ದಿನ ಭವಿಷ್ಯ: ನವೆಂಬರ್ 24 ಸೋಮವಾರ 2024- ವಕೀಲರಿಗೆ ಉತ್ತಮ ಅವಕಾಶ ಸಿಗಲಿದೆ
ದಿನ ಭವಿಷ್ಯ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ನವೆಂಬರ್ 2025, 18:31 IST
Last Updated 23 ನವೆಂಬರ್ 2025, 18:31 IST
ದಿನ ಭವಿಷ್ಯ
ಮೇಷ
ರಫ್ತು ವ್ಯಾಪಾರಗಳಲ್ಲಿ ಹೇರಳ ಲಾಭ ಮತ್ತು ತಲೆಬಿಸಿಯ ವಾತಾವರಣಗಳೆರಡೂ ಇರುವುದು. ಮದುವೆಯ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರಲಾಗದೇ ಗೊಂದಲಕ್ಕೆ ಒಳಗಾಗುವಿರಿ.
ವೃಷಭ
ಮಾತೃ ವರ್ಗದವರ ಸಹಾಯದಿಂದ ಆರ್ಥಿಕತೆಯಲ್ಲಿನ ಭಯನಿವಾರಣೆ . ಕಠಿಣ ಪರಿಶ್ರಮದ ಮೂಲಕ ಮೇಲಧಿಕಾರಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ. ಸಣ್ಣ ಮಗುವಿನ ಆರೋಗ್ಯದ ಮೇಲೆ ಗಮನವಿಡಿ.
ಮಿಥುನ
ನಿರಂತರ ಪ್ರಯತ್ನದಿಂದ ಕ್ರೀಡಾಕ್ಷೇತ್ರದಲ್ಲಿನ ಹೆಸರು ಉತ್ತಮ ಸ್ಥಾನ ತಲುಪುತ್ತದೆ. ವೈದ್ಯರು ನೀಡಿದ ಸಲಹೆಯನ್ನು ಚಾಚೂ ತಪ್ಪದೆ ಆಚರಿಸಿ. ವಕೀಲರಿಗೆ ಉತ್ತಮ ಅವಕಾಶ ಸಿಗಲಿದೆ.
ಕರ್ಕಾಟಕ
ಕಾದಂಬರಿಪ್ರಿಯರಿಗೆ ಇಷ್ಟವಾಗುವ ಪುಸ್ತಕ ದೊರೆಯುವುದು. ಪ್ರಾಣಾಯಾಮ ಧ್ಯಾನವನ್ನು ನಿರಂತರವಾಗಿ ಮಾಡುವ ಅಭ್ಯಾಸ ಮಾಡುವುದು ಒಳ್ಳೆಯದು. ಬೆಂಕಿಯಿಂದ ಅಪಾಯ ಉಂಟಾಗಬಹುದು.
ಸಿಂಹ
ಪಾರಂಪರಿಕವಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುವನ್ನು ಕಳೆಯಬೇಡಿ. ಮಗುವಿನ ಮೊದಲ ಮಾತು ಅಥವಾ ಮಕ್ಕಳ ಅಭಿವೃದ್ಧಿಯನ್ನು ಕಂಡು ಪುಳಕಿತಗೊಳ್ಳುವಿರಿ. ರಾಜೇಶ್ವರಿಯನ್ನು ಆರಾಧಿಸಿ.
ಕನ್ಯಾ
ರಕ್ತ ಅಥವಾ ರಕ್ತನಾಳದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿಯು ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ.
ತುಲಾ
ಸಂಗಡಿಗರು ಅಧರ್ಮದ ಮಾರ್ಗದಿಂದ ಹೂಡಿಕೆ ಮಾಡುತ್ತಿದ್ದಾರೇ ಎಂದು ಅನುಭವಕ್ಕೆ ಬರಲಿದೆ. ವ್ಯವಹಾರದಲ್ಲಿ ಕಠಿಣ ಸವಾಲನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯವನ್ನು ದೇವತಾರಾಧನೆಯಿಂದ ಹೊಂದುವಿರಿ.
ವೃಶ್ಚಿಕ
ಹಣವು ಸಮೃದ್ಧವಾಗಿದೆ ಎಂದು ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡುವ ಪ್ರವೃತ್ತಿ ಬೇಡ. ಬಹಳ ದಿನಗಳಿಂದ ಬಾಕಿ ಇರುವ ಕಾರ್ಯವನ್ನು ಆರಂಭಿಸುವ ಬಗ್ಗೆ ಯೋಚಿಸಿ. ದಿನಾಂತ್ಯದಲ್ಲಿ ಅಲ್ಪ ನೆಮ್ಮದಿ ಪ್ರಾಪ್ತಿ.
ಧನು
ಪರಪೀಡನೆಯನ್ನೇ ತನ್ನ ವೃತ್ತಿ ಎಂದು ತಿಳಿಯುವ ವ್ಯಕ್ತಿಗಳ ಜತೆ ನೀವು ಎಷ್ಟು ಸಂಭಾಷಣೆಯನ್ನು ನಡೆಸಿದರೂ ಪ್ರಯೋಜನವಿಲ್ಲ. ಮಿತ್ರರ ಸಹಕಾರದಿಂದ ಸ್ವಗೃಹ ನಿರ್ಮಾಣಕ್ಕೆ ನೆರವು ಸಿಗಲಿದೆ.
ಮಕರ
ಕೆಲಸದಲ್ಲಿ ಗುಣಮಟ್ಟದ ಕೊರತೆಯಿಂದಾಗಿ ಸಮಾಧಾನ ಇಲ್ಲದಂತೆ ಆಗುತ್ತದೆ. ದಿನಚರಿಯ ಬದಲಾವಣೆಗಾಗಿ ಸಣ್ಣ ಪ್ರಮಾಣದ ಪ್ರವಾಸಕ್ಕಾಗಿ ಯೋಚನೆ ನಡೆಸುವಿರಿ. ವಸ್ತ್ರಾಭರಣ ಖರೀದಿಯ ಯೋಗವಿದೆ.
ಕುಂಭ
ಮನೆಯಲ್ಲಿ ನಡೆದ ಕಾರ್ಯಕ್ರಮದ ಫಲವಾಗಿ ದೈನಂದಿನ ವೇಳಾಪಟ್ಟಿ ಬದಲಾವಣೆಯಾಗಲಿದೆ. ಶಾಂತಿಯಿಂದ ವರ್ತಿಸಿದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ.
ಮೀನ
ನಿರೀಕ್ಷೆಯ ಫಲಿತಾಂಶ ದೊರೆಯಲು ಹರಸಹಾಸ ಪಡಬೇಕಾದ ಸಂದರ್ಭ ಬರುತ್ತದೆ. ಎಲೆಕ್ಟ್ರಿಕಲ್ ಕಂಟ್ರಾಕ್ಟರ್‌ಗಳಿಗೆ ಅವಕಾಶಗಳು ಸಿಗುವುದು. ಸ್ನೇಹಿತನಿಗಾಗಿ ಹಣ ಖರ್ಚು ಮಾಡಲಿದ್ದೀರಿ