ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು

ಬುಧವಾರ, 29 ನವೆಂಬರ್ 2023

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ನವೆಂಬರ್ 2023, 0:00 IST
Last Updated 29 ನವೆಂಬರ್ 2023, 0:00 IST
   
ಮೇಷ
  • ಇಂದಿನ ಕೆಲಸ ನಾಳೆ ಮಾಡಿದಾಯಿತು ಎಂದು ಮುಂದೂಡುವುದು ಸರಿಯಲ್ಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು.
  • ವೃಷಭ
  • ಖರ್ಚು-ವೆಚ್ಚಗಳಲ್ಲಿ ಹಿಡಿತವಿರಲಿ. ಇತರರು ನಿಮ್ಮ ವಿಶ್ವಾಸ ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಎಚ್ಚರವಾಗಿರಿ. ಇಂದು ನಿರೀಕ್ಷೆಗೆ ತಕ್ಕಂತೆ ಶುಭ ಕಾಲ ಕೂಡಿಬರಲಿದೆ. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ.
  • ಮಿಥುನ
  • ಸಂಬಂಧಿಕರ ಅತಿ ವಿಶ್ವಾಸ, ಪ್ರೀತಿಗೆ ಮರುಳಾಗಬೇಡಿ. ನಿಮ್ಮ ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರಿಂದ ಒಳಿತು. ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಪಾಪ ಪರಿಹಾರವಾಗಲಿದೆ.
  • ಕರ್ಕಾಟಕ
  • ಕಾರ್ಯ ರಂಗದಲ್ಲಿ ಸತತ ಪ್ರಯತ್ನ ಮತ್ತು ಅನುಭವಸ್ತರ ಸಹಯೋಗದಿಂದಾಗಿ ಪ್ರಗತಿ ಕಾಣಬಹುದು. ಮನೆಯಲ್ಲಿನ ಅಹಿತರ ಘಟನೆಯಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ.
  • ಸಿಂಹ
  • ಇಂದಿನ ನಿಮ್ಮ ನಡವಳಿಕೆ ಎಲ್ಲರ ಕೇಂದ್ರ ಬಿಂದುವಾಗಲಿದೆ. ಈ ದಿನ ದೊರೆತ ಖ್ಯಾತಿ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನವಿರಲಿ. ಮನರಂಜನೆಗೂ ಸಮಯ ಮೀಸಲಿಟ್ಟು ಮಡದಿ, ಮಕ್ಕಳ ಜತೆ ಸಂಸತದಿಂದ ಇರುವಿರಿ.
  • ಕನ್ಯಾ
  • ಕೊಡು ಕೊಳ್ಳುವಿಕೆಯ ವ್ಯವಹಾರದಿಂದ ಅಧಿಕ ಲಾಭ ಬರಲಿದೆ. ಸಗಟು ವ್ಯಾಪಾರಿಗಳಿಗೆ ಹೇರಳ ವ್ಯಾಪಾರ ಇರುತ್ತದೆ. ರಾಜಕಾರಣಿಗಳು ಚುನಾವಣಾ ದೃಷ್ಟಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮ.
  • ತುಲಾ
  • ತೈಲ ಲೇಪನದಂತಹ ಆಯ್ಕೆಯಿಂದಾಗಿ ಕಾಲು ನೋವು ಸಂಪೂರ್ಣವಾಗಿ ಉಪಶಮನವಾಗಲಿದೆ. ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಅವಕಾಶಗಳಿವೆ. ತೈಲ ಉದ್ಯಮಿಗಳಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ.
  • ವೃಶ್ಚಿಕ
  • ನಂಬಿಕಸ್ಥರಿಂದ ಮೋಸ ಕೃತ್ಯಗಳು ನಡೆಯುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ನಿಮ್ಮ ವ್ಯವಹಾರಗಳ ಬಗ್ಗೆ ನೀವೇ ಹೆಚ್ಚಿನ ಗಮನಹರಿಸುವುದು ಮುಖ್ಯ. ಮನೆಯಲ್ಲಿ ಪರಿಸ್ಥಿತಿಗಳು ಸುಧಾರಿಸಲಿವೆ.
  • ಧನು
  • ಹಣಕಾಸು ಸಂಸ್ಥೆಯ ಜವಾಬ್ದಾರಿ ನೋಡುವವರಿಗೆ ಆತಂಕವಾಗಲಿದೆ. ಮಕ್ಕಳ ಸಂತಸ ಸಡಗರ ಕಂಡು ಮನಸ್ಸಿಗೆ ಸಂತೋಷವಾಗಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ವೇತನದ ನೌಕರಿ ಸಿಗಲಿದೆ.
  • ಮಕರ
  • ಹಲವಾರು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸಲಿದ್ದಾರೆ. ಕೃಷಿ ಮತ್ತು ಹೈನು ಉತ್ಪನ್ನಗಳಲ್ಲಿನ ಹೆಚ್ಚಿನ ವ್ಯಾಪಾರಗಳಿಂದ ಹೇರಳ ಲಾಭವಾಗಲಿದೆ.
  • ಕುಂಭ
  • ಕೌಟುಂಬಿಕ ವಿಷಯಗಳಲ್ಲಿ ಸಹೋದರ, ಸಹೋದರಿಯರ ಪ್ರೀತಿ ವಿಶ್ವಾಸದಿಂದ ಬಹಳ ಖುಷಿ ಸಿಗಲಿದೆ. ವನಸ್ಪತಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಷೇರು ವ್ಯಾಪಾರವು ಇಂದು ಅದೃಷ್ಟದಾಯಕವಾಗಿರುತ್ತದೆ.
  • ಮೀನ
  • ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆ ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ದೈವಬಲ ಒದಗುವುದರಿಂದ ನಿಮ್ಮ ಪ್ರಯತ್ನ ಕಾರ್ಯಗಳೆಲ್ಲ ಹೆಚ್ಚಿನ ಶುಭ ಫಲಗಳನ್ನೇ ನೀಡಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.