ದಿನ ಭವಿಷ್ಯ: 27 ನವೆಂಬರ್ 2025 ಗುರುವಾರ– ನಿರುದ್ಯೋಗಿಗಳ ಮನೋಕಾಮನೆ ಈಡೇರುತ್ತದೆ
ದಿನ ಭವಿಷ್ಯ: 27 ನವೆಂಬರ್ 2025 ಗುರುವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ನವೆಂಬರ್ 2025, 18:31 IST
Last Updated 26 ನವೆಂಬರ್ 2025, 18:31 IST
ದಿನ ಭವಿಷ್ಯ
ಮೇಷ
ಹಿರಿಯ ಅಧಿಕಾರಿಗಳು ಪರಿಶ್ರಮ ಹಾಗೂ ಜವಾಬ್ದಾರಿಯುತ ನಡವಳಿಕೆಗಳನ್ನು ಗಮನಿಸಿ ಆರ್ಥಿಕ ಮಟ್ಟವನ್ನು ಮೇಲಕ್ಕೆತ್ತುವರು. ವೃತ್ತಿಯಲ್ಲಿ ಸ್ವಾತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನಿಮ್ಮದ್ದಾಗಲಿದೆ.
ವೃಷಭ
ಸಹೋದರರಿಂದ ಹಿತವಚನ ಕೇಳಬೇಕಾದೀತು, ಭಿನ್ನಾಭಿಪ್ರಾಯ ಮೂಡಿದಲ್ಲಿ ಶಾಂತ ಸ್ವಭಾವದಿಂದ ವರ್ತಿಸಿ. ತಾಯಿಯ ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ನಿವೇಶನ ಖರೀದಿಸಲು ಹುಡುಕಾಟ ನಡೆಸುವಿರಿ.
ಮಿಥುನ
ಸಾರ್ವಜನಿಕರ ಸೇವೆ ಮಾಡುವವರಿಗೆ ಅನುಯಾಯಿಗಳಿಂದ ಸಹಕಾರ ಕೆಲವರಿಂದ ಅಸಹಕಾರ ಎರಡನ್ನೂ ಸ್ವಾಗತಿಸುವ ಅನಿವಾರ್ಯ ಉಂಟಾಗುತ್ತದೆ. ನಿರುದ್ಯೋಗಿಗಳ ಮನೋಕಾಮನೆ ಈಡೇರುತ್ತದೆ.
ಕರ್ಕಾಟಕ
ಹಣಕಾಸು ಪರಿಸ್ಥಿತಿ ಉತ್ತಮವಾಗುವುದರಿಂದ ಒತ್ತಡ ತರುವಂಥ ಕೆಲಸಗಳಿದ್ದರೂ ಬಗೆಹರಿಯುವುದು. ಪರೋಪಕಾರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ-ಮಾನಗಳು ಲಭಿಸಲಿವೆ.
ಸಿಂಹ
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳ ಜತೆ ಬಯಸಿದ ಜಾಗ ಸಿಗುವ ಸಾಧ್ಯತೆಗಳು ಇವೆ. ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ.
ಕನ್ಯಾ
ಹಿತಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ ಅನುಭವಕ್ಕೆ ಬರುವುದಿಲ್ಲ. ಮಧ್ಯಸ್ಥಿಕೆಯ ಕೆಲಸದಿಂದ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ವೈದ್ಯರನ್ನು ಭೇಟಿ ಮಾಡುವ ಸನ್ನಿವೇಶಗಳು ಎದುರಾಗುವವು.
ತುಲಾ
ನಿಮ್ಮ ನಡವಳಿಕೆಗಿಂತ ನಿಮ್ಮ ಸರಳತೆಗೆ ಸ್ಥಾನಮಾನ ದೊರಕುವುದರಿಂದ ಸರಳತೆಯನ್ನು ಮಂತ್ರವನ್ನು ಜಪಿಸಿ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ.
ವೃಶ್ಚಿಕ
ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಸು ದೂರ ಮಾಡಿಕೊಳ್ಳುವುದು ಉತ್ತಮ. ದುರ್ಗಾಪರಮೇಶ್ವರಿಯ ಆರಾಧನೆಯಿಂದ ಶುಭವಾಗುವುದು.
ಧನು
ಸಿಕ್ಕಿರುವ ಹೊಸ ವೃತ್ತಿಯ ಅಧಿಕಾರಿಗಳು ನಿಮಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾರೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿ, ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಅವಕಾಶವಿದೆ.
ಮಕರ
ವಂಶದ ಕುಡಿಯು ಬಯಸಿದ ರೀತಿಯಲ್ಲಿಯೇ ಉತ್ತಮ ಜೀವನವನ್ನು ನಡೆಸುತ್ತಿರುವುದನ್ನು ಜನರು ಹೊಗಳುವುದು ಕೇಳಿ ಆನಂದವನ್ನು ಹೊಂದುವಿರಿ. ದೇವರ ಧ್ಯಾನದಿಂದ ಅದನ್ನು ಹೋಗಲಾಡಿಸಿಕೊಳ್ಳಿ.
ಕುಂಭ
ನಾಟಕ ಅಥವಾ ಸಿನಿಮಾದಲ್ಲಿ ನಟನೆ ಮಾಡುವಂಥರಿಗೆ ಉತ್ತಮ ಅವಕಾಶಗಳ ಜತೆ ಹೆಸರೂ ಬರಲಿದೆ. ಜೀವನದಲ್ಲಿನ ಸಂತೋಷ ಪಡೆಯಲು ಅವಕಾಶಗಳು ಲಭಿಸಲಿವೆ. ಎಲ್ಲಾ ವಿಚಾರದಲ್ಲೂ ಎಚ್ಚರದ ನಡೆ ಇರಲಿ.
ಮೀನ
ಹಿಂದಿನ ದಿನದ ನಿದ್ರಾಹೀನತೆಯಿಂದಾಗಿ ಇಂದಿನ ಕೆಲಸಗಳಲ್ಲಿ ನಷ್ಟ ಸಂಭವಿಸಬಹುದು. ಮಕ್ಕಳ ಪ್ರತಿಯೊಂದು ಹೆಜ್ಜೆಯ ಮೇಲೂ ಎಚ್ಚರಿಕೆಯ ಕಣ್ಣನ್ನು ಇಟ್ಟಿರಲೇಬೇಕಾಗುತ್ತದೆ.