ADVERTISEMENT

ದಿನ ಭವಿಷ್ಯ: ಮೇ 6 ಮಂಗಳವಾರ 2025– ಇಂದು ವಿವಾಹ ಅಪೇಕ್ಷಿಗಳಿಗೆ ಶುಭವಿದೆ

ದಿನ ಭವಿಷ್ಯ: ಮೇ 6 ಮಂಗಳವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಮೇ 2025, 18:56 IST
Last Updated 5 ಮೇ 2025, 18:56 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ. ಅನಿರೀಕ್ಷಿತವಾಗಿ ಆಗುವ ವರ್ಗಾವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳು ಕೆಲಸದಲ್ಲೇ ತೃಪ್ತಿಪಡುವಂತೆ ಆಗುವುದು.
  • ವೃಷಭ
  • ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ. ಅನಿರೀಕ್ಷಿತವಾಗಿ ಆಗುವ ವರ್ಗಾವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳು ಕೆಲಸದಲ್ಲೇ ತೃಪ್ತಿಪಡುವಂತೆ ಆಗುವುದು.
  • ಮಿಥುನ
  • ಕನಸುಗಳು ಕನಸಾಗಿಯೇ ಉಳಿಯಲಿವೆ. ಸರ್ಕಾರಿ ಅಧಿಕಾರಿಗಳ ಅಥವಾ ಹಿರಿಯರಿಂದ ಸಹಕಾರಗಳನ್ನು ಅಪೇಕ್ಷಿಸುವಂತೆ ಆಗಲಿದೆ. ಶುಭ ಕಾರ್ಯಗಳ ಪೂರ್ವತಯಾರಿಯ ಸಂಭವವಿರುವುದು.
  • ಕರ್ಕಾಟಕ
  • ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ. ವೃತ್ತಿಯ ಕೆಲಸವನ್ನು ಆಲಸ್ಯದಿಂದಾಗಲಿ ಅಥವಾ ತಾಂತ್ರಿಕ ದೋಷದಿಂದಾಗಲಿ ಮುಂದೂಡುವುದು ಸರಿಯಲ್ಲ.
  • ಸಿಂಹ
  • ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಂತಾನೆ ಬಗೆಹರಿದು ಮನಸ್ಸು ನಿರಾಳವಾಗಲಿವೆ. ಕಬ್ಬಿಣದ ಕೆಲಸ ಮಾಡುವವರು ಕೆಲಸದಲ್ಲಿ ಜಾಗ್ರತರಾಗಿರಿ. ರಾಜಕಾರಣಿಗಳಿಗೆ ಗೌರವ ಹಾಗೂ ಮನ್ನಣೆ ದೊರೆಯುತ್ತದೆ.
  • ಕನ್ಯಾ
  • ಹೋಟೆಲ್ ಉದ್ಯಮದಾರರಿಗೆ ಬಹುನಿರೀಕ್ಷಿತ ಲಾಭಗಳು ಎದುರಾಗುವುದು. ಕೆಲಸಕ್ಕೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ಉತ್ತಮ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ.
  • ತುಲಾ
  • ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿ ಮಾಡಿಕೊಳ್ಳುವುದು ಒಳ್ಳೆಯದು. ಸಮೀಪವರ್ತಿಗಳ ಆಶ್ವಾಸನೆ ದೊರೆತು ಶುಭ ಕಾರ್ಯಗಳತ್ತ ಗಮನ ಹರಿಸುವಿರಿ.
  • ವೃಶ್ಚಿಕ
  • ಆತ್ಮಸ್ಥೈರ್ಯದಿಂದ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ಕಾರ್ಯವೈಖರಿ ಆಫೀಸಿನಲ್ಲಿ ಮೆಚ್ಚುವ ಮಾತಾಗುವುದು. ಯಾವುದೇ ವಿಚಾರಗಳಿಗೂ ಬೇಸರ ಪಡುವ ಅವಶ್ಯಕತೆ ಇಲ್ಲ.
  • ಧನು
  • ವಿಷಯಗಳಲ್ಲಿಯೂ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ. ಕೇವಲ ಮನರಂಜನೆಗಾಗಿ ದೂರ ಪ್ರಯಾಣ ಸರಿಯಲ್ಲ. ದಿನಸಿ ವರ್ತಕರಿಗೆ ಉತ್ತಮ ಲಾಭ. ಆಲಸ್ಯವಾಗುವುದು.
  • ಮಕರ
  • ಇಂಧನ ಮಾರಾಟಗಾರರಿಗೆ ಹೆಚ್ಚಿನ ಕಮಿಷನ್ ಲಭ್ಯವಾಗಲಿದೆ. ಕೆಲಸಕ್ಕೆ ಆಲೋಚನೆಗಿಂತ ಹೆಚ್ಚಿನ ಸಮಯ ಬೇಕಾಗುವುದು. ಸರಿ-ತಪ್ಪುಗಳ ತೀರ್ಮಾನದಲ್ಲಿ ಗೊಂದಲಕ್ಕೆ ಒಳಗಾಗುವಿರಿ. ವಿವಾಹ ಅಪೇಕ್ಷಿಗಳಿಗೆ ಶುಭವಿದೆ.
  • ಕುಂಭ
  • ಸ್ನೇಹಿತರಿಗೆ ಸ್ವಯಂಪ್ರೇರಣೆಯಿಂದ ವ್ಯವಹಾರಿಕ ಸಲಹೆ ಕೊಡುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಶುಭ ದಿನ. ಅದರಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸಲಹೆಗಾರರಿಂದ ಉತ್ತಮ ಮಾರ್ಗದರ್ಶನ ಸಿಗುವುದು.
  • ಮೀನ
  • ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಕಹಿ ಘಟನೆಗಳಿಂದ ಕಲಿತ ಪಾಠ ‌ ಉಪಯೋಗಕ್ಕೆ ಬರಲಿದೆ. ಸ್ನೇಹಿತರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.