ಸ್ಫೂರ್ತಿದಾಯಕ
ಅಣ್ಣೇಶ್ವರದ ಗ್ರಾಮೀಣ ನೈರ್ಮಲ್ಯ ಸುಧಾರಣೆಯ ಹಿಂದಿನ ಶ್ರಮ ನಿಜಕ್ಕೂ ಇನ್ನಿತರ ಗ್ರಾಮಗಳಿಗೆ ಸ್ಫೂರ್ತಿ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಭಾಗಿತ್ವ ಗ್ರಾಮದ ಅಭಿವೃದ್ಧಿಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದೂ ಲೇಖನದಿಂದ ತಿಳಿಯುತ್ತದೆ. ಕರ್ನಾಟಕದ ಎಲ್ಲಾ ಗ್ರಾಮಗಳೂ ಈ ಮಾರ್ಗ ಅನುಸರಿಸಿದರೆ ನೈರ್ಮಲ್ಯ ಸುಧಾರಣೆ ಮಾಡಿಕೊಳ್ಳಬಹುದು.
-ಚಿದಂಬರ, ಬೆಂಗಳೂರು
ಶ್ಲಾಘನೀಯ
`ಹಸಿರು ತೋಟದ ನಡುವೆ ಪಾಠ~ ಲೇಖನದಲ್ಲಿ ತಿಳಿಸಿರುವಂತೆ ಆದಿ ಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಸಿ.ಕೆ. ಸುಬ್ಬರಾಯರ ಸಾಧನೆ ಶ್ಲಾಘನೀಯ.ಜತೆಗೆ ತಾಂತ್ರಿಕ ಪಾಠದ ಬೋಧನೆ ಇತರರಿಗೆ ಮಾದರಿ.
-ಎಚ್ ಎನ್. ವಿಶ್ವನಾಥ್, ಶಿವಮೊಗ್ಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.