ADVERTISEMENT

ದಿನ ಭವಿಷ್ಯ: 5 ಜನವರಿ 2026 ಸೋಮವಾರ– ಜೀವನ ಶೈಲಿಯಲ್ಲಿ ಬದಲಾವಣೆಯ ಗಾಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಜನವರಿ 2026, 18:31 IST
Last Updated 4 ಜನವರಿ 2026, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ತಾಯಿಯವರ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಮನೆಗೆ ಬರುವಂತಾಗಲಿದೆ.
  • ವೃಷಭ
  • ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸಾಕಷ್ಟು ಸುಸಂದರ್ಭಗಳು ಎದುರಾಗಲಿವೆ. ಅಧಿಕಾರಿಗಳ ವಿಶ್ವಾಸಗಳಿಸಲು ಪ್ರಯತ್ನಿಸಿ.
  • ಮಿಥುನ
  • ಹಿರಿಯರು ಮೊದಲಿನಿಂದ ಕುಟುಂಬದಲ್ಲಿ ನಡೆಸಿಕೊಂಡು ಬಂದ ಧಾರ್ಮಿಕ ವಿಧಿವಿಧಾನವನ್ನು ಆಚರಿಸುವ ಬಗ್ಗೆ ತೀರ್ಮಾನಿಸಿ. ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸುತ್ತದೆ.
  • ಕರ್ಕಾಟಕ
  • ವಾಹನ ಮಾರಾಟಗಾರರಿಗೆ ಹಾಗೂ ರಿಪೇರಿ ಮಾಡುವವರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ. ಆಯುರ್ವೇದದ ಪ್ರಭಾವದಿಂದ ಆರೋಗ್ಯದಲ್ಲಿ ಸುಧಾರಣೆ. ಕೆಲಸಗಳಲ್ಲಿ ಆಸಕ್ತಿ ವೃದ್ಧಿ.
  • ಸಿಂಹ
  • ವಾಣಿಜ್ಯೋದ್ಯಮ ಮಂದಿಗೆ ಬಂಡವಾಳ ತೊಡಗಿಸಲು ಉತ್ತಮ ದಿನ. ಕೃಷಿ ಕಾರ್ಯವು ವಿಳಂಬವಾಗದಂತೆ ಕೃಷಿಕರು ಗಮನವಹಿಸಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರದಿರಿ. ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಅಗತ್ಯ.
  • ಕನ್ಯಾ
  • ಹಾದಿಯಲ್ಲಿ ಹೋಗುವ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂಥ ಘಟನೆಯೊಂದು ನಡೆಯುವುದು. ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು.
  • ತುಲಾ
  • ದೈನಂದಿನ ಖರ್ಚು-ವೆಚ್ಚಗಳಿಗೆ ಹಾಗೂ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ.
  • ವೃಶ್ಚಿಕ
  • ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ ಅಥವಾ ಬಂಧುಮಿತ್ರರು ಮನೆಗೆ ಬರಲಿದ್ದಾರೆ. ಗೃಹ ನಿರ್ಮಾಣ ಕಾರ್ಯಕ್ಕೆ ಆರ್ಥಿಕತೆಯ ಅಭಾವ ಸ್ಥಿತಿ ಎದುರಾಗಬಹುದು. ಪರಿಣಾಮವಾಗಿ ಮನಸ್ಸಿನಲ್ಲಿ ಹೆದರಿಕೆ ಮೂಡಲಿದೆ.
  • ಧನು
  • ಪದವೀಧರರಿಗೆ ಉದ್ಯೋಗದ ಅನ್ವೇಷಣೆಯಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬರಲಿದೆ. ರಫ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುವಿರಿ. ಬೇರೆ ಯಾರಿಗೂ ಯೋಜನೆಯ ಸುಳಿವು ಸಿಗದಂತೆ ಗೌಪ್ಯತೆ ಕಾಪಾಡಿ.
  • ಮಕರ
  • ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿ ಮಾತಿನಂತೆ ಧಾರ್ಮಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೃಷಿ ಹಾಗೂ ಹೈನು ವ್ಯಾಪಾರಗಳಿಂದ ಅಧಿಕ ಲಾಭ .
  • ಕುಂಭ
  • ಹಲವು ಅವಕಾಶಗಳಿಂದ ಗೊಂದಲಕ್ಕೆ ಈಡಾಗುವಿರಿ.ವ್ಯವಹಾರ ಚಾಣಾಕ್ಷತನಕ್ಕೆ, ಕ್ರಿಯಾಶೀಲತೆಗೆ ಸರಿಯಾಗಿ ಲಾಭವಾಗುವುದು. ಚಿನ್ನ ಮಾರಾಟಗಾರರಿಗೆ ಶುಭ ದಿನ.
  • ಮೀನ
  • ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ದೇಹಕ್ಕೆ ಅತಿ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯ ಸಾಧಿಸಿದ ಸಂತೋಷ ಇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.