ 2025, 18:46 IST
Last Updated 21 ಜೂನ್ 2025, 18:46 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆ ಕೇಳಿ ಆನಂದಆಗಲಿದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರಲಿದೆ. ನೃತ್ಯಾಭ್ಯಾಸ ಮುಂದುವರೆಸುವಂತೆ ಅಧ್ಯಾಪಕರಿಂದ ಒತ್ತಾಯ ಹೆಚ್ಚುವುದು.
  • ವೃಷಭ
  • ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಉನ್ನತ ಓದಿನೆಡೆಗೆ ಹೆಚ್ಚು ಗಮನ ನೀಡಬೇಕಾಗುವುದು. ಚಿತ್ರಕಲೆಯಲ್ಲಿನ ನಿಮ್ಮ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗೆ ವಿಶೇಷ ತರಗತಿಗೆ ಹೋಗಲು ತಂದೆಯಿಂದ ಒಪ್ಪಿಗೆ ದೊರಕಲಿದೆ.
  • ಮಿಥುನ
  • ಒಣಪ್ರತಿಷ್ಠೆಯಿಂದಾಗಿ ಸಂಬಂಧಗಳು ನುಚ್ಚುನೂರಾಗುವ ಪರಿಸ್ಥಿತಿ ತಂದುಕೊಳ್ಳಬೇಡಿ. ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ. ಇನ್ನೊಬ್ಬರ ಅಭಿಪ್ರಾಯ ಪಡೆದು ಚಿಕಿತ್ಸೆ ತೆಗೆದುಕೊಳ್ಳಿ.
  • ಕರ್ಕಾಟಕ
  • ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ ವೃದ್ಧಿಯಾಗುವುದು. ಮಕ್ಕಳ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯ ಹೆಚ್ಚಲಿದೆ. ಶ್ರೀ ಶಾರದೆಯನ್ನು ಸ್ತುತಿಸುವುದರಿಂದ ಮೇಧಾಶಕ್ತಿ ಅಭಿವೃದ್ಧಿಯಾಗುವುದು.
  • ಸಿಂಹ
  • ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆ ಇರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ಯಾವ ಯಾಗ ಮಾಡಿದರೂ ಗುರುವಿನ ಶಾಪ ಪರಿಹಾರಆಗುವುದಿಲ್ಲ. ಆದ್ದರಿಂದ ಗುರುಗಳಿಗೆ ನೋವಾಗುವ ಕೆಲಸವನ್ನು ಮಾಡದಿರಿ.
  • ಕನ್ಯಾ
  • ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವ ಪ್ರಯತ್ನದಿಂದಾಗಿ ಶ್ರೀಮಂತರಾಗಬಹುದು. ನೀವು ಮಕ್ಕಳ ಶ್ರೇಯಸ್ಸಿಗಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದ ಇಂದು ಉತ್ತಮ ಫಲ ನಿರೀಕ್ಷಿಸಬಹುದು.
  • ತುಲಾ
  • ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ, ನಿಮ್ಮ ಮನೋಭಿಲಾಷೆ ಈಡೇರುವುದು. ಆಟಿಕೆಗಳ ಮಾರಾಟದವರಿಗೆ ಉತ್ತಮ ಲಾಭವಿರುವುದು.
  • ವೃಶ್ಚಿಕ
  • ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನವಿರಲಿ. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ. ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಸಿಗುವ ಮುನ್ಸೂಚನೆ ಸಿಗುತ್ತದೆ.
  • ಧನು
  • ಎಲ್ಲ ಕೆಲಸಗಳಲ್ಲೂ ಧೈರ್ಯದಿಂದ ಮುನ್ನಡೆಯನ್ನು ಸಾಧಿಸುವಿರಿ. ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮ ಸೂಕ್ತ ಸಮಯದಲ್ಲಿ ಬೆಳಕಿಗೆ ಬಂದು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗುವುದು.
  • ಮಕರ
  • ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿರುವವರು ಇಂದು ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗಬಹುದು. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಲಾಭ ಹೆಚ್ಚಿ ,ಕೆಲಸಗಳನ್ನು ವೃದ್ಧಿಸಿಕೊಳ್ಳುವಿರಿ.
  • ಕುಂಭ
  • ತಂದೆಯ ಮನಸ್ಸಿಗೆ ನೋವಾಗುವ ಸಂಗತಿಯು ಇಂದು ನಿಮ್ಮಿಂದ ನಡೆಯಲಿದೆ. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ. ಅಂತಹ ಕೆಲಸಗಳಲ್ಲಿ ಹೆಚ್ಚು ಗಮನವಿರಲಿ. ಹಳದಿ ಬಣ್ಣವು ಅದೃಷ್ಟ ತರಲಿದೆ.
  • ಮೀನ
  • ಸ್ವ ಉದ್ಯೋಗಿಗಳಿಗೆ ವರಮಾನದಲ್ಲಿ ಉತ್ತಮ ಸುಧಾರಣೆಯು ಕಂಡು ಬರುವುದು. ಕೂಡಿಟ್ಟ ಹಣದಿಂದ ಬಟ್ಟೆ ಅಥವಾ ಬಂಗಾರ ಖರೀದಿಸುವ ಮನಸ್ಸಾಗುವುದು, ಅಂತೆಯೇ ಮಾಡುವುದರಿಂದ ಸಂತಸವಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.