ADVERTISEMENT

ದರ್ಶನ ದರ್ಪಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಪೂಜ್ಯ ಭಾವನೆ
ವಿಶ್ವನಾಥ ಅಡಿಗರ `ಸಂಕ್ರಾಂತಿಯಲ್ಲಿ ನಾಗಾರಾಧನೆ~ ಲೇಖನ ವಿಶಿಷ್ಟತೆಯ ನಾಗ ಪೂಜಾ ವಿವರಗಳನ್ನು ಅನಾವರಣಗೊಳಿಸಿತ್ತು. ಪ್ರಕೃತಿ ದತ್ತವಾಗಿರುವ ಹಾವು ರೈತ ಮಿತ್ರನಾಗಿದ್ದು, ಅವನ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದೆ. ಇಂತಹ ಒಳ್ಳೆಯ ಕಾರಣಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆರೆಸಿ ಪೂಜ್ಯ ಭಾವನೆ ಬೆಳೆಸಿದ ಅಂಶವೇ ನಾಗಾರಾಧನೆ. ನಾಗಾರಾಧನೆಯ ಅಪೂರ್ವ ಅದ್ಭುತ ಹಬ್ಬಗಳ ಸಾಲು ವಿವರಣೆ ನಿಜಕ್ಕೂ ಉಪಯುಕ್ತ.
 -ಎಚ್.ಆನಂದ ಕುಮಾರ್, ಚಿತ್ರದುರ್ಗ.

ಪ್ರಗತಿಪರ ಚಿಂತನೆ
ಜ. 10ರಂದು ಪ್ರಕಟಗೊಂಡ ಉದಯ.ಯು ಅವರ ದಲಿತರಿಗೆ ದೀಕ್ಷೆ ಕೊಡುವ ಮಠ ಲೇಖನ ತುಂಬಾ ಉಪಯುಕ್ತವಾಗಿದೆ. ಕೇವಲ ಧಾರ್ಮಿಕ ನೆಲೆಗಟ್ಟನ್ನಷ್ಟೇ ಹೊಂದಿರುವ ಇಂದಿನ ಮಠಗಳಿಗೆ ಹೋಲಿಸಿದರೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮತ್ತು ದಲಿತರಿಗೆ ದೀಕ್ಷೆ ಕೊಡುತ್ತಿರುವ ಹಾಗೂ ಪ್ರಗತಿ ಪರ ಚಿಂತನೆ ಹೊಂದಿರುವ ಹೆಗ್ಗಡಹಳ್ಳಿ ಮಠ ನಿಜಕ್ಕೂ ಸಮಾಜಕ್ಕೆ ಉತ್ತಮ ಮಾದರಿ ಎಂಬುದನ್ನು ಲೇಖನ ಸೊಗಸಾಗಿ ಅನಾವರಣಗೊಳಿಸಲಾಗಿದೆ. ಇಂತಹ ಪ್ರಗತಿಪರ ಲೇಖನಗಳು ಪತ್ರಿಕೆಯಲ್ಲಿ ಇನ್ನಷ್ಟು ಪ್ರಕಟಗೊಳ್ಳಲಿ.
 - ಕೆ.ಎಂ. ಶ್ರೀಧರ್, ಮೈಸೂರು.

ವೈಜ್ಞಾನಿಕ ಲೇಖನ
ಜ.10ರ ಕರ್ನಾಟಕ ದರ್ಶನದ 3ನೇ ಪುಟದಲ್ಲಿ ಪ್ರಕಟವಾಗಿರುವ ಈರಪ್ಪ ಹಳಕಟ್ಟಿಯವರ `ಸುಧಾರಿತ ಅಣಬೆ ಅರ್ಕಾ ಒಎಂ-1~ ಎಂಬ ಲೇಖನ ಕೃಷಿಕರಿಗೆ ತುಂಬಾ ಅನುಕೂಲಕರ. 
 -ಎಂ. ಹರೀಶ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.