ADVERTISEMENT

ದಿನ ಭವಿಷ್ಯ: ಮೇ 5 ಸೋಮವಾರ 2025- ಪ್ರೇಮಿಗಳಿಗೆ ಸಹೋದರರಿಂದ ಸ್ಪಂದನೆ ಸಿಗಲಿದೆ

ದಿನ ಭವಿಷ್ಯ: ಮೇ 5 ಸೋಮವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಮೇ 2025, 18:37 IST
Last Updated 4 ಮೇ 2025, 18:37 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಸ್ತ್ರವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಗುವುದು. ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಸೂಕ್ತ. ನೃತ್ಯ , ನಟನೆ ಕಲಿಯಲು ಆಸಕ್ತಿ ಉಂಟಾಗುವುದು.
  • ವೃಷಭ
  • ಸಾಲ ಕೊಟ್ಟವರ ಎದುರು ಅಗೌರವವಾಗುವ ಸನ್ನಿವೇಶ ಎದುರಾಗಲಿದೆ. ಅವಿವಾಹಿತರಿಗೆ ನಿರೀಕ್ಷೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ. ಕುಶಲಕಾರ್ಮಿಕರಿಗೆ ಬೇಡಿಕೆಗಳು ಹೆಚ್ಚಲಿವೆ.
  • ಮಿಥುನ
  • ಶತ್ರುಗಳ ಬಣ್ಣ ಬಯಲಾಗುವುದು ಸಂತೋಷಕ್ಕೆ ಕಾರಣವಾಗುತ್ತದೆ. ಕಾರ್ಖಾನೆಯ ಒಂದಷ್ಟು ಯೋಜನೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ಲಭಿಸಲಿವೆ.
  • ಕರ್ಕಾಟಕ
  • ವಿನಾಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಪರಿಶ್ರಮವು ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ. ಬೆನ್ನು ಮತ್ತು ಕಾಲಿನ ನೋವು ನಿವಾರಣೆಗೆ ವ್ಯಾಯಾಮ ಮಾಡಿ.
  • ಸಿಂಹ
  • ತತ್ವ ಆದರ್ಶಗಳ ಪಾಠದ ಜತೆಗೆ ಹಿರಿಯರ ಅನುಭವದ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕ ಮಾಡಿಸುವುದರಿಂದ ಮನೋವ್ಯಾಧಿಗಳು ದೂರಾಗಲಿವೆ.
  • ಕನ್ಯಾ
  • ಆಲೋಚನೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದರಿಂದ ಅಭಿವೃದ್ಧಿ ಕುಂಠಿತವಾಗಬಹುದು. ಅಂಜಿಕೆ ಬೇಡ. ನಿಮ್ಮ ಆಲೋಚನೆಯನ್ನು ‌ಪ್ರದರ್ಶಿಸಿ ಮೆಚ್ಚುಗೆ ಪಡೆಯುವಿರಿ.
  • ತುಲಾ
  • ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ. ಷೇರು ಕೊಳ್ಳುವ ಯೋಜನೆಗೆ ಮುಂದಾಗಿ. ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಸ್ಪಂದನೆ ಸಿಗಲಿದೆ.
  • ವೃಶ್ಚಿಕ
  • ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಸಹೋದರರಲ್ಲಿ ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ಕಬ್ಬಿಣ ಮತ್ತು ತಾಮ್ರದ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಹಣದ ಚಿಂತೆ ಇರುವುದಿಲ್ಲ.
  • ಧನು
  • ಹಳೆಯ ಕಾರಿನ ಅಥವಾ ಯಂತ್ರೋಪಕರಣದ ಮಾರಾಟ ವಿಷಯವನ್ನು ಕೈಬಿಡುವುದು ಉತ್ತಮ. ಸರಕು ಸಾಗಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು.
  • ಮಕರ
  • ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಪರಿಸ್ಥಿತಿ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಯತ್ನದಲ್ಲಿ ಸಫಲರಾಗುವಿರಿ.
  • ಕುಂಭ
  • ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಲಾಭದಾಯಕವೆನಿಸುವ ಕೆಲಸ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸುವಿರಿ. ಹಣ್ಣಿನ ವ್ಯಾಪಾರಿಗಳಿಗೆ ಇಂದು ಲಾಭದ ದಿನ.
  • ಮೀನ
  • ಕೆಲಸ ಕಾರ್ಯಗಳಲ್ಲಿ ಕಷ್ಟಗಳು ಎದುರಾಗಬಹುದು. ಕರ್ತವ್ಯ ನಿರ್ಲಕ್ಷಿಸಬೇಡಿ. ಸಹೋದ್ಯೋಗಿಗಳು ಸಹಕಾರ ನೀಡುವಂತೆ ಅಪೇಕ್ಷಿಸುವುದು ವ್ಯರ್ಥ. ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಡಗರವಿರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.