ADVERTISEMENT

ವಾರ ಭವಿಷ್ಯ: ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗುವುದು

2026ರ ಜನವರಿ 11ರಿಂದ 18ರ ವರೆಗೆ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 10 ಜನವರಿ 2026, 23:30 IST
Last Updated 10 ಜನವರಿ 2026, 23:30 IST
<div class="paragraphs"><p>ವಾರ ಭವಿಷ್ಯ</p><p></p></div>

ವಾರ ಭವಿಷ್ಯ

   
ಮೇಷ
  • ನಿಮ್ಮ ನಡವಳಿಕೆಯಿಂದಾಗಿ ಮಾಡುವ ಕೆಲಸಗಳಲ್ಲಿ ಸಮಸ್ಯೆಗಳು ಬರಬಹುದು. ಆದಾಯವು ಕಡಿಮೆ ಇರುತ್ತದೆ. ಹಿರಿಯರಿಂದ ಸಾಕಷ್ಟು ಸಹಕಾರ ದೊರೆಯುತ್ತದೆ. ಅನವಶ್ಯ ಚಿಂತೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಉತ್ಸಾಹ ಇರುತ್ತದೆ. ಮಕ್ಕಳಿಗಾಗಿ ಹಣ ಖರ್ಚಾಗುವುದು.
  • ವೃಷಭ
  • ಯಾವುದೇ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ಆದಾಯವು ನಿರೀಕ್ಷೆಯ ಮಟ್ಟ ತಲುಪುತ್ತದೆ. ಒಡಹುಟ್ಟಿದವರೊಡನೆ ಹಣಕಾಸಿನ ವ್ಯವಹಾರಗಳು ಬೇಡ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿಬರುವ ಸಾಧ್ಯತೆಗಳಿವೆ. ಉದ್ಯೋಗ ಬದಲಾವಣೆ ಮಾಡುವ ಮುನ್ನ ಸಾಕಷ್ಟು ಆಲೋಚನೆ ಮಾಡುವುದು ಒಳಿತು. ಖಾದ್ಯ ತೈಲವನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸಿ, ಲಾಭ ಹೆಚ್ಚುತ್ತದೆ. ‌
  • ಮಿಥುನ
  • ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸಂಸಾರದಲ್ಲಿ ಈಗ ಸುಖವಿರುತ್ತದೆ. ಸದಾಕಾಲ ಪಕ್ಕದಲ್ಲಿ ಇರುವವರೇ ನಿಮ್ಮನ್ನು ವಂಚಿಸಬಹುದು ಎಚ್ಚರ. ಗೃಹ ನಿರ್ಮಾಣದ ಕುರಿತು ಆಲೋಚನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಬಟ್ಟೆ ವ್ಯಾಪಾರ ಮಾಡುವವರಿಗೆ ಸ್ವಲ್ಪ ಆದಾಯ ಹೆಚ್ಚುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.
  • ಕರ್ಕಾಟಕ
  • ವಾರದ ಆರಂಭದಲ್ಲಿ ಸಂತೋಷವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಪಶುಸಂಗೋಪನೆ ಮಾಡುವವರ ಆದಾಯ ಹೆಚ್ಚುತ್ತದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು. ಕೆಲವು ರಾಜಕೀಯ ನಾಯಕರುಗಳಿಗೆ ವರಿಷ್ಠರ ಸಂಪರ್ಕ ದೊರೆಯಬಹುದು. ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.
  • ಸಿಂಹ
  • ಮನಸ್ಸು ಗೊಂದಲದ ಗೂಡಾಗಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರದ ಫಲಿತಾಂಶ ಬರುತ್ತದೆ. ಕೆಲಸಗಳಲ್ಲಿ ತಾಂತ್ರಿಕವಾಗಿ ತಪ್ಪಾಗದಂತೆ ಎಚ್ಚರ ವಹಿಸಿ. ತಿರುಗಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಸರ್ಕಾರಿ ಸವಲತ್ತುಗಳು ಈಗ ಸಿಗಲಾರಂಭಿಸುತ್ತವೆ. ಮಾನಸಿಕ ಒತ್ತಡಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.
  • ಕನ್ಯಾ
  • ಆದಾಯವು ಅಗತ್ಯವನ್ನು ಪೂರೈಸುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಕಷ್ಟಪಡಲೇಬೇಕು. ಶ್ವಾಸಕೋಶದ ತೊಂದರೆಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯ ಬೇಜವಾಬ್ದಾರಿತನ ಬೇಸರವನ್ನು ತರಿಸುತ್ತದೆ. ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಉನ್ನತ ಹುದ್ದೆ ಲಭಿಸಬಹುದು.
  • ತುಲಾ
  • ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಕೃಷಿಭೂಮಿ ಕೊಳ್ಳಲು ಸ್ವಲ್ಪ ಹಣ ವಿನಿಯೋಗ ಮಾಡುವಿರಿ. ಬಂಧು ಮಿತ್ರರ ಸಲಹೆಗೆ ಗಮನ ಕೊಡುವುದು ಒಳಿತು. ನಿಮ್ಮ ಒಣ ಪ್ರತಿಷ್ಠೆ ಮತ್ತು ದಡ್ಡತನದ ತೀರ್ಮಾನಗಳಿಂದ ನಷ್ಟ ಅನುಭವಿಸುವಿರಿ. ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ವಿದೇಶಕ್ಕೆ ಹೆಚ್ಚಿನ ಶಿಕ್ಷಣಕ್ಕಾಗಿ ಹೋಗಬೇಕೆನ್ನುವವರಿಗೆ ಅವಕಾಶ ಒದಗಿಬರುತ್ತದೆ.
  • ವೃಶ್ಚಿಕ
  • ನಿಮ್ಮ ವೈಯಕ್ತಿಕ ಬಲದ ಮೇಲೆ ನಂಬಿಕೆ ಇಡಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ಸಿಗುವುದು ಕಡಿಮೆ. ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಮಕ್ಕಳಿಗೆ ಉದ್ಯೋಗದಲ್ಲಿ ಅನುಕೂಲವಾಗುತ್ತದೆ. ಹಳೆ ಸಾಲಗಳು ಈಗ ವಾಪಾಸ್ ಬರುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಬಟ್ಟೆ ನೇಯುವವರಿಗೆ ಹೆಚ್ಚಿನ ಬೇಡಿಕೆ ಮತ್ತು ಲಾಭ ಇರುತ್ತದೆ.
  • ಧನು
  • ಹೆಚ್ಚು ಉತ್ಸಾಹಿಗಳಾಗಿ ಕೆಲಸಮಾಡುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳು ನಿಮ್ಮಿಂದ ಸಹಾಯ ಪಡೆದು, ನಿಮಗೇ ದ್ರೋಹ ಎಸಗಲು ಪ್ರಯತ್ನಿಸುವರು. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಹೆಚ್ಚು ತಿರುಗಾಟದಿಂದ ಆಯಾಸವಾಗಬಹುದು. ನಿಮ್ಮ ಕೆಲವು ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತವೆ.
  • ಮಕರ
  • ಬದುಕಿನಲ್ಲಿ ಹೊಸ ಉತ್ಸಾಹ, ಹುರುಪು ಮೂಡುತ್ತದೆ. ಆದಾಯವು ಕಡಿಮೆ ಇದ್ದರೂ ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಕಾನೂನಿನ ಸಮಸ್ಯೆಗಳು ಸರಾಗವಾಗಿ ಬಗೆಹರಿದು, ಮನಸ್ಸಿಗೆ ನಿರಾಳವೆನಿಸುತ್ತದೆ. ಇಂಧನ ಮಾರಾಟಗಾರರಿಗೆ ಸಾಕಷ್ಟು ಲಾಭ ದೊರೆಯುತ್ತದೆ. ಒಡಹುಟ್ಟಿದವರ ಸಹಕಾರ ನಿರೀಕ್ಷಿತ ಸಮಯದಲ್ಲಿ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ.
  • ಕುಂಭ
  • ‌ಆದಾಯವು ಕಡಿಮೆ ಇರುತ್ತದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಬೆಳ್ಳಿ ವ್ಯಾಪಾರಿಗಳಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಬಹುದಿನಗಳಿಂದ ಮುಂದೂಡುತ್ತಿದ್ದ ದೂರ ಪ್ರಯಾಣ ಈಗ ಸಾಕಾರವಾಗುತ್ತದೆ. ಖರ್ಚಿಗೆ ಕಡಿವಾಣ ಹಾಕುವುದರಿಂದ ಅರ್ಧ ಆರ್ಥಿಕ ಸಂಕಷ್ಟ ನೀಗುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಕೈ ತುಂಬಾ ಕೆಲಸ ದೊರೆಯುತ್ತದೆ.
  • ಮೀನ
  • ವೃತ್ತಿಯಿಂದ ಮಾತ್ರ ಆದಾಯವಿರುತ್ತದೆ. ನಿಮ್ಮ ನಕಾರಾತ್ಮಕ ನಡವಳಿಕೆಯಿಂದ ಜನರೆದುರು ಮುಜುಗರಕ್ಕೆ ಒಳಗಾಗುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮ್ಮ ಪಾಲು ಕಡಿಮೆಯಾಗಬಹುದು. ಐಶಾರಾಮಿ ಖರ್ಚುಗಳ ಬಗ್ಗೆ ಎಚ್ಚರವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

    ADVERTISEMENT