ADVERTISEMENT

ಮೈಸೂರು ಸ್ಯಾಂಡಲ್‌ ಮಾರುಕಟ್ಟೆಗೆ ಡಿಜಿಟಲ್ ಸ್ಪರ್ಶ: ಸಿಎಂ ಸೂಚನೆ

ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್‌ ಶ್ರೀಗಂಧವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:36 IST
Last Updated 22 ಆಗಸ್ಟ್ 2022, 19:36 IST
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಆವರಣದಲ್ಲಿ ಸೋಮವಾರ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್‌ ಶ್ರೀಗಂಧವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಶ್ರೀಗಂಧದ ಗಿಡಕ್ಕೆ ನೀರೆರದರು. (ಎಡದಿಂದ) ಸಚಿವರಾದ ಕೆ.ಗೋಪಾಲಯ್ಯ, ಮುರುಗೇಶ ಆರ್‌. ನಿರಾಣಿ, ಮಾಡಾಳ್‌ ವಿರೂಪಾಕ್ಷಪ್ಪ, ಡಾ.ಎಂ.ಮಹೇಶ್‌ ಹಾಜರಿದ್ದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಆವರಣದಲ್ಲಿ ಸೋಮವಾರ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್‌ ಶ್ರೀಗಂಧವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಶ್ರೀಗಂಧದ ಗಿಡಕ್ಕೆ ನೀರೆರದರು. (ಎಡದಿಂದ) ಸಚಿವರಾದ ಕೆ.ಗೋಪಾಲಯ್ಯ, ಮುರುಗೇಶ ಆರ್‌. ನಿರಾಣಿ, ಮಾಡಾಳ್‌ ವಿರೂಪಾಕ್ಷಪ್ಪ, ಡಾ.ಎಂ.ಮಹೇಶ್‌ ಹಾಜರಿದ್ದರು.   

ಬೆಂಗಳೂರು: ‘ಮೈಸೂರು ಸ್ಯಾಂಡಲ್‌ ಸಾಬೂನು ಕಾರ್ಖಾನೆಯಲ್ಲಿ ಆಧುನಿಕ ಯಂತ್ರೋಪಕರಣ ಅಳವಡಿಸಿಕೊಳ್ಳುವ ಜತೆಗೆ ಮಾರುಕಟ್ಟೆ ವ್ಯವಸ್ಥೆಗೆ ಡಿಜಿಟಲ್‌ ಸ್ಪರ್ಶ ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಆವರಣದಲ್ಲಿ ಸೋಮವಾರ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್‌ ಶ್ರೀಗಂಧವನ ಉದ್ಘಾಟಿಸಿ ಮಾತನಾಡಿದರು.

ಹೊಸ ಚಿಂತನೆ, ಹೊಸ ವ್ಯವಸ್ಥೆ ಅಡಿ ಸಂಸ್ಥೆಯು ಉತ್ಪನ್ನ ತಯಾರಿಸಿದರೆ ಮನೆಮನೆಗೂ ತಲುಪಲು ಸಾಧ್ಯ ಆಗಲಿದೆ. ಇದು ಪೈಪೋಟಿಯ ಯುಗ. ಹಿಂದೂಸ್ಥಾನ್ ಯುನಿಲಿವರ್‌ ಕಂಪನಿ
ಯೊಂದೇ ಶೇ 65ರಷ್ಟು ಮಾರುಕಟ್ಟೆ ವ್ಯಾಪ್ತಿ ಹೊಂದಿದೆ. ಮೈಸೂರು ಸ್ಯಾಂಡಲ್‌ ಸೇರಿ ಉಳಿದ ಸಾಬೂನು ತಯಾರಿಕಾ ಕಂಪನಿಗಳಿಗೆ ಶೇ 35 ಮಾರುಕಟ್ಟೆ ಪಾಲಿದೆ. ಒಂದು ಕಾಲದಲ್ಲಿ ನಿರ್ಮಾ ಸಂಸ್ಥೆಯೇ ಹಿಂದೂಸ್ಥಾನ್ ಯುನಿ ಲಿವರ್‌ಗೆ ಸ್ಪರ್ಧೆ ಒಡ್ಡಿತ್ತು ಎಂದರು.

ADVERTISEMENT

ಮೈಸೂರು ಸ್ಯಾಂಡಲ್‌ ಕಾರ್ಖಾ
ನೆಯು ಸರ್ಕಾರಿ ಸ್ವಾಮ್ಯದಲ್ಲಿ ಲಾಭದಾಯ
ಕವಾಗಿ ಮುನ್ನಡೆಯುತ್ತಿದ್ದರೂ ಉತ್ಪನ್ನ
ಗಳ ತಯಾರಿಕೆಯಲ್ಲಿ ಮತ್ತಷ್ಟು ವೃತ್ತಿಪರತೆ ಅಗತ್ಯ. ಶ್ರೀಗಂಧದ ದ್ರವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರದ ವಿಶೇಷ ವಲಯದಲ್ಲಿ ಖಾಸಗಿ ಸಂಸ್ಥೆಗಳೇ ಉತ್ಪಾದನಾ ಘಟಕ ಆರಂಭಿಸುತ್ತಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯೂ ಅಲ್ಲಿ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸಿ, ಪ್ರತಿ ವರ್ಷ ₹ 10 ಸಾವಿರ ಕೋಟಿ ವಹಿವಾಟು ನಡೆಸಬೇಕು ಎಂದ ಅವರು, ’ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಿದ ಸಂಸ್ಥೆಗಳಿಗೆ ಸಹಾಯಧನ ನೀಡಲಾಗುವುದು. ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳು ಲಭಿಸಬೇಕು’ ಎಂದರು.

ಒಳಗೆ ಏನ್‌ ನಡೆಯುತ್ತಿದೆ ತಿಳಿದಿದೆ:
‘ಕಾರ್ಖಾನೆಯ ಒಳಗೆ ಏನೆಲ್ಲಾ ನಡೆಯು
ತ್ತಿದೆ ಎಂಬುದು ನನಗೆ ತಿಳಿದಿದೆ. ಪ್ರಾಮಾ
ಣಿಕತೆ ಹಾಗೂ ಬದಲಾವಣೆ ತರವುದು ಅಗತ್ಯ. ಮಾಡಾಳ್‌ ವಿರೂಪಾಕ್ಷಪ್ಪ ಅವರು ಒಂದೂವರೆ ವರ್ಷದಿಂದೀಚೆಗೆ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಎಲ್ಲ ನೆರವೂ ನೀಡಲಿದೆ’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.