ADVERTISEMENT

ದಿನ ಭವಿಷ್ಯ: ಜನವರಿ 11 ಭಾನುವಾರ 2026– ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ

ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಜನವರಿ 2026, 18:31 IST
Last Updated 10 ಜನವರಿ 2026, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇತರರಿಗೆ ಸಹಾಯ ಮಾಡುವ ವಿಚಾರದಲ್ಲಿ ಮುಂದಾಲೋಚನೆಯಿಲ್ಲದೆ ಮುಂದುವರೆಯುವುದನ್ನು ಬದಲು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಬಾಳಸಂಗಾತಿಯ ಮಾತುಗಳಿಗೆ ನಿಮ್ಮ ಸಹಮತವಿರಲಿ.
  • ವೃಷಭ
  • ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿರುವವರನ್ನು ನೋಡುವ ಅವರಲ್ಲಿ ಮಾತನಾಡುವ ಅವಕಾಶ ನಿಮಗೆ ಸಿಗುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಭಾವನೆಗಳಿಗೆ ಉತ್ತಮ ಪ್ರಶಂಸೆ ಸಿಗುವ ದಿನ ಇದಾಗಿದೆ.
  • ಮಿಥುನ
  • ಶಸ್ತ್ರ ಚಿಕಿತ್ಸೆಯ ವಿಚಾರವಾಗಿ ವೈದ್ಯರ ಮಾತುಗಳನ್ನು ವಿಶೇಷವಾದ ಗಮನವನ್ನು ಇಟ್ಟು ಕೇಳುವುದು ಸೂಕ್ತ. ಬಹಳ ದಿನಗಳ ನಂತರ ಒಂದು ದೃಢವಾದ ನಿರ್ಣಯವನ್ನು ಕೈಗೊಂಡಿರುವ ನಿಮಗೆ ಶುಭವಾಗುವುದು.
  • ಕರ್ಕಾಟಕ
  • ಕಾರ್ಯಕ್ಷೇತ್ರದಲ್ಲಿನ ಹೆಚ್ಚುವರಿ ಕೆಲಸದಿಂದ ಆದ ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಅಗತ್ಯ ಇರುವುದು. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನಿಸಿ. ಸರಕು ಸಾಗಾಣಿಕೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
  • ಸಿಂಹ
  • ನಾನಾ ರೀತಿಯಲ್ಲಿ ಉನ್ನತಿ ಗೋಚರಕ್ಕೆ ಬಂದರೂ ಹಣದ ಖರ್ಚುಗಳ ಲೆಕ್ಕಾಚಾರದ ಬಗ್ಗೆ ಗಮನವಿರಲಿ. ಧೈರ್ಯದಿಂದ ದೊಡ್ಡ ದೊಡ್ಡ ಯೋಜನೆ ಕೈಗೊಳ್ಳಬಹುದು, ಆದರೆ ಹಣದ ವಿಚಾರದಲ್ಲಿ ಎಚ್ಚರ ವಹಿಸಿ.
  • ಕನ್ಯಾ
  • ಅಣ್ಣ-ತಮ್ಮಂದಿರು ಒಂದೇ ವ್ಯವಹಾರದಲ್ಲಿ ಸಂಯಮದಿಂದ ನಡೆದುಕೊಂರೆ ವ್ಯವಹಾರಿಕ ಲಾಭವನ್ನು ಹೊಂದಬಹುದು. ಕೃಷಿಯಲ್ಲಿ ನೀವು ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲೇ ಫಲ ನೀಡಲಿವೆ.
  • ತುಲಾ
  • ಮಕ್ಕಳ ಓದಿನ ವಿಚಾರವಾಗಿ ತೆಗೆದುಕೊಂಡ ನಿರ್ಧಾರ ಸರಿ ಎಂದು ನಿಮಗೆ ಮನವರಿಕೆಯಾಗುವುದು. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಂಭವವಿದೆ.
  • ವೃಶ್ಚಿಕ
  • ಆಹಾರ ಪದಾರ್ಥ, ಉಕ್ಕು (ಕಬ್ಬಿಣ) ಮುಂತಾದ ಗೃಹ ಬಳಕೆ ಸಾಮಾನುಗಳ ವರ್ತಕರಿಗೆ ದಿನದ ಪೂರ್ವದಲ್ಲಿ ಅಧಿಕ ಲಾಭ. ವೈಯಕ್ತಿಕ ವಿಚಾರಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ ಬರಬಹುದು.
  • ಧನು
  • ರಾಜಕೀಯ ವ್ಯಕ್ತಿಗಳಿಗೆ ಸ್ವಂತ ಕ್ಷೇತ್ರದಲ್ಲಿ ದುರಹಂಕಾರಿ ಎನ್ನುವ ಪಟ್ಟ ಸಿಗುವ ಲಕ್ಷಣಗಳಿವೆ. ಬಂಧುಗಳಲ್ಲಿ ಆರ್ಥಿಕ ಸಹಾಯ ಕೇಳಬೇಡಿ. ನೆರೆಯವರ ಸಹಾಯದಿಂದ ಮಗಳ ಮದುವೆ ನಿಶ್ಚಯವಾಗಲಿದೆ.
  • ಮಕರ
  • ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ ಹಾಗೂ ನಿಮ್ಮ ಜೀವನ ಶೈಲಿಯೂ ವಿಭಿನ್ನವಾಗಿ ಬದಲಾಗಲಿದೆ. ಮೀನುಗಾರರು ಅಥವಾ ಸಮುದ್ರ ಪ್ರಯಾಣ ಮಾಡುವವರು ಜಾಗೃತರಾಗಿರಿ. ದಿನಸಿ ವ್ಯಾಪಾರಿಗಳಿಗೆ ಅಲ್ಪ ಲಾಭ.
  • ಕುಂಭ
  • ಮೇಲಧಿಕಾರಿಗಳಿಂದ ಹೆಚ್ಚಿನ ಹೊಸ ಅವಕಾಶಗಳು ಹಾಗೂ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಮನೆಯ ವಿಚಾರಕ್ಕೆ ಸಮಯ ನೀಡಲು ಅವಕಾಶವಾಗುವುದು.
  • ಮೀನ
  • ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಬಿಟ್ಟು ಹೊಸ ತಲೆಮಾರಿನವರು ನೂತನವಾಗಿ ಸಂಬಂಧವನ್ನು ಬೆಳೆಸುವಂತಾಗಲಿದೆ. ಹಿಡಿದ ಕಾರ್ಯವು ಯಾವಾಗ ಮುಗಿಯುವುದೆಂದು ಕಾಣುವ ಮನಸ್ಥಿತಿ ಎದುರಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.