ದಿನ ಭವಿಷ್ಯ: ಈ ರಾಶಿಯ ಗೃಹಿಣಿಯರಿಗೆ ಇಷ್ಟಾರ್ಥಗಳು ಸಿದ್ಧಿಯಾಗುವುದು
ಮಂಗಳವಾರ, 28 ನವೆಂಬರ್ 2023
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಮೇಷ
ನಿಮ್ಮ ಕೆಲವು ಸ್ವಂತ ವಿಚಾರವನ್ನು ಮುಚ್ಚಿಟ್ಟ ಪರಿಣಾಮ ಹಿನ್ನಡೆ ಅನುಭವಿಸಬೇಕಾಗಲಿದೆ. ಪರರ ಟೀಕೆ ಟಿಪ್ಪಣಿಗೆ ಕಿವಿಗೊಡುವ ಮನಸ್ಥಿತಿ ಬದಲಿಸಿಕೊಳ್ಳಬೇಕು. ಸ್ವ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಇವೆ.
ವೃಷಭ
ನಿಮ್ಮ ಹಿರಿಯರ ಅನುಭವದ ಸಲಹೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅಧ್ಯಾಪಕ ವರ್ಗದವರಿಗೆ ವಿದ್ಯಾರ್ಥಿಗಳ ಮೆಲುಗೈಯಿಂದ ಸಂತೋಷ ಸಿಗುವುದು. ವಿದ್ಯಾರ್ಥಿಗಳಿಗೆ ಇಷ್ಟಾರ್ಥ ನೆರವೇರುವುದು.
ಮಿಥುನ
ಜವಾಬ್ದಾರಿಯುತ ನಡುವಳಿಕೆ ಹೊಂದಿದ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ಜೊತೆ ಗೋಪ್ಯವಾದ ವಿಚಾರದ ಸುಳಿವು ದೊರಕುವುದು. ಅಕ್ಕಪಕ್ಕದವರು ನಿಮ್ಮ ಪ್ರಗತಿ ಕಂಡು ಅಸೂಯೆ ಪಡುವರು.
ಕರ್ಕಾಟಕ
ಕುಟುಂಬ ನಿರ್ವಹಣೆಯಲ್ಲಿ ಒಡಹುಟ್ಟಿದವರ ತಪು ಕಲ್ಪನೆಗಳಿಗೆ ನಿಮ್ಮ ಆತ್ಮ ವಿಶ್ವಾಸದ ಮಾತುಗಳು ನಿಜವನ್ನು ತೋರಿಸಿಕೊಡುತ್ತದೆ. ಮುಖ್ಯವಾಗಿ ಸಂಗಾತಿಯ ಮನಸ್ಥಿತಿ ಎದುರಿಸುವುದು ಕಷ್ಟವಾಗುವುದು.
ಸಿಂಹ
ಸತ್ಕಾರ್ಯ ನೆರವೇರಿಸುವ ಬಗ್ಗೆ ಪೂರ್ವಭಾವಿಯಾಗಿ ಕುಟುಂಬದವರೊಡನೆ ದೀರ್ಘ ಸಮಾಲೋಚನೆ ನೆಡೆಸಿಕೊಳ್ಳಬೇಕು. ದೇವತಾ ದರ್ಶನ ಭಾಗ್ಯ ಒದಗಿ ಬರಲಿದೆ. ಜಗನ್ಮಾತೆ ರಾಜರಾಜೇಶ್ವರಿಯನ್ನು ಪ್ರಾಥಿಸಿ.
ಕನ್ಯಾ
ಚಿನ್ನಾಭರಣದ ಮೇಲಿನ ಅಥವಾ ಭೂಮಿ ಮೇಲಿನ ಹೂಡಿಕೆಯು ಲಾಭ ತಂದುಕೊಡಲಿದೆ. ಸರ್ಕಾರಿ ಕೆಲಸ ಕಾರ್ಯ ಲಕ್ಷ್ಮಿವೆಂಕಟರಮಣನ ಅನುಗ್ರಹ ಮತ್ತು ಅಧಿಕಾರಿಗಳ ಸಹಕಾರದಿಂದ ಫಲಪ್ರದವಾಗಿ ನೆಡೆಯುವುದು.
ತುಲಾ
ವೃತ್ತಿಯಲ್ಲಿ ಸ್ವಲ್ಪ ಸವಾಲುಗಳು ಎದುರಾಗಲಿವೆ. ಮಾಡದಿರುವ ತಪ್ಪಿನ ಹೊಣೆಗಾರಿಕೆಯನ್ನು ನೀವು ಹೊರಬೇಕಾಗಬಹುದು. ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಪಡೆಯುವಿರಿ. ಸತ್ಯ ಮಾರ್ಗದಲ್ಲಿ ನಡೆಯಿರಿ.
ವೃಶ್ಚಿಕ
ನಾನಾ ರೀತಿಯಲ್ಲಿ ಅಭಿವೃದ್ಧಿ, ಉನ್ನತಿ ಗೋಚರಕ್ಕೆ ಬಂದರೂ ಲೆಕ್ಕಾಚಾರದ ಬಗ್ಗೆ ಗಮನವಿರಲಿ. ರಾಸಾಯನಿಕ ವಸ್ತುಗಳ ಬಳಕೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಹಿರಿಯರ ಆರೋಗ್ಯದಲ್ಲಿ ಪ್ರಗತಿ ಉಂಟಾಗುತ್ತದೆ.
ಧನು
ಬಂಧುಗಳ ಅವಹೇಳನದ ಮಾತುಗಳು ಸ್ವಂತ ವಾಹನ ಖರೀದಿಸುವ ಸನ್ನಿವೇಶಕ್ಕೆ ನಾಂದಿಯಾಗಲಿದೆ. ಒತ್ತಡದಿಂದಾಗಿ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬವಾಗಲಿದೆ. ಗೃಹಿಣಿಯರಿಗೆ ಇಷ್ಟಾರ್ಥಗಳು ಸಿದ್ಧಿಯಾಗುವುದು.
ಮಕರ
ಕೈಗೊಂಡ ಕೆಲಸಗಳು ಭಾಗಶಃ ಆರ್ಥಿಕ ದುಸ್ಥಿತಿಯಿಂದಾಗಿ ವಿಳಂಬವಾಗಲಿವೆ. ನೀತಿ, ನಿಯಮಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸರಿಯಲ್ಲ. ಹೊಸ ಜನರ ಪರಿಚಯವಾಗಲಿದೆ.
ಕುಂಭ
ಕುಟುಂಬದಲ್ಲಿನ ಕಲಹ, ಮಾನಸಿಕ ಕ್ಷೋಭೆ, ಸಮಸ್ಯೆಗಳು ಹಂತ ಹಂತವಾಗಿ ದೂರವಾಗಲಿವೆ. ಎಲ್ಲರ ಪ್ರೀತಿ ವಿಶ್ವಾಸ ಗೆಲ್ಲುವಂತಾಗಲಿದೆ. ಸರ್ಕಾರಿ ಕೆಲಸದ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗಲಿವೆ.
ಮೀನ
ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಅನಿವಾರ್ಯವಾಗಿ ಗ್ರಾಹಕರಿಗೆ ಮೋಸ ಮಾಡಬೇಕಾದ ಸಂದರ್ಭ ಎದುರಾಗಲಿದೆ. ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಬೇಡ.